ಕರ್ನಾಟಕ News

Discover the latest headlines in this section.

ವಿದ್ಯಾರ್ಥಿಗಳ ಆರೋಗ್ಯದ ಜೊತೆ ಚೆಲ್ಲಾಟ?: ಅಗಡಿ ಕಾಲೇಜಿನ ಅಡುಗೆ ವ್ಯವಸ್ಥೆ ವಿರುದ್ಧ ಆರೋಪ

ವಿದ್ಯಾರ್ಥಿಗಳ ಆರೋಗ್ಯದ ಜೊತೆ ಚೆಲ್ಲಾಟ?: ಅಗಡಿ ಕಾಲೇಜಿನ ಅಡುಗೆ ವ್ಯವಸ್ಥೆ ವಿರುದ್ಧ ಆರೋಪ

ಲಕ್ಷ್ಮೇಶ್ವರ: ಗದಗ್ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಗಂಭೀರ ಅವ್ಯವಸ್ಥೆಗಳು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಕಾಲೇಜಿನ ಹಾಸ್ಟೆಲ್ ಅಡುಗೆ ಕೋಣೆಯಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಆಹಾರ ತಯಾರಿಕೆಗೆ ಬಳಸುವ ರುಬ್ಬುವ ಮಷೀನ್ ಅಸ್ವಚ್ಛ ಸ್ಥಿತಿಯಲ್ಲಿ ಇರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದಲ್ಲದೆ, ವಿದ್ಯಾರ್ಥಿಗಳಿಗೆ ನೀಡಲಾದ ಊಟದಲ್ಲಿ ಜಿರಳೆಗಳು ಪತ್ತೆಯಾಗಿರುವ ಘಟನೆ ವಿದ್ಯಾರ್ಥಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ.ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಬಗ್ಗೆ ಹಲವು ಬಾರಿ ಕಾಲೇಜು ಆಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅಸ್ವಚ್ಛ ವಾತಾವರಣದಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರಲ್ಲಿಯೂ ಆತಂಕ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಒದಗಿಸುವ ಜವಾಬ್ದಾರಿ ಕಾಲೇಜು ಆಡಳಿತದ ಮೇಲಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ಹಾಗೂ ಶಿಕ್ಷಣ ಅಧಿಕಾರಿಗಳು ಕಾಲೇಜಿನ ಅಡುಗೆ ವ್ಯವಸ್ಥೆ ಮತ್ತು ಹಾಸ್ಟೆಲ್ ನಿರ್ವಹಣೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಈ ಘಟನೆ ಕಾಲೇಜಿನ ಆಡಳಿತ ವೈಫಲ್ಯವನ್ನು ಬಯಲಿಗೆಳೆದಿದ್ದು, ವಿದ್ಯಾರ್ಥಿಗಳ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿಬರುತ್ತಿವೆ.

Jun 12, 2026 | 01:26 PM
221 0
ದೇಶಸೇವೆಗೆ ಸಜ್ಜಾದ ಹುಬ್ಬಳ್ಳಿಯ 11 ಅಗ್ನಿವೀರರಿಗೆ ಭವ್ಯ ಸನ್ಮಾನ

