ಕರ್ನಾಟಕ News

Discover the latest headlines in this section.

ಸೈಕಲ್‌ನಲ್ಲೇ ಕೃಷಿ ಕ್ರಾಂತಿ: ಕಡಿಮೆ ವೆಚ್ಚದಲ್ಲಿ ಕಳೆ ನಿಯಂತ್ರಣಕ್ಕೆ ರೈತನ ಹೊಸ ತಂತ್ರ

ಸೈಕಲ್‌ನಲ್ಲೇ ಕೃಷಿ ಕ್ರಾಂತಿ: ಕಡಿಮೆ ವೆಚ್ಚದಲ್ಲಿ ಕಳೆ ನಿಯಂತ್ರಣಕ್ಕೆ ರೈತನ ಹೊಸ ತಂತ್ರ

ದಾವಣಗೆರೆ: ಕೃಷಿ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ರೈತ ದಂಪತಿಯೊಬ್ಬರು ತಮ್ಮ ಚಾತುರ್ಯದಿಂದ ಹೊಸ ಕೃಷಿ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಹರಿಹರ ತಾಲೂಕಿನ ಎರೆಹೊಸಹಳ್ಳಿ ಗ್ರಾಮದ ರೈತ ಸಂಜೀವಪ್ಪ ರೆಡ್ಡಿ ಮತ್ತು ಅವರ ಪತ್ನಿ, ಬಳಕೆಯಲ್ಲಿರದ ಹಳೆಯ ಸೈಕಲ್‌ಗೆ ಎಡೆಕುಂಟೆ ಅಳವಡಿಸಿ ಮೆಕ್ಕೆಜೋಳದ ಹೊಲದಲ್ಲಿ ಕಳೆ ತೆಗೆಯುವ ಕಾರ್ಯ ನಡೆಸುತ್ತಿದ್ದಾರೆ.ಎತ್ತುಗಳ ಕೊರತೆ, ಬಾಡಿಗೆ ದರದ ಏರಿಕೆ ಹಾಗೂ ಟ್ರ್ಯಾಕ್ಟರ್‌ಗಳಿಗೆ ಬೇಕಾಗುವ ಡೀಸೆಲ್ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆಜೋಳದ ಸಾಲುಗಳ ನಡುವೆ ಸೈಕಲ್ ಆಧಾರಿತ ಕುಂಟೆಯನ್ನು ಚಲಾಯಿಸುವ ಮೂಲಕ ಸುಲಭವಾಗಿ ಕಳೆ ನಿಯಂತ್ರಣ ಮಾಡುತ್ತಿದ್ದಾರೆ.ಈ ವಿಧಾನದಿಂದ ಸಮಯ ಮತ್ತು ಹಣ ಎರಡನ್ನೂ ಉಳಿತಾಯ ಮಾಡಬಹುದು. ಅಲ್ಲದೆ ಸಣ್ಣ ಮತ್ತು ಅಲ್ಪಭೂಧಾರಕ ರೈತರಿಗೆ ಇದು ಉತ್ತಮ ಪರ್ಯಾಯವಾಗಬಹುದು ಎಂದು ಸಂಜೀವಪ್ಪ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.ರೈತನ ಈ ವಿನೂತನ ಆವಿಷ್ಕಾರ ಇದೀಗ ಸುತ್ತಮುತ್ತಲಿನ ರೈತರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಡಿಮೆ ವೆಚ್ಚದ ಕೃಷಿ ತಂತ್ರಜ್ಞಾನಕ್ಕೆ ಮಾದರಿಯಾಗಿದೆ. ಕೃಷಿಯಲ್ಲಿ ಹೊಸ ಆಲೋಚನೆಗಳು ಹಾಗೂ ಸ್ಥಳೀಯ ಸಂಪನ್ಮೂಲಗಳ ಸದುಪಯೋಗದಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು ಎಂಬುದನ್ನು ಈ ರೈತ ದಂಪತಿ ಸಾಬೀತುಪಡಿಸಿದ್ದಾರೆ.

Jun 24, 2026 | 07:10 AM
229 0
ನೆಲಗೆದರನಹಳ್ಳಿ ವಾರ್ಡ್ ಜಿಬಿಎ ಆಕಾಂಕ್ಷಿ,ಕೆ ಅರ್ ಎಸ್ ಪಕ್ಷದ ಕಾರ್ಯದರ್ಶಿಬಿ.ಶಿವಕುಮಾರ್ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ ಗಣ್ಯರು.

ನೆಲಗೆದರನಹಳ್ಳಿ ವಾರ್ಡ್ ಜಿಬಿಎ ಆಕಾಂಕ್ಷಿ,ಕೆ ಅರ್ ಎಸ್ ಪಕ್ಷದ ಕಾರ್ಯದರ್ಶಿಬಿ.ಶಿವಕುಮಾರ್ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ ಗಣ್ಯರು.

