ಕರ್ನಾಟಕ

“ಹೊಟ್ಟೆ ತುಂಬಿಸಿದ ಮಕ್ಕಳೇ ಮನೆಯಿಂದ ಎತ್ತಿಕಟ್ಟಿದರು; ಅಸಹಾಯಕ ತಾಯಿಯ ಮೊರೆ ಕೇಳದ ಪೊಲೀಸರು” – ಹೈಕೋರ್ಟ್ ಮೆಟ್ಟಿಲೇರಿದ ಹಿರಿಯ ನಾಗರಿಕೆ

ಮೂಲಕ News Desk | ಪ್ರಕಟಿಸಲಾಗಿದೆ April 21, 2026 April 21, 2026 | 10:09 AM 336 ವೀಕ್ಷಣೆಗಳು

ಧಾರವಾಡ, ಏಪ್ರಿಲ್ 21: ತಮ್ಮದೇ ಗಂಡು ಮಕ್ಕಳು "ವಾಟ್ನಿ" ಮಾಡಿಸಿಕೊಡುವ ನೆಪದಲ್ಲಿ ಆಸ್ತಿಯನ್ನೆಲ್ಲ ಲಪಟಾಯಿಸಿ, ಮನೆಯಿಂದ ಹೊರಹಾಕಿದ್ದಾರೆಂದು ಧಾರವಾಡದ ಜಯನಗರದ ಹಿರಿಯ ನಾಗರಿಕೆ ಶ್ರೀಮತಿ ಮೇಹರುನೀಸಾ ದಿವಾಲ್ದಾರ್ (65) ಆರೋಪಿಸಿದ್ದಾರೆ. ಪ್ರಸ್ತುತ ಹೆಣ್ಣು ಮಕ್ಕಳ ಮನೆಯಲ್ಲಿರುವ ಅವರಿಗೆ, ಗಂಡು ಮಕ್ಕಳು ಅಲ್ಲಿಗೂ ಬಂದು ಬೆದರಿಸಿ ‘ಜಾಗ ಖಾಲಿ ಮಾಡು’ ಎಂದು ಕಿರುಕುಳ ನೀಡುತ್ತಿದ್ದಾರೆ.


ಪ್ರಕರಣ ಹೈಕೋರ್ಟ್ ವಿಚಾರಣೆಯಲ್ಲಿದ್ದರೂ, ಪುತ್ರರು ಆಸ್ತಿಯಲ್ಲಿ ಚಟುವಟಿಕೆ ಮುಂದುವರೆಸಿದ್ದಾರೆ. ಉಪನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಪ್ರಯೋಜನವಾಗಿಲ್ಲ. “ದೂರು ದಾಖಲಿಸುವುದಿಲ್ಲ, ಅವರ ಪರವಾಗಿಯೇ ಮಾತಾಡುತ್ತಾರೆ” ಎಂದು ಮೇಹರುನೀಸಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಆಸ್ತಿ ವಿವರ ಮತ್ತು ವಂಚನೆಯ ಆರೋಪ


ಶ್ರೀಮತಿ ಮೇಹರುನೀಸಾ ಅವರು ತಮ್ಮ ದೂರಿನಲ್ಲಿ ನಿರ್ದಿಷ್ಟವಾಗಿ ತಿಳಿಸಿರುವ ಪ್ರಕಾರ:


ಆಸ್ತಿ ವಿಳಾಸ: ಧಾರವಾಡದ ಸಪ್ತಾಪುರ ಗ್ರಾಮದ ಮಿಚಿಗನ್ ಕಂಪೌಂಡ್, *ಸರ್ವೆ ನಂ. 59/ಎ/1* ರ ಪ್ಲಾಟ್ ನಂ. 17/ಎ (ಕ್ಷೇತ್ರ: 05 ಗುಂಟೆ)

ಆಸ್ತಿಯ ಸ್ವರೂಪ: ಮೃತ್ಯು ಪತ್ರದ (Will) ಮೂಲಕ ತಮಗೆ ಮತ್ತು ತಮ್ಮ ಮಕ್ಕಳಿಗೆ ಜಂಟಿಯಾಗಿ ಬಂದಿರುವ ಸ್ಥಾವರ ಆಸ್ತಿ

- *ವಂಚನೆಯ ದಿನಾಂಕ:* 11.09.2015 ರಂದು ಎದುರುದಾರರು ತಮಗೆ ಮತ್ತು ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಯಾವುದೇ ಮಾಹಿತಿ ನೀಡದೆ, ಕತ್ತಲಲ್ಲಿಟ್ಟು, ಸಹಿಗಳನ್ನು ಬೇರೆ ಉದ್ದೇಶಕ್ಕೆಂದು ಪಡೆದು ನಕಲಿ ಮಾಡಿ *“ವಾಟ್ಟಿ ಪತ್ರ” (Partition Deed)* ಸೃಷ್ಟಿಸಿಕೊಂಡಿದ್ದಾರೆ (ದಸ್ತಾವೇಜು: DWR-1-05768-2015-16)

