ಧಾರವಾಡ:ರಾಯಾಪುರದಲ್ಲಿರುವ ಎಸ್‌ಜೆಎಂವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಡಾ. ಪುಷ್ಪಾ ಬಸನಗೌಡ ಅವರು ಇಂದು ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ನಿರ್ಗಮಿತ ಪ್ರಾಚಾರ್ಯರಾದ ಡಾ. ರಾಜಶೇಖರಪ್ಪ ಎಂ. ಅವರು ಅಧಿಕಾರವನ್ನು ಹಸ್ತಾಂತರಿಸಿ, ನೂತನ ಪ್ರಾಚಾರ್ಯರಿಗೆ ಶುಭ ಹಾರೈಸಿದರು. ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ಡಾ. ಪುಷ್ಪಾ ಬಸನಗೌಡ ಅವರಿಗೆ ಅಭಿನಂದನೆ ಸಲ್ಲಿಸಿದರು.
ನೂತನ ಪ್ರಾಚಾರ್ಯರ ನೇತೃತ್ವದಲ್ಲಿ ಮಹಾವಿದ್ಯಾಲಯವು ಇನ್ನಷ್ಟು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಪ್ರಗತಿಯನ್ನು ಸಾಧಿಸಲಿ ಎಂದು ಸಿಬ್ಬಂದಿ ವರ್ಗ ಆಶಯ ವ್ಯಕ್ತಪಡಿಸಿತು. ಸಮಾರಂಭವು ಆತ್ಮೀಯ ಹಾಗೂ ಹರ್ಷದ ವಾತಾವರಣದಲ್ಲಿ ನೆರವೇರಿತು.