ಹುಬ್ಬಳ್ಳಿ News

Discover the latest headlines in this section.

ಮನೆಮನೆಗೆ ತಲುಪಿಸಬೇಕಿದ್ದ ಜಾತಿ ಪ್ರಮಾಣ ಪತ್ರಗಳು ಕಚೇರಿಯಲ್ಲೇ?

ಮನೆಮನೆಗೆ ತಲುಪಿಸಬೇಕಿದ್ದ ಜಾತಿ ಪ್ರಮಾಣ ಪತ್ರಗಳು ಕಚೇರಿಯಲ್ಲೇ?

ಹುಬ್ಬಳ್ಳಿ ಮಿನಿವಿಧಾನಸೌಧದಲ್ಲಿ ದಾಖಲೆಗಳ ವಿತರಣೆ ಬಗ್ಗೆ ಗಂಭೀರ ಆರೋಪಹುಬ್ಬಳ್ಳಿ: ರಾಜ್ಯ ಸರ್ಕಾರದ ವತಿಯಿಂದ ಸಾರ್ವಜನಿಕರಿಗೆ ಅಗತ್ಯವಿರುವ ಜಾತಿ, ಆದಾಯ ಹಾಗೂ ಶಾಶ್ವತ ನಿವಾಸ ಪ್ರಮಾಣ ಪತ್ರಗಳನ್ನು ಮನೆಮನೆಗೆ ಉಚಿತವಾಗಿ ತಲುಪಿಸುವ ಉದ್ದೇಶದಿಂದ ಕೈಗೊಂಡಿರುವ ಅಭಿಯಾನದಲ್ಲೇ ಹುಬ್ಬಳ್ಳಿಯಲ್ಲಿ ಗಂಭೀರ ಆರೋಪಗಳು ಕೇಳಿಬಂದಿವೆ.ಕಂದಾಯ ಇಲಾಖೆಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನದಡಿ ಫಲಾನುಭವಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಮನೆಗಳಿಗೆ ತೆರಳಿ ವಿತರಿಸಿ, ಅದರ ವಿವರಗಳನ್ನು ಇಲಾಖೆಯ ಆ್ಯಪ್‌ನಲ್ಲಿ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಮಾಣ ಪತ್ರಗಳನ್ನು ವಿತರಿಸಿದ ಸ್ಥಳದ ಜಿಪಿಎಸ್ ಆಧಾರಿತ ಛಾಯಾಚಿತ್ರವನ್ನು ಪಡೆದು ಆ್ಯಪ್‌ನಲ್ಲಿ ಅಪ್‌ಡೇಟ್ ಮಾಡುವುದು ಕಡ್ಡಾಯ ಎನ್ನಲಾಗುತ್ತಿದೆ.ಆದರೆ ಹುಬ್ಬಳ್ಳಿಯಲ್ಲಿ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನೆಮನೆಗೆ ತೆರಳಿ ಪ್ರಮಾಣ ಪತ್ರಗಳನ್ನು ವಿತರಿಸದೇ, ಯಾವುದೇ ಜಿಪಿಎಸ್ ಫೋಟೋ ತೆಗೆದುಕೊಳ್ಳದೇ, ಇಲಾಖೆಯ ಆ್ಯಪ್‌ನಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ ಎಂದು ದಾಖಲು ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.ಇನ್ನೂ ಗಂಭೀರ ಆರೋಪವೆಂದರೆ, ಹುಬ್ಬಳ್ಳಿಯ ಮಿನಿವಿಧಾನಸೌಧದಲ್ಲಿಯೇ ಜಾತಿ ಪ್ರಮಾಣ ಪತ್ರಗಳ ಗಂಟುಮೂಟೆಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಸಾರ್ವಜನಿಕರಿಗೆ ತಲುಪಬೇಕಿದ್ದ ದಾಖಲೆಗಳು ಕಚೇರಿಯಲ್ಲೇ ಉಳಿದಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಮನೆಮನೆಗೆ ತೆರಳಿ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ ಎಂದು ಇಲಾಖೆಯ ಆ್ಯಪ್‌ನಲ್ಲಿ ದಾಖಲಾಗಿದ್ದರೂ, ವಾಸ್ತವವಾಗಿ ಫಲಾನುಭವಿಗಳಿಗೆ ದಾಖಲೆಗಳು ತಲುಪಿಲ್ಲ ಎಂಬ ಆರೋಪಗಳು ಸತ್ಯವಾಗಿದ್ದರೆ, ಇದು ಕೇವಲ ಕರ್ತವ್ಯ ಲೋಪವಷ್ಟೇ ಅಲ್ಲದೆ ಸರ್ಕಾರಿ ವ್ಯವಸ್ಥೆಯಲ್ಲಿ ತಪ್ಪು ಮಾಹಿತಿ ದಾಖಲಿಸಿರುವ ಗಂಭೀರ ಪ್ರಕರಣವಾಗಲಿದೆ.ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಹಾಗೂ ವಿವಿಧ ಸರ್ಕಾರಿ ಸೇವೆಗಳಿಗೆ ಅಗತ್ಯವಿರುವ ಪ್ರಮಾಣ ಪತ್ರಗಳನ್ನು ಪಡೆಯಲು ಸಾರ್ವಜನಿಕರು ಕಚೇರಿಗಳನ್ನು ಸುತ್ತಾಡುವ ಪರಿಸ್ಥಿತಿ ಎದುರಾಗಬಾರದು ಎಂಬ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗಿದೆ. ಆದರೆ ಅಧಿಕಾರಿಗಳೇ ದಾಖಲೆ ವಿತರಣೆಯ ಬಗ್ಗೆ ತಪ್ಪು ಮಾಹಿತಿ ದಾಖಲಿಸಿದ್ದರೆ, ಯೋಜನೆಯ ಉದ್ದೇಶವೇ ವಿಫಲವಾಗುವ ಸಾಧ್ಯತೆ ಇದೆ.ಹೀಗಾಗಿ ಹುಬ್ಬಳ್ಳಿಯಲ್ಲಿ ನಡೆದಿರುವ ಆರೋಪಗಳ ಕುರಿತು ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಮಗ್ರ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಆ್ಯಪ್‌ನಲ್ಲಿ ದಾಖಲಾಗಿರುವ ಮಾಹಿತಿಗೆ ಸಂಬಂಧಿಸಿದ ಜಿಪಿಎಸ್ ಫೋಟೋಗಳು, ವಿತರಣೆ ವಿವರಗಳು ಹಾಗೂ ಕಚೇರಿಯಲ್ಲಿ ಉಳಿದಿರುವ ಪ್ರಮಾಣ ಪತ್ರಗಳ ಸಂಖ್ಯೆಯನ್ನು ಪರಿಶೀಲಿಸಿದರೆ ವಾಸ್ತವಾಂಶ ಹೊರಬರಬಹುದು.ಸರ್ಕಾರಿ ದಾಖಲೆಗಳಲ್ಲಿ ಸುಳ್ಳು ಮಾಹಿತಿ ದಾಖಲಿಸಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.ಸಾರ್ವಜನಿಕರ ಪರವಾಗಿ ಕೇಳಿಬರುತ್ತಿರುವ ಪ್ರಮುಖ ಪ್ರಶ್ನೆ ಒಂದೇ — ಮನೆಮನೆಗೆ ತಲುಪಬೇಕಿದ್ದ ಪ್ರಮಾಣ ಪತ್ರಗಳು ನಿಜವಾಗಿಯೂ ಫಲಾನುಭವಿಗಳ ಮನೆಗೆ ತಲುಪಿವೆಯೇ? ಅಥವಾ ಕಾಗದದ ಮೇಲಷ್ಟೇ ವಿತರಣೆ ಪೂರ್ಣಗೊಂಡಿದೆಯೇ?ಈ ಆರೋಪಗಳ ಕುರಿತು ಜಿಲ್ಲಾಡಳಿತ ಯಾವ ರೀತಿಯ ತನಿಖೆ ನಡೆಸುತ್ತದೆ ಮತ್ತು ತಪ್ಪಿತಸ್ಥರು ಕಂಡುಬಂದಲ್ಲಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Sep 1, 2026 | 06:25 AM
81 0
ರತ್ನ ಸ್ಕೂಲ್ ಪಕ್ಕದ ವೇಶ್ಯಾವಾಟಿಕೆ ಆರೋಪ ಪ್ರಕರಣಕ್ಕೆ ಶಿಕ್ಷಣ ಇಲಾಖೆ ಎಂಟ್ರಿ