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಕರ್ನಾಟಕ ರಾಷ್ಟ್ರ ಸಮಿತಿ (ಕೆ ಅರ್ಎಸ್) ಪಾರ್ಟಿಯ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ, ಬೆ.ಉತ್ತರ ಜಿಲ್ಲೆಯ 2024ರ ಲೋಕಸಭಾ ಆಭ್ಯರ್ಥಿ ,ಸಮಾಜ ಸೇವಕರು ಹಾಗೂ ದಾಸರಹಳ್ಳಿ ಕ್ಷೇತ್ರದ ನೆಲಗೆದರನಹಳ್ಳಿ ವಾರ್ಡ್ ಜಿಬಿಎ ಆಕಾಂಕ್ಷಿ ಶಿವಕುಮಾರ್ ಬಿ ರವರ ಜನ್ಮದಿನವನ್ನು ಅಭಿಮಾನಿಗಳು ಸ್ನೇಹಿತರ ಬಳಗ ಅದ್ದೂರಿಯಾಗಿ ಆಚರಿಸಿದರು.ಈ ವೇಳೆ ಕೆ ಅರ್ ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ ಹಾಗೂ ರಾಜ್ಯಾಧ್ಯಕ್ಷ ದೀಪಕ್, ವೀರಶೈವ ಮುಖಂಡ, ಹೆಚ್ ಎಂ ಟಿ ಲೇಔಟ್ ಸ್ನೇಹ ಜೀವಿ ಬಳಗದ ಅಧ್ಯಕ್ಷ ಎಂ ಕೆ ಜಗದೀಶ್,ಮುಖಂಡರಾದ ಸತೀಶ್ ಆರಾಧ್ಯ,ನಾಗಸಂದ್ರ ನಾಗೇಶ್,ಹರೀಶ್,ಶಿವಣ್ಣ ಮಣಿ ಓಂಕಾರ್ ,ಕುಟುಂಬಸ್ಥರಾದ ಪತ್ನಿ ಲತಾ, ಮಕ್ಕಳಾದ ಲಾವಣ್ಯ,ಸ್ವಾತಿ, ಮತ್ತಿತರ ಗಣ್ಯರು ಭಾಗವಹಿಸಿ ಶಾಲು ಹೊದಿಸಿ,ಮೈಸೂರು ಪೇಟ ತೊಡಿಸಿ ಕೇಕ್ ಕತ್ತರಿಸಿ ಸಿಹಿ ತಿನ್ನಿಸಿ ಹುಟ್ಟುಹಬ್ಬಕ್ಕೆ ಶುಭಕೋರಿದರುವರದಿ : ಪಬ್ಲಿಕ್ ರೈಡ್ ದೇವರಾಜ್

Jun 22, 2026 | 04:06 AM
92 0
ಹುಬ್ಬಳ್ಳಿ ಪೂರ್ವ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಲು ವ್ಯಾಪಾರಿಗಳ ಆಗ್ರಹ

ಹುಬ್ಬಳ್ಳಿ ಪೂರ್ವ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಲು ವ್ಯಾಪಾರಿಗಳ ಆಗ್ರಹ

ಹುಬ್ಬಳ್ಳಿ: ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ನಗರದ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.ನಗರದ ಜವಳಿಸಾಲ ಹಿರೇಪೇಟೆ ವೃತ್ತದಲ್ಲಿ ನಡೆದ ಸಮೂಹ ವರ್ತಕರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.ಸಭೆಯಲ್ಲಿ ಮಾತನಾಡಿದ ಮುಖಂಡರು, ಶಾಸಕ ಪ್ರಸಾದ್ ಅಬ್ಬಯ್ಯ ಅವರು ಹುಬ್ಬಳ್ಳಿ ಪೂರ್ವ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ದಾಖಲಿಸಿರುವುದಲ್ಲದೆ, ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಅವರಂತಹ ಅನುಭವಿಗಳಾದ ನಾಯಕರಿಗೆ ಸಚಿವ ಸ್ಥಾನ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.ಈ ಭಾಗಕ್ಕೆ ಸಚಿವ ಸ್ಥಾನ ದೊರೆತಲ್ಲಿ ಸರ್ಕಾರದ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದು ವ್ಯಾಪಾರಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ತಾರಾದೇವಿ ವಾಲಿ, ವಿಜಯಕುಮಾರ್ ಅಳಗುಂಡಗಿ, ಚಂದ್ರಶೇಖರ ಅಳಗುಂಡಗಿ, ಅನ್ವರ ಮುಧೋಳ, ಮೋಹನ ಸವಣೂರ, ಗೌತಮ ಜೈನ್, ಗೋವಿಂದ ಶರ್ಮಾ, ತೇಜಾರಾಮ್ ಪಾಟೀಲ್, ನರೇಂದ್ರ ಜೈನ್, ಲಲಿತ ಜೈನ್ ಹಾಗೂ ಪತ್ರಕರ್ತ ಜಗದೀಶ್ ಬುರ್ಲಬುಡ್ಡಿ ಸೇರಿದಂತೆ ವರ್ತಕರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Jun 20, 2026 | 07:55 AM
45 0
ಜನರ ಸಮಸ್ಯೆ ಬಗೆಹರಿಸಿದ ಸಾರ್ಥಕತೆ : ಹೆಸ್ಕಾಂ ಅಧ್ಯಕ್ಷ ಖಾದ್ರಿ