ದೇಶಸೇವೆಗೆ ಸಜ್ಜಾದ ಹುಬ್ಬಳ್ಳಿಯ 11 ಅಗ್ನಿವೀರರಿಗೆ ಭವ್ಯ ಸನ್ಮಾನ

ಹುಬ್ಬಳ್ಳಿ, ಜೂನ್ 12: ಭಾರತೀಯ ಸೇನೆಗೆ ಅಗ್ನಿವೀರರಾಗಿ ಆಯ್ಕೆಯಾಗಿರುವ ಹುಬ್ಬಳ್ಳಿಯ 11 ಯುವ ಕ್ರೀಡಾಪಟುಗಳಿಗೆ ಹಾಗೂ ಅಲ್ಟ್ರಾ ಮ್ಯಾನ್ ಸದಾನಂದ ಅಮರಾಪುರ ಅವರಿಗೆ ನಗರದ ಶ್ರೀ ಕಾರುಣ್ಯ ಸ್ಪೋರ್ಟ್ಸ್ ಅಸೋಸಿಯೇಶನ್ ಮತ್ತು ಮಾತೃಸ್ವರೂಪಿ ಶ್ರೀಮತಿ ಗಂಗವ್ವ ಬಳ್ಳಾರಿ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಅದ್ಧೂರಿ ಸನ್ಮಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯೆ ಸೀಮಾ ಸಿದ್ದು ಮೊಗಲಿಶೆಟ್ಟರ ಹಾಗೂ ಸಮಾಜಸೇವಕ ಸಿದ್ದು ಮೊಗಲಿಶೆಟ್ಟರ, ಯುವಕರು ಕ್ರೀಡೆ ಮತ್ತು ಶಿಸ್ತಿನ ಮೂಲಕ ದೇಶಸೇವೆಗೆ ಮುಂದಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಚಾರಿ ವಿಭಾಗದ ಎಸಿಪಿ ವೀರನಗೌಡ ಪಾಟೀಲ, ಸೇನೆಗೆ ಆಯ್ಕೆಯಾದ ಯುವಕರು ಸಮಾಜಕ್ಕೆ ಮಾದರಿಯಾಗಿದ್ದು, ಇತರ ಯುವಕರಿಗೂ ಸ್ಫೂರ್ತಿಯಾಗಲಿದ್ದಾರೆ ಎಂದು ಶ್ಲಾಘಿಸಿದರು. ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಡಾ. ಜ್ಯೋತಿರ್ಲಿಂಗ ಹೊನಕಟ್ಟಿ ಅವರು ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಯುವಕರು ಈ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅಗ್ನಿವೀರರ ಯಶಸ್ಸಿನ ಹಿಂದೆ ತರಬೇತುದಾರ ಮಹಾಂತೇಶ ಬಳ್ಳಾರಿ ಅವರ ಪರಿಶ್ರಮ ಮತ್ತು ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ. ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಉಚಿತ ಕ್ರೀಡಾ ಹಾಗೂ ರಕ್ಷಣಾ ಪಡೆಗಳ ತರಬೇತಿ ನೀಡುವ ಮೂಲಕ ಅವರು ಅನೇಕ ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ.ಸನ್ಮಾನ ಸ್ವೀಕರಿಸಿದ ಅಗ್ನಿವೀರರು ತಮ್ಮ ಸಾಧನೆಗೆ ಕುಟುಂಬದ ಬೆಂಬಲ ಮತ್ತು ಮಹಾಂತೇಶ ಬಳ್ಳಾರಿ ಅವರ ಮಾರ್ಗದರ್ಶನವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ದೇಶದ ಗಡಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಸಂಕಲ್ಪವನ್ನೂ ವ್ಯಕ್ತಪಡಿಸಿದರು.ಈ ವೇಳೆ ಅಲ್ಟ್ರಾ ಮ್ಯಾನ್ ಸದಾನಂದ ಅಮರಾಪುರ ಮಾತನಾಡಿ, ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನದಿಂದ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ಯುವಕರಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ನಗರದ ಹಲವು ಗಣ್ಯರು, ಕ್ರೀಡಾಭಿಮಾನಿಗಳು, ಪಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸಾಧಕರಿಗೆ ಅಭಿನಂದನೆ ಸಲ್ಲಿಸಿದರು. ಗೀತಾ ತಡಸದ ಕಾರ್ಯಕ್ರಮ ನಿರೂಪಿಸಿದರೆ, ಮುತ್ತಣ್ಣ ಸುರಪುರ ವಂದನಾರ್ಪಣೆ ನೆರವೇರಿಸಿದರು.

Jun 12, 2026 | 12:49 PM
158 0
ನಾಗರಿಕಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಿ: ಡಾ. ರಾಮ್ ಪ್ರಸಾತ್ ಮನೋಹರ

ನಾಗರಿಕಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಿ: ಡಾ. ರಾಮ್ ಪ್ರಸಾತ್ ಮನೋಹರ