ರತ್ನ ಸ್ಕೂಲ್ ಪಕ್ಕದ ವೇಶ್ಯಾವಾಟಿಕೆ ಆರೋಪ ಪ್ರಕರಣಕ್ಕೆ ಶಿಕ್ಷಣ ಇಲಾಖೆ ಎಂಟ್ರಿ

ಹಳೆ ಹುಬ್ಬಳ್ಳಿ ಪೊಲೀಸರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಹುಬ್ಬಳ್ಳಿ: ನಗರದ ರತ್ನ ಸ್ಕೂಲ್ ಸಮೀಪ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕರಣ ಇದೀಗ ಶಿಕ್ಷಣ ಇಲಾಖೆಯ ಗಮನ ಸೆಳೆದಿದೆ.ಈ ಕುರಿತು ಸ್ಪಂದಿಸಿರುವ ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶೈಕ್ಷಣಿಕ ವಾತಾವರಣ ಕಾಪಾಡುವ ನಿಟ್ಟಿನಲ್ಲಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ.ಶಾಲೆಯ ಸಮೀಪ ಇಂತಹ ಆರೋಪಗಳು ಕೇಳಿಬಂದಿರುವುದು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ಶಿಕ್ಷಣ ಇಲಾಖೆ ಪೊಲೀಸರಿಗೆ ಮನವಿ ಮಾಡಿದೆ.ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ಹಿನ್ನೆಲೆಯಲ್ಲಿ, ಶಾಲಾ ಪರಿಸರ ಸುರಕ್ಷಿತವಾಗಿರುವುದು ಅತ್ಯಂತ ಅಗತ್ಯವಾಗಿದೆ. ಈ ಕಾರಣದಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ, ಯಾವುದೇ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಹಾಗೂ ಸಾರ್ವಜನಿಕರಿಂದ ಬಂದಿರುವ ದೂರುಗಳ ಆಧಾರದ ಮೇಲೆ ಪೊಲೀಸರು ಪರಿಶೀಲನೆ ನಡೆಸುವ ಸಾಧ್ಯತೆ ಇದ್ದು, ಪ್ರಕರಣದ ಸತ್ಯಾಸತ್ಯತೆ ತನಿಖೆಯ ನಂತರವೇ ಹೊರಬೀಳಲಿದೆ.ಶಾಲೆಯ ಪಕ್ಕದಲ್ಲೇ ಇಂತಹ ಆರೋಪಗಳು ಕೇಳಿಬಂದಿರುವುದು ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

Jun 15, 2026 | 01:42 PM
70 0
ನವ ಆನಂದನಗರದಲ್ಲಿ ನಳದಲ್ಲೇ ಹೊಲಸು ನೀರು – ಬಟ್ಟೆ, ಕಸ ಸೇರಿ ಕುಡಿಯಲು ಅಯೋಗ್ಯ

ನವ ಆನಂದನಗರದಲ್ಲಿ ನಳದಲ್ಲೇ ಹೊಲಸು ನೀರು – ಬಟ್ಟೆ, ಕಸ ಸೇರಿ ಕುಡಿಯಲು ಅಯೋಗ್ಯ

ಹುಬ್ಬಳ್ಳಿ: ಹುಬ್ಬಳ್ಳಿಯ ನವ ಆನಂದನಗರದ ನಿವಾಸಿಗಳ ಬಹುದಿನಗಳ ಆಕ್ರೋಶಕ್ಕೆ ಈಗ ನೇರ ಪುರಾವೆ ಸಿಕ್ಕಿದೆ. ಸ್ಥಳೀಯರು ತಮ್ಮ ಮನೆಗಳ ನಳಗಳಲ್ಲಿ (taps) ತುಂಬಿಸಿಕೊಂಡ ನೀರನ್ನು ಬಟ್ಟೆಯಿಂದ ಸಾಣಿಸಿದಾಗ ಕಸ, ಕೊಳೆ ಹಾಗೂ ಹೊಲಸು ಪತ್ತೆಯಾಗಿದೆ. ಅಂದರೆ, ಪೈಪ್ಲೈನ್ ಮೂಲಕವೇ ಮನೆಗಳಿಗೆ ಕಲುಷಿತ ನೀರು ಬರುತ್ತಿದೆ ಎಂಬುದು ಸ್ಪಷ್ಟವಾಗಿದೆ.ನಿವಾಸಿಯೊಬ್ಬರು ಮಾತನಾಡಿ, “ನಾವು ನಳ ತೆರೆದರೆ ಬಣ್ಣ ಬದಲಾದ, ದುರ್ವಾಸನೆಯ ನೀರು ಬರುತ್ತದೆ. ಸಾಣಿ ಬಟ್ಟೆ ಹಿಡಿದಾಗ ಅದರಲ್ಲಿ ಮಣ್ಣು, ತ್ಯಾಜ್ಯ ತುಂಬಿಕೊಂಡು ಬರುತ್ತದೆ. ಅದೇ ನೀರು ಕುಡಿದರೆ ಅನಾರೋಗ್ಯ ಗ್ಯಾರೆಂಟಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಕ್ಷಣದ ಪರಿಹಾರಕ್ಕೆ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ ಆರೋಗ್ಯ ಸಂಕಷ್ಟ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.ನವ ಆನಂದನಗರದಲ್ಲಿ ಕುಡಿಯುವ ನೀರು ಸಂಪೂರ್ಣ ಅಶುದ್ಧವಾಗಿದ್ದು, ನಳದಲ್ಲೇ ಕಸ ಬೆರೆತ ನೀರು ಪೂರೈಕೆಯಾಗುತ್ತಿದೆ. ಇದು ಗಂಭೀರ ನಿರ್ಲಕ್ಷ್ಯಕ್ಕೆ ನಿದರ್ಶನ.