ಜನರ ಸಮಸ್ಯೆ ಬಗೆಹರಿಸಿದ ಸಾರ್ಥಕತೆ : ಹೆಸ್ಕಾಂ ಅಧ್ಯಕ್ಷ ಖಾದ್ರಿ

ಅಪಾಯಕಾರಿ 33 ಕೆವಿ ವಿದ್ಯುತ್‌ ಲೈನ್‌ ಸ್ಥಳಾಂತರಶಿಗ್ಗಾಂವಿ, ಜೂ 19, 2026:ಪಟ್ಟಣದ ಮೊಲಾಲಿ ನಗರದ ಜನರ ಹಲವು ವರ್ಷಗಳಿಂದ ಇದ್ದ ಸಮಸ್ಯೆ ಬಗೆಹರಿಸಿದ ಸಾರ್ಥಕ ಸೇವೆಯ ಮನೋಭಾವ ನನ್ನಲ್ಲಿ ಮೂಡಿದೆ ಎಂದು ಹೆಸ್ಕಾಂನ ಅಧ್ಯಕ್ಷರಾದ ಸೈಯದ್‌ ಅಜೀಮ್‌ಪೀರ್‌ ಎಸ್‌ ಖಾದ್ರಿ ಅವರು ಹೇಳಿದ್ದಾರೆ. ಮೊಲಾಲಿ ನಗರದ 33 ಕೆ.ವಿ. ವಿದ್ಯುತ್‌ ಲೈನ್‌ ಸ್ಥಳಾಂತರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮೊಲಾಲಿ ನಗರದ ಮನೆಗಳ ಮೇಲೆ 33 ಕೆ.ವಿ ವಿದ್ಯುತ್‌ ಲೈನ್‌ ಹಾದು ಹೋಗಿದ್ದವು. ಮನೆಗಳ ಛಾವಣಿಗಳ ಮೇಲೆ ಹತ್ತಿದರೆ ಕೈಗೆಟುಕ ಅಂತರದಲ್ಲಿ ಲೈನ್‌ಗಳಿದ್ದವು. ಪರಿಣಾಮ ಹಲವು ಬಾರಿ ವಿದ್ಯುತ್‌ ಅವಘಡಗಳ ಸಂಭವಿಸಿ ಪ್ರಾಣಹಾನಿಯಂತಹ ಘಟನೆಗಳು ಕೂಡ ನಡೆದಿದ್ದವು. ಇದೊಂದು ಗಂಭೀರ ಸಮಸ್ಯೆಯಾಗಿತ್ತು. ಇಲ್ಲಿನ ಜನರು ಸದಾ ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದರು. ಇದೀಗ ಸಮಸ್ಯೆ ಬಗೆಹರಿಸಲಾಗಿದೆ," ಎಂದರು. "ಮೊಲಾಲಿ ನಗರವಾಸಿಗಳು ತಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದರು. ನಾನು ಕೂಡ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದೆ. ಕಳೆದ ಹಲವು ವರ್ಷಗಳಿಂದ ಇದ್ದ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರೂ.38 ಲಕ್ಷ ಅನುದಾನದಲ್ಲಿ ವಿದ್ಯುತ್‌ ಲೈನ್‌ಗಳನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯ ಮಾಡಿದ್ದೇನೆ. ಈ ಮೂಲಕ ಈ ಜನರ ಬಹು ವರ್ಷಗಳ ಸಮಸ್ಯೆಯನ್ನು ಬಗೆಹರಿಸಿದ ಸಂತೋಷ ನನಗಾಗಿದೆ," ಎಂದು ಹೇಳಿದರು.ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು, ಪಟ್ಟಣದ ಹಿರಿಯರು, ಮುಖಂಡರು ಸೇರಿದಂತೆ ಹಲವು ಉಪಸ್ಥಿತರಿದ್ದರು.

Jun 19, 2026 | 04:29 PM
45 0
ಜನರ ಸಮಸ್ಯೆ ಬಗೆಹರಿಸಿದ ಸಾರ್ಥಕತೆ : ಹೆಸ್ಕಾಂ ಅಧ್ಯಕ್ಷ ಖಾದ್ರಿ