ಧಾರವಾಡ, ಜೂ.11: ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಕುರಿತು ಸಮರ್ಪಕ ಮಾಹಿತಿ ಒದಗಿಸಿ ನಾಗರಿಕಸ್ನೇಹಿ ಆಡಳಿತಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಂಗಾರು ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ರೈತರಿಗೆ ಬೀಜ-ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸುವುದು, ಎಲ್ಲ ರೈತರನ್ನು ಫ್ರೂಟ್ಸ್ ಐಡಿ ನೋಂದಣಿಗೆ ಒಳಪಡಿಸುವುದು ಹಾಗೂ ಪರಿಹಾರ ವಿತರಣೆಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಿಲ್ಲೆಯ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳಗಳಿಂದ 35 ಗ್ರಾಮ ಪಂಚಾಯಿತಿಗಳ 56 ಗ್ರಾಮಗಳು ಪ್ರವಾಹದ ಅಪಾಯಕ್ಕೆ ಒಳಪಡುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ 71 ಕಾಳಜಿ ಕೇಂದ್ರಗಳು ಹಾಗೂ 6 ಗೋಶಾಲೆಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ 22 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ 45 ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನು ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯತ್ ಸಿಇಒ ಭುವನೇಶ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Jun 12, 2026 | 10:58 AM
24 0
ಕೆಎಂಸಿ ಆಸ್ಪತ್ರೆಯ ಡಿ-ಗ್ರೂಪ್ ಸಿಬ್ಬಂದಿಗಳ ಸಮಸ್ಯೆಗಳಿಗೆ ಸ್ಪಂದಿಸಿದ ಸಫಾಯಿ ಕರ್ಮಚಾರಿ ಸಂಘ

ಕೆಎಂಸಿ ಆಸ್ಪತ್ರೆಯ ಡಿ-ಗ್ರೂಪ್ ಸಿಬ್ಬಂದಿಗಳ ಸಮಸ್ಯೆಗಳಿಗೆ ಸ್ಪಂದಿಸಿದ ಸಫಾಯಿ ಕರ್ಮಚಾರಿ ಸಂಘ

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಹಾಗೂ ಬಡವರ ಬಂಧು ಆಸ್ಪತ್ರೆಯೆಂದು ಹೆಸರುವಾಸಿಯಾಗಿರುವ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ-ಗ್ರೂಪ್ ಸಿಬ್ಬಂದಿಗಳು ಹಲವು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿರುವ ಆರೋಪ ಕೇಳಿಬಂದಿದೆ.ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಸಂಬಂಧಿಸಿದ ಏಜೆನ್ಸಿಯಿಂದ ಭವಿಷ್ಯ ನಿಧಿ (PF), ನೌಕರರ ರಾಜ್ಯ ವಿಮೆ (ESI), ಸಮರ್ಪಕ ವೇತನ ಸೇರಿದಂತೆ ಕಾನೂನುಬದ್ಧವಾಗಿ ದೊರೆಯಬೇಕಾದ ವಿವಿಧ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ ಎಂದು ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಅನೇಕ ಸಿಬ್ಬಂದಿಗಳು ಆರ್ಥಿಕ ಹಾಗೂ ವೃತ್ತಿಪರ ಸಂಕಷ್ಟಗಳನ್ನು ಎದುರಿಸುವಂತಾಗಿದೆ.ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದಕ್ಕೆ ಸಿಬ್ಬಂದಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಸ್ವಚ್ಛತೆ ಹಾಗೂ ನಿರ್ವಹಣೆಯಲ್ಲಿ ಡಿ-ಗ್ರೂಪ್ ಸಿಬ್ಬಂದಿಗಳ ಪಾತ್ರ ಮಹತ್ವದ್ದಾಗಿದ್ದು, ಅವರ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಆಸ್ಪತ್ರೆಯ ಕಾರ್ಯವೈಖರಿಯ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಿಬ್ಬಂದಿಗಳು ಅಭಿಪ್ರಾಯಪಟ್ಟಿದ್ದಾರೆ.ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಫಾಯಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಹುಬ್ಬಳ್ಳಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕ ಎಚ್.ಎಫ್. ಕಮ್ಮಾರ ಅವರನ್ನು ಭೇಟಿಯಾಗಿ ಸಿಬ್ಬಂದಿಗಳ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಿದರು.ಸಭೆಯಲ್ಲಿ ಸಿಬ್ಬಂದಿಗಳಿಗೆ ಸಮರ್ಪಕ ವೇತನ, ಪಿಎಫ್, ಇಎಸ್‌ಐ ಸೇರಿದಂತೆ ಕಾನೂನುಬದ್ಧವಾಗಿ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಅಧಿಕಾರಿಗಳು ಸಿಬ್ಬಂದಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮುಂದಾಗುವುದಾಗಿ ಭರವಸೆ ನೀಡಿದರು.ಇನ್ನೂ ಮುಂದೆಯೂ ಸಿಬ್ಬಂದಿಗಳಿಗೆ ಸೂಕ್ತ ಸೌಲಭ್ಯಗಳು ದೊರೆಯದಿದ್ದಲ್ಲಿ, ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದು ಆಸ್ಪತ್ರೆ ಆಡಳಿತದ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಸಫಾಯಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಹುಬ್ಬಳ್ಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Jun 12, 2026 | 09:39 AM
44 0
ಬಂಡೀಪುರದಲ್ಲಿ ವನ್ಯಜೀವಿ ಬೇಟೆ: ಇಬ್ಬರ ಬಂಧನ