Apr 15, 2026 | 05:27 AM
90 0
ಕೆಜೆಪಿ ಇಲ್ಲದ ಪ್ಲಾಟ್ಗಳಿಗೆ ‘ಎ ಖಾತಾ’: ವಲಯ ಕಚೇರಿ ಸಂಖ್ಯೆ 10 ರಲ್ಲಿ ಭ್ರಷ್ಟಾಚಾರದ ಆರೋಪ

ಕೆಜೆಪಿ ಇಲ್ಲದ ಪ್ಲಾಟ್ಗಳಿಗೆ ‘ಎ ಖಾತಾ’: ವಲಯ ಕಚೇರಿ ಸಂಖ್ಯೆ 10 ರಲ್ಲಿ ಭ್ರಷ್ಟಾಚಾರದ ಆರೋಪ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ ಸಂಖ್ಯೆ 10, ಹೆಗ್ಗೇರಿಯಲ್ಲಿ ಕರ್ನಾಟಕ ಸರ್ಕಾರದ ಯೋಜನಾ ಪ್ರಾಧಿಕಾರದ (ಕೆಜೆಪಿ) ಅನುಮೋದನೆ ಇಲ್ಲದ ಒಂದು ಲೇಔಟ್ನ ನ ಪ್ಲಾಟ್ಗಳಿಗೆ ‘ಎ ಖಾತಾ’ ಮಂಜೂರು ಮಾಡಿರುವ ಆರೋಪ ಕೇಳಿ ಬಂದಿದೆ. ಸಾಮಾನ್ಯ ನಾಗರಿಕರು ಪಾಲಿಕೆ ಕಚೇರಿಗಳಲ್ಲಿ ಅಲೆದಾಡಬೇಕಾಗಿದ್ದರೂ, ಪ್ರಭಾವಿ ವ್ಯಕ್ತಿಗಳು ನಿಯಮಗಳನ್ನು ಕಡೆಗಣಿಸಿ ಸುಲಭವಾಗಿ ‘ಎ ಖಾತಾ’ ಪಡೆದುಕೊಂಡಿರುವುದು ಅನುಮಾನ ಮೂಡಿಸಿದೆ.ಈ ಲೇಔಟ್ನ ಪ್ಲಾಟ್ಗಳಿಗೆ ಕೆಜೆಪಿ ಅನುಮೋದನೆ ಇಲ್ಲದಿರುವುದು ನಿಯಮಗಳ ಉಲ್ಲಂಘನೆಯಾಗಿದೆ. ಸಾಮಾನ್ಯ ನಾಗರಿಕರಿಗೆ ಸಣ್ಣ ದಾಖಲೆಗಳಿಗಾಗಿಯೇ ದಿನಗಟ್ಟಲೆ ಅಲೆಯಬೇಕಾಗುತ್ತದೆ. ಆದರೆ ಇಲ್ಲಿ ಪೂರ್ಣ ದಾಖಲೆಗಳಿಲ್ಲದಿದ್ದರೂ, ವಲಯ ಕಚೇರಿಯು ‘ಎ ಖಾತಾ’ ಮಂಜೂರು ಮಾಡಿದೆ.ಹಿಂದಿನ ಸಹಾಯಕ ಆಯುಕ್ತ ಆಸಂಗಿ ಅವರು ಆ ಲೇಔಟ್ಗೆ ಸಂಬಂಧಿಸಿದ ‘ಎ ಖಾತಾ’ ಅರ್ಜಿಗಳನ್ನು ಕಾನೂನು ಸಲಹೆಗಾರರ ಕಚೇರಿಗೆ ಪರಿಶೀಲನೆಗೆ ಕಳುಹಿಸಿ, ನಂತರವೇ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ಇದೀಗ ಅಧಿಕಾರ ವಹಿಸಿಕೊಂಡಿರುವ ಸಹಾಯಕ ಆಯುಕ್ತ ಸಬರದ್ ಅವರು ಈ ಹಿಂದೆ ಇದೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಯಾವುದೇ ಪರಿಶೀಲನೆಯನ್ನು ಲೆಕ್ಕಿಸದೆ, ದಾಖಲೆಗಳ ಕೊರತೆಯಿದ್ದರೂ ತ್ವರಿತವಾಗಿ ‘ಎ ಖಾತಾ’ ಮಂಜೂರು ಮಾಡಿದ್ದಾರೆ. ಪ್ರಸ್ತುತ ಮತ್ತೆ ಅದೇ ಹುದ್ದೆಯಲ್ಲಿ ವಿರಾಜಮಾನರಾಗಿದ್ದಾರೆ.