ಜನರ ಸಮಸ್ಯೆ ಬಗೆಹರಿಸಿದ ಸಾರ್ಥಕತೆ : ಹೆಸ್ಕಾಂ ಅಧ್ಯಕ್ಷ ಖಾದ್ರಿ

ಅಪಾಯಕಾರಿ 33 ಕೆವಿ ವಿದ್ಯುತ್‌ ಲೈನ್‌ ಸ್ಥಳಾಂತರಶಿಗ್ಗಾಂವಿ, ಜೂ 19, 2026:ಪಟ್ಟಣದ ಮೊಲಾಲಿ ನಗರದ ಜನರ ಹಲವು ವರ್ಷಗಳಿಂದ ಇದ್ದ ಸಮಸ್ಯೆ ಬಗೆಹರಿಸಿದ ಸಾರ್ಥಕ ಸೇವೆಯ ಮನೋಭಾವ ನನ್ನಲ್ಲಿ ಮೂಡಿದೆ ಎಂದು ಹೆಸ್ಕಾಂನ ಅಧ್ಯಕ್ಷರಾದ ಸೈಯದ್‌ ಅಜೀಮ್‌ಪೀರ್‌ ಎಸ್‌ ಖಾದ್ರಿ ಅವರು ಹೇಳಿದ್ದಾರೆ. ಮೊಲಾಲಿ ನಗರದ 33 ಕೆ.ವಿ. ವಿದ್ಯುತ್‌ ಲೈನ್‌ ಸ್ಥಳಾಂತರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮೊಲಾಲಿ ನಗರದ ಮನೆಗಳ ಮೇಲೆ 33 ಕೆ.ವಿ ವಿದ್ಯುತ್‌ ಲೈನ್‌ ಹಾದು ಹೋಗಿದ್ದವು. ಮನೆಗಳ ಛಾವಣಿಗಳ ಮೇಲೆ ಹತ್ತಿದರೆ ಕೈಗೆಟುಕ ಅಂತರದಲ್ಲಿ ಲೈನ್‌ಗಳಿದ್ದವು. ಪರಿಣಾಮ ಹಲವು ಬಾರಿ ವಿದ್ಯುತ್‌ ಅವಘಡಗಳ ಸಂಭವಿಸಿ ಪ್ರಾಣಹಾನಿಯಂತಹ ಘಟನೆಗಳು ಕೂಡ ನಡೆದಿದ್ದವು. ಇದೊಂದು ಗಂಭೀರ ಸಮಸ್ಯೆಯಾಗಿತ್ತು. ಇಲ್ಲಿನ ಜನರು ಸದಾ ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದರು. ಇದೀಗ ಸಮಸ್ಯೆ ಬಗೆಹರಿಸಲಾಗಿದೆ," ಎಂದರು. "ಮೊಲಾಲಿ ನಗರವಾಸಿಗಳು ತಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದರು. ನಾನು ಕೂಡ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದೆ. ಕಳೆದ ಹಲವು ವರ್ಷಗಳಿಂದ ಇದ್ದ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರೂ.38 ಲಕ್ಷ ಅನುದಾನದಲ್ಲಿ ವಿದ್ಯುತ್‌ ಲೈನ್‌ಗಳನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯ ಮಾಡಿದ್ದೇನೆ. ಈ ಮೂಲಕ ಈ ಜನರ ಬಹು ವರ್ಷಗಳ ಸಮಸ್ಯೆಯನ್ನು ಬಗೆಹರಿಸಿದ ಸಂತೋಷ ನನಗಾಗಿದೆ," ಎಂದು ಹೇಳಿದರು.ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು, ಪಟ್ಟಣದ ಹಿರಿಯರು, ಮುಖಂಡರು ಸೇರಿದಂತೆ ಹಲವು ಉಪಸ್ಥಿತರಿದ್ದರು.