- *ವಂಚನೆಯ ವಿಧಾನ:* ಒಂದು ಗುಂಟೆ ಜಾಗ ತನಗೆ ಬರುತ್ತದೆಂದು ಹೇಳಿ ಸ್ಥಾವರ ಆಸ್ತಿಯ ವಾಟ್ನಿ ಪತ್ರದೊಳಗೆ *ಬಕ್ಷಿಸ್ ಪತ್ರ* ಮಾಡಿ ಮೋಸ ಮಾಡಲಾಗಿದೆ


ಈ ದಾಖಲೆಯಲ್ಲಿ ತನಗೆ ಸಲ್ಲಬೇಕಾದ ಪಾಲನ್ನು ಕಸಿದುಕೊಂಡು, ಆಸ್ತಿಯನ್ನು ಎದುರುದಾರರು ತಮ್ಮ ತಮ್ಮಲ್ಲೇ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇತ್ತೀಚೆಗೆ ಮಾಹಿತಿ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.



ಪೊಲೀಸ್ ಇಲಾಖೆಯ ಪಾತ್ರವೇನು? – ಕಾನೂನು ಕಡ್ಡಾಯಗೊಳಿಸುವ ರಕ್ಷಣಾ ಕ್ರಮಗಳು


ಹಿರಿಯ ನಾಗರಿಕರ ಸುರಕ್ಷತೆಗಾಗಿ ಹಿರಿಯ ನಾಗರಿಕರು ಮತ್ತು ಪೋಷಕರ ಭರಣಪೋಷಣೆ ಹಾಗೂ ಕಲ್ಯಾಣ ಕಾಯಿದೆ-2007 ಪೊಲೀಸ್ ಇಲಾಖೆಗೆ ಹಲವಾರು ಕಡ್ಡಾಯ ಕರ್ತವ್ಯಗಳನ್ನು ವಿಧಿಸಿದೆ. ಶ್ರೀಮತಿ ಮೇಹರುನೀಸಾ ಅವರಂಥ ಸನ್ನಿವೇಶಗಳಲ್ಲಿ ಪೊಲೀಸರು ಈ ಕೆಳಗಿನ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ:


1. ಕಡ್ಡಾಯ ದೂರು ದಾಖಲಾತಿ ಮತ್ತು ಕ್ರಿಮಿನಲ್ ಪ್ರಕರಣ

ಮಕ್ಕಳಿಂದ ನಿರ್ಲಕ್ಷ್ಯ, ಕಿರುಕುಳ, ಆಸ್ತಿ ವಂಚನೆ ಅಥವಾ ಮನೆಯಿಂದ ಹೊರಹಾಕುವ ಪ್ರಯತ್ನ ನಡೆದಲ್ಲಿ, ಸಂಬಂಧಪಟ್ಟ ಪೊಲೀಸ್ ಠಾಣೆಯು ತಕ್ಷಣ ದೂರು ದಾಖಲಿಸಬೇಕು ಮತ್ತು ಕ್ರಿಮಿನಲ್ ಪ್ರಕರಣವನ್ನು ನೋಂದಾಯಿಸಬೇಕು. ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿರುವಂತೆ, ವಂಚನೆ ಅಥವಾ ನಕಲಿ ದಾಖಲೆ ಪ್ರಕರಣಗಳಲ್ಲಿ ಸಿವಿಲ್ ಮೊಕದ್ದಮೆಯ ಜೊತೆಗೆ ಕ್ರಿಮಿನಲ್ ದೂರು ಸಹ ಸಲ್ಲಿಸಬಹುದಾಗಿದೆ – ಸಿವಿಲ್ ನ್ಯಾಯಾಲಯವು ನಕಲಿ, ವಂಚನೆಯಂತಹ ಕ್ರಿಮಿನಲ್ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ.


2. ನೋಡಲ್ ಅಧಿಕಾರಿ ನೇಮಕ (ಕಾಯಿದೆಯ ಪ್ರಮುಖ ಸೌಲಭ್ಯ)

2019ರ ತಿದ್ದುಪಡಿ ಮಸೂದೆಯ ಪ್ರಕಾರ, ಪ್ರತಿ ಪೊಲೀಸ್ ಠಾಣೆಯಲ್ಲಿ ಸಹಾಯಕ ಉಪನಿರೀಕ್ಷಕ (ASI) ಅಥವಾ ಮೇಲಿನ ದರ್ಜೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು. ಈ ಅಧಿಕಾರಿಯು ಹಿರಿಯ ನಾಗರಿಕರ ಸಮಸ್ಯೆಗಳನ್ನು ಕೇಳಲು ಮತ್ತು ತ್ವರಿತ ಕ್ರಮ ಕೈಗೊಳ್ಳಲು ವಿಶೇಷ ಜವಾಬ್ದಾರಿಯುತನಾಗಿರುತ್ತಾನೆ.