ಬಂಡೀಪುರದಲ್ಲಿ ವನ್ಯಜೀವಿ ಬೇಟೆ: ಇಬ್ಬರ ಬಂಧನ

ಬಂಡೀಪುರ:ವನ್ಯಜೀವಿಗಳನ್ನು ಅಕ್ರಮವಾಗಿ ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೀಪುರ ವಿಶೇಷ ಕಾರ್ಯಪಡೆ (STF) ಸಿಬ್ಬಂದಿ ಬಂಧಿಸಿದ್ದಾರೆ.ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ STF ಅಧಿಕಾರಿಗಳು, ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ ಬೇಟೆಯಾಡಲು ಬಳಸುತ್ತಿದ್ದ ಕೋವಿ, ಜೀವಂತ ಗುಂಡುಗಳು ಹಾಗೂ ಇತರೆ ಬೇಟೆ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.ಆರೋಪಿಗಳು ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಬೇಟೆಗೆ ಸಂಚು ರೂಪಿಸಿದ್ದರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ವನ್ಯಜೀವಿಗಳ ಬೇಟೆ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Jun 11, 2026 | 11:30 AM
37 0
ವಿದ್ಯುತ್‌ ಅವಘಡ ತಡೆಗೆ ಸಹಾಯವಾಣಿ ಲಭ್ಯ