Jun 19, 2026 | 04:29 PM
15 0
ಸಮಾಜ ಸೇವೆಗಾಗಿ ನೇಸರ ಫೌಂಡೇಶನ್ ಆರಂಭ

ಸಮಾಜ ಸೇವೆಗಾಗಿ ನೇಸರ ಫೌಂಡೇಶನ್ ಆರಂಭ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ:' ಬಡ ಜನರಿಗೆ ನೆರವಾಗಲು ಮತ್ತು ಸಮಾಜ ಸೇವೆಗೆಂದೇ ನೇಸರ ಫೌಂಡೇಶನ್ ಸ್ಥಾಪಿಸಿರುವುದು ಶ್ಲಾಘನೀಯ ಕಾರ್ಯ'ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.ಹೆಸರಘಟ್ಟ ಮುಖ್ಯ ರಸ್ತೆಯ ಜನಪ್ರಿಯ ಅಪಾರ್ಟ್ಮೆಂಟ್ ಬಸ್ ನಿಲ್ದಾಣದ ಹತ್ತಿರ ವಿಸ್ಟಾ ಸೂಟ್ಸ್ ಬಿಲ್ಡಿಂಗ್ ನಲ್ಲಿ ನೇಸರ ಫೌಂಡೇಶನ್ ಕಚೇರಿ ಉದ್ಘಾಟಿಸಿ ಮಾತನಾಡಿದರು.ಸಮಾಜದ ಏಳಿಗೆಗೆ ಮತ್ತು ಬಡಜನರ ಬಾಳಿಗೆ ಬೆಳಕಾಗಿ ಕೊಡಗೆ ನೀಡಿದಾಗ ಸಿಗುವ ತೃಪ್ತಿ ತಮ್ಮ ಮನೆಗೆ ಮಾಡಿದ ಕಾರ್ಯದಲ್ಲಿ ಸಿಗುವುದಿಲ್ಲ. ಆದ್ದರಿಂದ ಸಂಸ್ಥೆ ನಿಂತ ನೀರಾಗದೆ ಹರಿಯುವ ನೀರಿನಂತೆ ಕ್ರಿಯಾಶೀಲವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಿ'ಎಂದು ಸಲಹೆ ನೀಡಿದರು.ನೇಸರ ಫೌಂಡೇಶನ್ ಸಂಸ್ಥಾಪಕ ಬಿ.ಎಸ್. ಅನಿಲ್ ಕುಮಾರ್ ಮಾತನಾಡಿ,' ಈಗಾಗಲೇ ಆರೋಗ್ಯ ಶಿಬಿರ, ರಕ್ತದಾನ ಶಿಬಿರ,ಮರಬಿದ್ದ ಜಾಗದಲ್ಲಿ ಗಿಡ ನೆಟ್ಟು ಪೋಷಣೆ ಕಾರ್ಯ ಕೈಗೊಂಡಿದ್ದೇವೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು, ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತೇವೆ'ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸುಜಾತ ಮುನಿರಾಜು, ಸ್ವಪ್ನ, ಮಾಜಿ ಉಪಮೇಯರ್ ಹರೀಶ್ ನೂರಾರು ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.  ವರದಿ : ಪಬ್ಲಿಕ್ ರೈಡ್ ದೇವರಾಜ್

Jun 19, 2026 | 03:22 AM
87 0
ಹುಬ್ಬಳ್ಳಿಯ ಹೊಸೂರು ವೃತ್ತದಲ್ಲಿ ಭೀಕರ ಅಪಘಾತ ತಪ್ಪಿದ ಘಟನೆ: ಕ್ಷಣ ಮಾತ್ರದಲ್ಲಿ ಪಾರಾದ ಸ್ಕೂಟಿ ಚಾಲಕ

ಹುಬ್ಬಳ್ಳಿಯ ಹೊಸೂರು ವೃತ್ತದಲ್ಲಿ ಭೀಕರ ಅಪಘಾತ ತಪ್ಪಿದ ಘಟನೆ: ಕ್ಷಣ ಮಾತ್ರದಲ್ಲಿ ಪಾರಾದ ಸ್ಕೂಟಿ ಚಾಲಕ

ಹುಬ್ಬಳ್ಳಿ, ಜೂನ್ 17: ನಗರದ ಹೊಸೂರು ವೃತ್ತದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟಿ ಚಾಲಕನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಸ್ಕೂಟಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಲಾರಿಯ ಕೆಳಗೆ ಸಿಲುಕಿಕೊಂಡಿದೆ. ಆದರೆ ಅಪಾಯವನ್ನು ಅರಿತ ಸ್ಕೂಟಿ ಚಾಲಕ ಕೂಡಲೇ ವಾಹನದಿಂದ ಜಿಗಿದು ಮುಂದೆ ಓಡಿದ ಪರಿಣಾಮ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ.ಘಟನೆಯಿಂದ ಕೆಲಕಾಲ ಹೊಸೂರು ವೃತ್ತದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಸ್ಥಳೀಯರು ಮತ್ತು ವಾಹನ ಸವಾರರು ಘಟನೆಯ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಕುರಿತು ಸ್ಥಳೀಯ ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆಯೇ ಎಂಬ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Jun 17, 2026 | 12:16 PM
285 0
ಜಿಮ್‌ನಿಂದ ಮನೆಗೆ ಬಂದ ಬಾಡಿ ಬಿಲ್ಡರ್‌ಗೆ ಹೃದಯಾಘಾತ; ಮನೆ ಮುಂದೆ ಕುಸಿದು ಬಿದ್ದು ಸಾವು