ಈ ವಿವಾದದಲ್ಲಿ ಲೇಔಟ್ನ ಸಂಬಂಧಿಸಿದ ವಾರ್ಡ್ ನ ವಸೂಲಿಗಾರ ಪಟ್ಟದಕಲ್ಲ ಅವರ ಪಾತ್ರವೂ ಪ್ರಮುಖವಾಗಿದೆ. ಆರೋಪದ ಪ್ರಕಾರ, ಈ ಶುಭ ಕಾರ್ಯದಲ್ಲಿ ಸಹಾಯಕ ಆಯುಕ್ತ ಸಬರದ್ ಅವರ ಸಹಪಾಠಿಯಾಗಿರುವ ಪಟ್ಟದಕಲ್ಲ ಅವರು ಈ ‘ಎ ಖಾತಾ’ ಮಂಜೂರಾತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಅಧಿಕಾರಿ ಮತ್ತು ವಸೂಲಿಗಾರ ನಡುವಿನ ಸ್ನೇಹದ ಆಧಾರದ ಮೇಲೆ ಅಕ್ರಮವನ್ನು ಸಮರ್ಥಿಸಲಾಗಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಕರ್ನಾಟಕ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆ (KTCP Act), 1961 ರ ಸೆಕ್ಷನ್ 14 ಮತ್ತು 17 ರ ಪ್ರಕಾರ, ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಪರಿವರ್ತಿಸಿ ಲೇಔಟ್ ಮಾಡಬೇಕಾದರೆ ಯೋಜನಾ ಪ್ರಾಧಿಕಾರದ (ಕೆಜೆಪಿ) ಪೂರ್ವಾನುಮತಿ ಕಡ್ಡಾಯವಾಗಿದೆ. ಅನುಮೋದನೆ ಇಲ್ಲದ ಯಾವುದೇ ಲೇಔಟ್ ಅಥವಾ ಪ್ಲಾಟ್ಗೆ ‘ಎ ಖಾತಾ’ ನೀಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಲಯ ಕಚೇರಿ ಸಂಖ್ಯೆ 10 ರ ನಿರ್ಧಾರ ಸಂಪೂರ್ಣವಾಗಿ ನಿಯಮಬಾಹಿರವಾಗಿದೆ.ಪ್ರಶ್ನೆಗಳು:- ಕೆಜೆಪಿ ಅನುಮೋದನೆ ಇಲ್ಲದ ಲೇಔಟ್ಗೆ ‘ಎ ಖಾತಾ’ ಮಂಜೂರು ಮಾಡಲು ಸಹಾಯಕ ಆಯುಕ್ತರಿಗೆ ಯಾವ ಅಧಿಕಾರ ಇತ್ತು?- ಹಿಂದಿನ ಸಹಾಯಕ ಆಯುಕ್ತರ ಕಾನೂನು ಪರಿಶೀಲನೆಯ ಆದೇಶವನ್ನು ಏಕೆ ಕಡೆಗಣಿಸಲಾಯಿತು?- ಸಹಾಯಕ ಆಯುಕ್ತ ಸಬರದ್ ಮತ್ತು ವಸೂಲಿಗಾರ ಪಟ್ಟದಕಲ್ಲ ಅವರ ನಡುವಿನ ಸಂಬಂಧದಿಂದ ಈ ನಿರ್ಧಾರ ಪ್ರಭಾವಿತವಾಗಿದೆಯೇ?ಮುಂದಿನ ಕ್ರಮ:ಸಾಕ್ಷಿ ಸಮೇತ ಈ ಪ್ರಕರಣವನ್ನು ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತರಲಾಗುವುದು. ಈ ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲಾ ವ್ಯಕ್ತಿಗಳ ಮುಖವಾಡವನ್ನು ಬಯಲಿಗೆ ತರಲಾಗುವುದು. ಭ್ರಷ್ಟ ಅಧಿಕಾರಿಗಳಿಗೆ ಮತ್ತೆ ಗೇಟ್ ಪಾಸ್ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಪಬ್ಲಿಕ್ ರೈಡ್ _ತಪ್ಪು ಮಾಡಿದರೆ ಬಿಡಲ್ಲ.