ವಿದ್ಯುತ್‌ ಅವಘಡ ತಡೆಗೆ ಸಹಾಯವಾಣಿ ಲಭ್ಯ

ಮಳೆ-ಗಾಳಿಯಿಂದ ವಿದ್ಯುತ್‌ ಅವಘಡ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮದಾಂಡೇಲಿ-ಜೋಯಿಡಾ ತಾಲೂಕಿನ ಜನರಿಗಾಗಿ ಸಹಾಯವಾಣಿದಾಂಡೇಲಿ :ಮಳೆಗಾಲದಲ್ಲಿ ಎದುರಾಗುವ ವಿದ್ಯುತ್‌ ಅವಘಡ ತಡೆಯಲು ಹೆಸ್ಕಾಂ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದಾಂಡೇಲಿ ಉಪವಿಭಾಗದ ದಾಂಡೇಲಿ ಹಾಗೂ ಜೋಯಿಡಾ ತಾಲೂಕಿಗೆ ಸಹಾಯವಾಣಿ ಲಭ್ಯವಿರಲಿದೆ ಎಂದು ತಿಳಿಸಿದೆ.  ಈ ಕುರಿತು ಪ್ರಕಟಣೆ ಹೊರಡಿಸಿರುವ ದಾಂಡೇಲಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರು, ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳ ಸಂಭವ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿಗಳು ಲಭ್ಯವಿರಲಿವೆ ಎಂದಿದ್ದಾರೆ. ದಾಂಡೇಲಿ ತಾಲೂಕಿನ ಡಾಂಡೇಲಿ ( ಸಿಎಂಸಿ ಏರಿಯಾ), ಅಂಬೇವಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಖಾಧಿಕಾರಿಯ ನಂ 9480881764, 24x7 ಸಹಾಯವಾಣಿ 08284/231239 ಹಾಗೂ ಅಂಬೇವಾಡಿ, ಬಡಕಾನಶಿರಡಾ, ಅಂಬಿಕಾನಗರ ಮತ್ತು ಆಲೂರು ಗ್ರಾ.ಪಂ ವ್ಯಾಪ್ತಿಯ ಶಾಖಾಧಿಕಾರಿ ಸಂಖ್ಯೆ 9480881778 ಹಾಗೂ 220 ಕೆ.ವಿ ಸ್ವೀಕರಣಾ ಕೇಂದ್ರ ಅಂಬೇವಾಡಿ ಗ್ರೀಡ್‌ ಸಹಾಯವಾಣಿ ಸಂಖ್ಯೆ 9448491710, ಆಫೀಸ್‌ ನಂ 08284/295666ಗೆ ಸಂಪರ್ಕಿಸಬಹುದು. ಜೋಯಿಡಾ ತಾಲೂಕಿನ ಅವೇಡಾ, ಜಗಲಬೆಟ, ಶಿಂಗರಗಾಂವ್‌  ಗ್ರಾಮೀಣ ಶಾಖೆಯ ಶಾಖಾಧಿಕಾರಿ 9480881778, ಗಣೇಶಗುಡಿಯ 110 ಕೆ.ವಿ ವಿತರಣಾ ಕೇಂದ್ರ ಮೊ.ನಂ 8277891912, ನಾಗೋಡಾ, ನಂದಿಗದ್ದಾ, ಅಣಶಿ, ಪ್ರಧಾನಿ, ಜೋಯಿಡಾ, ಕಾತೇಲಿ, ಉಳವಿ, ಅವೇಡಾ(ಇಳವಾ), ಗಂಗೋಡಾ ಗ್ರಾ.ಪಂ ವ್ಯಾಪ್ತಿಯ ಶಾಖಾಧಿಕಾರಿ ನಂ 9480881779, ಜೋಯಿಡಾದ 33 ಕೆ.ವಿ ವಿತರಣಾ ಕೇಂದ್ರದ ಮೊ.ನಂ 9480883822. ರಾಮನಗರ ಶಾಖೆಯ  ರಾಮನಗರ, ಕ್ಯಾಸಲರಾಕ್‌, ಬಜರಾಕೊಣಂಗ, ಅಖೆತಿ, ಅಸು ಗ್ರಾ.ಪಂ ವ್ಯಾಪ್ತಿಯ ಶಾಖಾಧಿಕಾರಿ ಮೊ.ನಂ 9980151401, ಅನಮೋಡ್‌ 110 ಕೆ.ವಿ ವಿತರಣಾ ಕೇಂದ್ರದ ಮೊ.ನಂ 8277891915ಗೆ ಸಂಪರ್ಕಿಸಬಹುದು.  ಗಾಳಿ-ಮಳೆಗೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದರೆ, ವಿದ್ಯುತ್‌ ಲೈನ್‌ ಮೇಲೆ ಮರ-ಗಿಡಗಳು ಬಿದ್ದಿದ್ದರೆ, ವಿದ್ಯುತ್‌ ತಂತಿ ತುಂಡಾಗಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಈ ಮೇಲಿನ ಸಹಾಯವಾಣಿಗಳ ಮೂಲಕ ಸಂಬಂಧಪಟ್ಟ ಶಾಖಾಧಿಕಾರಿಗಳ ಹಾಗೂ ಗ್ರಿಡ್‌ಗಳಿಗೆ ಸಂಪರ್ಕಿಸಬಹುದು. ಒಂದು ವೇಳೆ ಕಾರಣಾಂತರಗಳಿಂದ ಶಾಖಾಧಿಕಾರಿಗಳು ಸಂಪರ್ಕಕ್ಕೆ ಸಿಗದೇ ಇರುವ ಸಂದರ್ಭದಲ್ಲಿ ಹೆಸ್ಕಾಂನ 24x7 ಸಹಾಯವಾಣಿ ಸಂಖ್ಯೆ 1912ಗೆ ಅಥವಾ ಹೆಸ್ಕಾಂ ದಾಂಡೇಲಿ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್‌ ಅವರ ಮೊ.ನಂ 9448141725ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

Jun 11, 2026 | 07:46 AM
31 0
52 ವರ್ಷ ತುಂಬಿದ ಶಿವಕುಮಾರ ಮೇಟಿ ಅವರಿಗೆ ಜನ್ಮದಿನದ ಶುಭ ಹಾರೈಕೆ