ಜಿಮ್‌ನಿಂದ ಮನೆಗೆ ಬಂದ ಬಾಡಿ ಬಿಲ್ಡರ್‌ಗೆ ಹೃದಯಾಘಾತ; ಮನೆ ಮುಂದೆ ಕುಸಿದು ಬಿದ್ದು ಸಾವು

ದಾವಣಗೆರೆ: ಜಿಮ್‌ನಲ್ಲಿ ವ್ಯಾಯಾಮ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದ ಯುವ ಬಾಡಿ ಬಿಲ್ಡರ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ದಾವಣಗೆರೆಯಲ್ಲಿ ನಡೆದಿದೆ.ದಾವಣಗೆರೆಯ ಕೆಟಿಜೆ ನಗರದ ನಿವಾಸಿಯಾಗಿದ್ದ ಸುಶೀಲಕುಮಾರ (26) ಮೃತ ದುರ್ದೈವಿ. ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದ ಸುಶೀಲಕುಮಾರ, ಎಂದಿನಂತೆ ಜಿಮ್‌ನಲ್ಲಿ ವ್ಯಾಯಾಮ ಮುಗಿಸಿಕೊಂಡು ಮನೆಗೆ ಬಂದಿದ್ದರು. ಈ ವೇಳೆ ಮನೆಯ ಪ್ರವೇಶ ದ್ವಾರದ ಬಳಿ ಏಕಾಏಕಿ ಕುಸಿದು ಬಿದ್ದಿದ್ದಾರೆ.ತಕ್ಷಣವೇ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಪರೀಕ್ಷಿಸಿದ ವೈದ್ಯರು ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.ಯುವ ವಯಸ್ಸಿನಲ್ಲೇ ಆರೋಗ್ಯವಂತನಾಗಿದ್ದ ಹಾಗೂ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸುಶೀಲಕುಮಾರ ಅವರ ಅಕಾಲಿಕ ನಿಧನ ಸ್ನೇಹಿತರು ಮತ್ತು ಕ್ರೀಡಾ ವಲಯದವರಲ್ಲಿ ಆಘಾತ ಮೂಡಿಸಿದೆ. ಅವರ ಸಾವಿನಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಕೆಟಿಜೆ ನಗರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.ಘಟನೆ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Jun 17, 2026 | 09:32 AM
262 0
No Image

ಬ.ನಾ.ರವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಶ್ರೀ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಹುಟ್ಟುಹಬ್ಬಗಳು ಸಾದನೆಯ ಸಂಕೇತವಾಗಬೇಕು ಮತ್ತಷ್ಟು ಸಾಧಿಸಲು ಪೇರಣೆಯಾಗಬೇಕು.ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಭಿತ್ತಿ ಸಮಾಜ ಸೇವೆಯಲ್ಲಿ ತೊಡಗಿ ತನ್ನ ಸುತ್ತಮುತ್ತಲಿನ ಜನರಿಗ ಸಹಾನುಭೂತಿ ಹೊಂದಿರುತ್ತಾರೋ ಅವರು ಜಗತ್ತಿನಲ್ಲಿ ಉತ್ತಮ ಎಂದು ಹೆಸರುವಾಸಿಯಾಗುತ್ತಾರೆ ಅಂತವರ ಸಾಲಿನಲ್ಲಿ ಬ ನಾ ರವಿ ಸೇರುತ್ತಾರೆ ಅವರು ನೂರ್ಕಾಲ ಅರೋಗ್ಯವಾಗಿ ಬಾಳಲಿ ಎಂದು ಶ್ರೀ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ ಶುಭ ಕೋರಿ ಅರ್ಶೀವಾದ ಮಾಡಿದರು.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿಯ ಪ್ರಭಾವಿ ಕಾಂಗ್ರೆಸ್ ಮುಖಂಡ ಉದ್ಯಮಿ,ವಿದ್ಯಾಭೂಷಣ್ ವಿದ್ಯಾಸಂಸ್ಥೆಯಸಂಸ್ಥಾಪಕ,ಮಾನವೀಯತೆಯುಳ್ಳ,ಸದಾಹಸನ್ಮುಖಿ,ಸಾಧನೆಯ ಹರಿಕಾರ ಬ.ನಾ.ರವಿಗೆ ಜನ್ಮದಿನದ ಸಂಭ್ರಮದಲ್ಲಿ ಕುಣಿಗಲ್ ತಾಲ್ಲೂಕಿನ ಕಿತ್ತಲಿನಾಗಮಂಗಲ ಅರೇಶಂಕರಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ ಭಾಗವಹಿಸಿ ಬ.ನಾ.ರವಿ ಹಾಗೂ ಪಾರ್ವತಿ ಬ.ನಾ.ರವಿ ದಂಪತಿಗಳಿಗೆ ಸನ್ಮಾನಿಸಿ ಅರ್ಶೀವದಿಸಿ ಶುಭಕೋರಿದರು.ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ ಒಬ್ಬ ರೈತನ ಮಗನಾಗಿ ಬೆಂಗಳೂರಿಗೆ ಬಂದ ಬ.ನಾ ರವಿ ಅರ್ಥಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಸದೃಡವಾಗಿ ಎಲ್ಲರ ವಿಶ್ವಾಸಗಳಿಸಿ ಬೆಳೆಯುವುದು ಸುಲಭದ ಮಾತಲ್ಲ ಯೋಗ ಯೋಗ್ಯತೆ ಅಷ್ಟು ಸುಲಭವಾಗಿ ಒಲಿಯುವಿದಿಲ್ಲ ಅಂತಹ ಎಲ್ಲಾ ಯೋಗ್ಯತೆಗಳನ್ನು ಸಂಪಾದಿಸಿ ಜನಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಾಗಿ ಈಗಾಗಲೇ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಮುಂದೆ ಬರುವ ಜಿಬಿಎ ಆಕಾಂಕ್ಷಿಯಾಗಿದ್ದು ಹೆಗ್ಗನಹಳ್ಳಿ ಜನತೆಯ ಅರ್ಶೀವಾದವಿರಲಿ ಎಂದರು.ಈ ಸಂಧರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್, ರೂಪ ಲಿಂಗೇಶ್ವರ್,ಹೆಗ್ಗನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ,ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಜೆಡಿಎನ್ ಜಗದೀಶ್,ಚಲನಚಿತ್ರ ನಿರ್ಮಾಪಕ ದೇವರಾಜ್,ರಾಜ್ಯಕಾರ್ಮಿಕ ವಿಭಾಗ ರಾಜ್ಯ ಕಾರ್ಯದರ್ಶಿ ಎವಿ ರಂಗರಾಜ್, ಹೆಗ್ಗನಹಳ್ಳಿ ಕಾಂಗ್ರೆಸ್ ಮುಖಂಡ ರಮೇಶ್ ಗೌಡ,ಕಾಂಗ್ರೆಸ್ ಪಕ್ಷದ ಸಂಯೋಜಕ ಎಸ್ಸಿ ಎಸ್ಟಿ ರಮೇಶ್,ಕಾರ್ಮಿಕ ಘಟಕದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಮೈಕಲ್ ಬಾಬು,ಶಿವಪುರ ವಾರ್ಡಿನ ಜಿಬಿಎ ಆಕಾಂಕ್ಷಿ ವಿ ಡಿ ಚಿಕ್ಕಣ್ಣ , ಬ ನಾ ಮಧು ಕುಮಾರ್,ಬ ನಾ ಗಿರೀಶ್, ಡಾ.ಅಂಬೇಡ್ಕರ್ ಅಭಿಮಾನಿಗಳ ವೇದಿಕೆ ರಾಜ್ಯಾಧ್ಯಕ್ಷ ಉಮೇಶ್ ರಾವಣ್, ರಾಜ್ಯ ಸಂಚಾಲಕ ರಮೀಜ್ , ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ರಾಜ್ಯಅಧ್ಯಕ್ಷರು ಹೇಮಾ ರಾಜೇಂದ್ರನ್,ಶಿಲ್ಪರಾಣಿ,ಸಲ್ಮಾ, ಹೇಮಾ,ತಾಸೀನಾ ಭಾನು,ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ಶುಭ ಕೋರಿದರು.