Apr 14, 2026 | 09:32 AM
68 0

Apr 12, 2026 | 04:03 PM
197 0
ಇಸ್ರೇಲ್-ಇರಾನ್ ಯುದ್ಧದ ಲೈವ್ ನವೀಕರಣಗಳು: ಯುಎಸ್ ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಲು ಪ್ರಾರಂಭಿಸುತ್ತದೆ ಎಂದು ಟ್ರಂಪ್ ಹೇಳುತ್ತಾರೆ

ಇಸ್ರೇಲ್-ಇರಾನ್ ಯುದ್ಧದ ಲೈವ್ ನವೀಕರಣಗಳು: ಯುಎಸ್ ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಲು ಪ್ರಾರಂಭಿಸುತ್ತದೆ ಎಂದು ಟ್ರಂಪ್ ಹೇಳುತ್ತಾರೆ

U.S. ಉಪಾಧ್ಯಕ್ಷ J.D. ವ್ಯಾನ್ಸ್ ಅವರು ಭಾನುವಾರದಂದು (ಏಪ್ರಿಲ್ 12, 2026) ಪಾಕಿಸ್ತಾನದಲ್ಲಿ ವರದಿಗಾರರಿಗೆ U.S. ಅಧಿಕಾರಿಗಳು ಒಪ್ಪಂದವಿಲ್ಲದೆ ಇರಾನ್‌ನೊಂದಿಗಿನ ಮಾತುಕತೆಗಳನ್ನು ಬಿಟ್ಟು ಯುನೈಟೆಡ್ ಸ್ಟೇಟ್ಸ್‌ಗೆ ಯೋಜಿಸುತ್ತಿದ್ದಾರೆ. ಇದನ್ನೂ ಓದಿ |  ಇರಾನ್ ವಿರುದ್ಧದ ಪ್ರಚಾರವು ಮುಗಿದಿಲ್ಲ, ಅಸ್ತಿತ್ವದ ಬೆದರಿಕೆಗಳನ್ನು ತೆಗೆದುಹಾಕಲಾಗಿದೆ: ನೆತನ್ಯಾಹು ಶ್ರೀ ವಾನ್ಸ್ ಅವರು 21 ಗಂಟೆಗಳಿಗೂ ಹೆಚ್ಚು ಕಾಲ ಹರಡಿದ ತೀವ್ರ ಪ್ರಯತ್ನಗಳ ಹೊರತಾಗಿಯೂ ಎರಡು ಕಡೆ ಭಿನ್ನಾಭಿಪ್ರಾಯಗಳ ಕಂದಕವನ್ನು ನಿವಾರಿಸಲು ಸಾಧ್ಯವಾಗದ ಕಾರಣ ಇರಾನ್‌ನೊಂದಿಗೆ ಇಸ್ಲಾಮಾಬಾದ್ ಮಾತುಕತೆ ವಿಫಲವಾಗಿದೆ ಎಂದು ಹೇಳಿದರು. ಶ್ರೀ ವಾನ್ಸ್ ಅವರು ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು "ನಂಬಲಾಗದ ಅತಿಥೇಯರು" ಎಂದು ಶ್ಲಾಘಿಸಿದರು. ಪ್ರತ್ಯೇಕವಾಗಿ, ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಎಸ್ಮೈಲ್ ಬಕೈ ಅವರು ಎಕ್ಸ್ ಸಂದೇಶದಲ್ಲಿ ಎರಡು ಕಡೆ ಒಪ್ಪಂದ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಮತ್ತು "ಎರಡೂ ಕಡೆಯ ನಡುವೆ ಹಲವಾರು ಸಂದೇಶಗಳು ಮತ್ತು ಪಠ್ಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ" ಎಂದು ದೃಢಪಡಿಸಿದ್ದಾರೆ.

Apr 12, 2026 | 02:20 PM
86 0