3. ಬಂಧನದ ಅಧಿಕಾರ (ಅರೆಸ್ಟ್ ವಿದೌಟ್ ವಾರಂಟ್)

ಕಾಯಿದೆಯ ಸೆಕ್ಷನ್ 5 ರ ಅಡಿಯಲ್ಲಿ, ಹಿರಿಯ ನಾಗರಿಕರಿಂದ ಮಾಹಿತಿ ಪಡೆದ ನಂತರ, ಅಪರಾಧ ಎಸಗಿದ ವ್ಯಕ್ತಿಯನ್ನು ವಾರಂಟ್ ಇಲ್ಲದೆಯೇ ಬಂಧಿಸುವ ಅಧಿಕಾರ ಪೊಲೀಸರಿಗೆ ಇದೆ.


4. ಹಿರಿಯರ ಮೇಲಿನ ದೈಹಿಕ/ಮಾನಸಿಕ ದೌರ್ಜನ್ಯಕ್ಕೆ ಶಿಕ್ಷೆ

2019ರ ತಿದ್ದುಪಡಿ ಮಸೂದೆಯ ಪ್ರಕಾರ, ದುರುಪಯೋಗ (abuse) – ದೈಹಿಕ, ಮೌಖಿಕ, ಭಾವನಾತ್ಮಕ ಮತ್ತು ಆರ್ಥಿಕ ದುರುಪಯೋಗ – ಸಹ ಅಪರಾಧವಾಗಿದ್ದು, ಇದಕ್ಕೆ 6 ತಿಂಗಳ ಜೈಲು ಅಥವಾ ₹10,000 ದಂಡ ವಿಧಿಸಬಹುದು.


5. ಮಾಸಿಕ ವರದಿ ಕಡ್ಡಾಯ

ಹಿರಿಯ ನಾಗರಿಕರ ವಿರುದ್ಧ ನಡೆಯುವ ಅಪರಾಧಗಳಿಗಾಗಿ ಪೊಲೀಸ್ ಠಾಣೆಗಳು *ಪ್ರತ್ಯೇಕ ರಿಜಿಸ್ಟರ್ ಅನ್ನು ನಿರ್ವಹಿಸಬೇಕು*. ಈ ಅಪರಾಧಗಳ ಮಾಸಿಕ ವರದಿಯನ್ನು ಸಂಬಂಧಪಟ್ಟ ಜಿಲ್ಲಾ ಎಸ್ಪಿ ಅಥವಾ ಆಯುಕ್ತರಿಗೆ ಸಲ್ಲಿಸಬೇಕು.

ಕಾನೂನಿನಲ್ಲಿ ಇಷ್ಟೆಲ್ಲಾ ಅವಕಾಶಗಳು ಇದ್ದರು ಸಹಿತ ಉಪ ನಗರ ಪೊಲೀಸ್ ಠಾಣೆಯಲ್ಲಿ ಶ್ರೀಮತಿ ಮೇಹರುನೀಸಾ ದಿವಾಲ್ದಾರ್ ಅವರ ದೂರು ದಾಖಲಿಸಲು ಹಿಂಜರಿಕೆ ಏಕೆ ಎಂಬುದು ತಿಳಿದುಬರದಹಾಗಿದೆ.


ಶ್ರೀಮತಿ ಮೇಹರುನೀಸಾ ದಿವಾಲ್ದಾರ್ ಅವರ ಪ್ರಕರಣವು ಹಿರಿಯ ನಾಗರಿಕರ ರಕ್ಷಣೆಗೆ ಇರುವ ಕಾನೂನುಗಳ ಅಂತರವನ್ನು ಬಯಲಿಗೆಳೆದಿದೆ. ವಾಟ್ಟಿ ಪತ್ರವು ಸೆಕ್ಷನ್ 23 ರ ವ್ಯಾಪ್ತಿಯಿಂದ ಹೊರತಾಗಿದ್ದು, ಅವರು ಸಿವಿಲ್ ನ್ಯಾಯಾಲಯದ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಆದರೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರಾಕರಿಸಿರುವುದು ಮತ್ತು ಮಕ್ಕಳ ಪರವಾಗಿ ಮಾತನಾಡುತ್ತಿರುವುದು ಗಂಭೀರ ನಿರ್ಲಕ್ಷ್ಯವಾಗಿದೆ.


ನ್ಯಾಯಮೂರ್ತಿ ಸುರಜ್ ಗೋವಿಂದರಾಜ್ ಅವರು ಸೂಚಿಸಿರುವಂತೆ: “ದುರ್ಬಲತೆ, ಅವಲಂಬನೆ ಮತ್ತು ನಂಬಿಕೆಯ ದುರುಪಯೋಗಕ್ಕೆ ಉದಾಸೀನತೆ ತೋರುವ ವಿಧಾನವು ಕಾಯಿದೆಯ ಉದ್ದೇಶವನ್ನು ಸೋಲಿಸುತ್ತದೆ. ಹಿರಿಯ ನಾಗರಿಕರ ರಕ್ಷಣೆಗೆ ಇರುವ ಕಾನೂನುಗಳನ್ನು ಕಾಗದದ ಮೇಲೆ ಮಾತ್ರ ಇರಿಸದೆ, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ.”