Jun 16, 2026 | 12:11 PM
283 0
ಪ್ರಧಾನಿ ಮಂತ್ರಿಗಳ 12 ವರ್ಷ ಪೂರೈಕೆಗೆ ರಕ್ತದಾನ ಮತ್ತು ಉಚಿತ ಆರೋಗ್ಯ ಶಿಬಿರ

ಪ್ರಧಾನಿ ಮಂತ್ರಿಗಳ 12 ವರ್ಷ ಪೂರೈಕೆಗೆ ರಕ್ತದಾನ ಮತ್ತು ಉಚಿತ ಆರೋಗ್ಯ ಶಿಬಿರ

ಪಬ್ಲಿಕ್ ರೈಡ್ ನ್ಯೂಸ್: ಪೀಣ್ಯ ದಾಸರಹಳ್ಳಿ ಸಮೀಪದ ಹೆಸರಘಟ್ಟ ಮುಖ್ಯ ರಸ್ತೆಯ ಜನಪ್ರಿಯ ಅಪಾರ್ಟ್ಮೆಂಟ್ ಬಸ್ ನಿಲ್ದಾಣದ ಹತ್ತಿರ ಪ್ರಧಾನಿ ನರೇಂದ್ರ ಮೋದಿ ಅವರು 12 ವರ್ಷಗಳ ಕಾಲ ಯಶಸ್ವಿ ಆಡಳಿತ ನಡೆಸಿದ ಪ್ರಯುಕ್ತ ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೃಷ್ಣ ನೇತ್ರಾಲಯ ಮತ್ತು ನೇಸರ ಫೌಂಡೇಶನ್ ವತಿಯಿಂದ ಆಯೋಜಿಸಲಾದ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಶಾಸಕ ಎಸ್. ಮುನಿರಾಜು ಪ್ರಶಂಸನಾ ಪತ್ರ,ಹಣ್ಣಿನ ಕಿಟ್ ಮತ್ತು ಕನ್ನಡಕ ನೀಡಿದರು. ಹಾಗೆಯೇ ಶೇಕರಿಸಿದ ರಕ್ತವನ್ನು ಸಪ್ತಗಿರಿ ಆಸ್ಪತ್ರೆಗೆ ನೀಡಿದರು. ನೇಸರ ಫೌಂಡೇಶನ್ ಅಧ್ಯಕ್ಷ ಬಿ.ಎಸ್. ಅನಿಲ್ ಕುಮಾರ್, ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತ ಮುನಿರಾಜು, ಭಾಗ್ಯಮ್ಮ, ಉಮಾದೇವಿ ನಾಗರಾಜು, ಸ್ವಪ್ನ, ಸಿ.ಎನ್. ದಯಾನಂದ್, ಬಿ.ಎಂ. ನಾರಾಯಣ್ ಮುಂತಾದವರಿದ್ದರು.ವರದಿ : ಪಬ್ಲಿಕ್ ರೈಡ್ ದೇವರಾಜ್

Jun 15, 2026 | 01:38 PM
19 0
ಜಮೀನಿನ ಕಾಪೌಂಡ್ ಒಡೆದು ಹಾಕಿದ  ದುಷ್ಕರ್ಮಿಗಳು ಬಂಧಿಸುವಂತೆ ಠಾಣೆ ಮೆಟ್ಟಿಲೇರಿದ ಮಾಲೀಕ.

ಜಮೀನಿನ ಕಾಪೌಂಡ್ ಒಡೆದು ಹಾಕಿದ ದುಷ್ಕರ್ಮಿಗಳು ಬಂಧಿಸುವಂತೆ ಠಾಣೆ ಮೆಟ್ಟಿಲೇರಿದ ಮಾಲೀಕ.

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಜಮೀನು ನನ್ನ ಕ್ರಯಕ್ಕೆ ಬಂದು ಹಲವು ವರ್ಷಗಳೇ ಕಳೆದಿವೆ ಆದರೆ ನಾನೇ  ಮಾಲೀಕ ಅಂತ ಹೇಳಿಕೊಂಡು ಅಕ್ರಮವಾಗಿ ನಾಲ್ಕೈದು ಭಾರಿ ಜಮೀನನ ಹತ್ತಿರ ಬಂದು ರಾತ್ರೋರಾತ್ರಿ ಕಾಂಪೌಂಡ್ ಒಡೆದು ಹಾಕಿ ಜಮೀನನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದು ಈಗಾಗಲೇ ಅವರ ಹಲವು ಮೊಕ್ಕದೊಮ್ಮೆಗಳು ದಾಖಲಾಗಿವೆ.ನ್ಯಾಯಾಲಯದಲ್ಲಿ ಕೂಡ ನನ್ನ ಪರವಾಗಿ ತಡೆಯಾಜ್ಞೆ ಕೂಡ ಬಂದಿದೆ.ಅದರೂ ಕಾನೂನು ಗಾಳಿಗೆ ತೂರಿ ಅಕ್ರಮವೆಸುಗುತ್ತಿದ್ದಾರೆ ಎಂದು ಜಮೀನು ಮಾಲೀಕ ಉಮೇಶ್ ಆರೋಪಿಸಿದರು.ದಾಸರಪುರ ಹೋಬಳಿ ಲಕ್ಷ್ಮೀಪುರ ಗ್ರಾಮಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿರುವ  ಸರ್ವೆನಂ 119/1ರಲ್ಲಿ12ಗುಂಟೆ ಹಾಗೂ 120/1 ರಲ್ಲಿ 08 ಗುಂಟೆ  ಜಮೀನು  ಉಪನೋಂದಣಿ ಕಚೇರಿಯ ಡಿ.ಎಸ್.ಪಿ -1-07528/2010-11 ನೇ ನಂಬರಾಗಿ ನೋಂದಣಿಯಾಗಿದ್ದು ಡಿ,ಎಸ್.ಪಿ ಡಿ - 85  ನೇ ದಾಖಲಾಗಿ ಉಮೇಶ್ ಎಸ್ ಎನ್ ರವರಿಗೆ  ಕ್ರಯವಾಗಿದ್ದು ಸದರಿ ಜಾಗಕ್ಕೆ ಮೂಲ ಮಾಲೀಕ ಅನಗತ್ಯ ಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಠಾಣೆ ಮಟ್ಟಿಲೆರಿದ್ದಾರೆ.  ಮೂಲ ಮಾಲೀಕ ಆಸ್ತಿ ಕ್ರಯದ ನಂತರವೂ ಜಮೀನು ಲಪಾಟಯಿಸಲು ರೌಡಿಗಳನ್ನು ಕರೆರತಂದು ನಮಗೆ ತೊಂದರೆ ಕಿರುಕುಳ ನೀಡುತ್ತಿದ್ದಾನೆ.ರಿಯಲ್ ಎಸ್ಟೇಟ್ ದಂದೆಯಿಂದ ಜಮೀನುಗಳನ್ನು ಹಲವು ಭಾರಿ ಮಾರಾಟ ಮಾಡಲು ಯತ್ನಿಸಿದರಿಂದ ಪೋಲೀಸ್ ಠಾಣೆಯಲ್ಲಿ ದೂರುದಾಖಲಾಗಿವೆ.ಕೂಡಲೇ ಇಂತವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅಗ್ರಹಿಸಿದರು.   ವರದಿ : ಪಬ್ಲಿಕ್ ರೈಡ್ ದೇವರಾಜ್

Jun 15, 2026 | 12:41 PM
123 0