52 ವರ್ಷ ತುಂಬಿದ ಶಿವಕುಮಾರ ಮೇಟಿ ಅವರಿಗೆ ಜನ್ಮದಿನದ ಶುಭ ಹಾರೈಕೆ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಉತ್ತರ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಮೇಟಿ ಅವರ 52ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳನ್ನು ಶ್ರೀ ವೀರಶೈವ ಲಿಂಗಾಯತ ವೇದಿಕೆ ಚಿಕ್ಕಬಾಣಾವರ ವತಿಯಿಂದ ಅವರ ಆಫೀಸಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.      ಇದೇ ಸಂದರ್ಭದಲ್ಲಿ    ಶ್ರೀ ವೀರಶೈವ ಲಿಂಗಾಯತರು ವೇದಿಕೆ ಚಿಕ್ಕಬಾಣವಾರ  ಅಧ್ಯಕ್ಷರು ಅಶೋಕ್ ಪಾಟೀಲ್  ಪ್ರಧಾನ ಕಾರ್ಯದರ್ಶಿ ಎಂ ಎಚ್ ಪಾಟೀಲ್, ಮೇಜರ್ ಮಲ್ಲಿಕಾರ್ಜುನ ಸ್ವಾಮಿ,  ಡಾ.ಸಂಗನಬಸಪ್ಪ ಬಿರಾದಾರ, ಕಿರಣ್ ಆಲೂರು, ಹಾಲಕ್ಕಿ ಸುರೇಶ್ ದೊಡ್ಮನಿ, ರಾಜೇಂದ್ರ ಕಣ್ಣೂರ, ಲತಾ ಕುಂದರಗಿ, ಸವಿತಾ, ಆರಾಧ್ಯ, ಶಿವಣ್ಣ, ಶಿವಕುಮಾರ್ ಮೇಷ್ಟ್ರು, ಕಾರ್ಮಿಕ ಮುಖಂಡರಾದ ಚನ್ನಕೇಶವ, ಸುರೇಶ್ ಬಿರಾದಾರ ಇನ್ನು ಅನೇಕ ಮುಖಂಡರು ಭಾಗವಹಿಸಿದ್ದರು.ವರದಿ, ಪಬ್ಲಿಕ್ ರೈಡ್ ದೇವರಾಜ್

Jun 10, 2026 | 12:31 PM
155 0
ರಾಜಗೋಪಾಲ್ ನಗರ ವಾರ್ಡಿನ ಜಿ ಬಿ ಎ ಆಕಾಂಕ್ಷಿ ಬಿ ಜಗದೀಶ್ ಕುಮಾರ್ ಅವರ ಜನ್ಮದಿನ ಆಚರಣೆ

ರಾಜಗೋಪಾಲ್ ನಗರ ವಾರ್ಡಿನ ಜಿ ಬಿ ಎ ಆಕಾಂಕ್ಷಿ ಬಿ ಜಗದೀಶ್ ಕುಮಾರ್ ಅವರ ಜನ್ಮದಿನ ಆಚರಣೆ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :ರಾಜಗೋಪಾ ಲನಗರ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಬಿಎ ಪ್ರಬಲ ಆಕಾಂಕ್ಷಿ ಬಿ.ಜಗದೀಶ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ ಆರ್. ಮಂಜುನಾಥ್ ಅವರು ಅಪಾರ ಬೆಂಬಲಿಗರೊಂದಿಗೆ ಅವರ ನಿವಾಸಕ್ಕೆ ಆಗಮಿಸಿ ಬೃಹತ್ ಹೂ ಮಾಲೆ ಹಾಕಿ ಕೇಕ್ ತಿನ್ನಿಸಿ ಮೈಸೂರ್ ಪೇಟ ತೋರಿಸಿ ಹಣ್ಣಿನ ಬುಟ್ಟಿ ನೀಡಿ ಪರಿಸರದ ದಿನದ ಅಂಗವಾಗಿ ಗಿಡವನ್ನು ನೀಡುವ ಮೂಲಕ ಜನ್ಮದಿನದ ಶುಭ ಕೋರಿದರು.ಈ ಸಂದರ್ಭದಲ್ಲಿ ಹೆಗ್ಗನಹಳ್ಳಿ  ಕಾಂಗ್ರೆಸ್ ಮುಖಂಡರಾದ ಬ ನಾ ರವಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ, ಹನುಮಂತರಾಜು, ಕಾಂಗ್ರೆಸ್ ಹಿರಿಯ ಮುಖಂಡ ಮಣಿ, ಮುಖಂಡರುಗಳಾದ ಭೈರವ, ಕಿಶೋರ್, ಮಹಿಳಾ ಮುಖಂಡರುಗಳಾದ ಉಷಾರಾಜ್,ಚಂದ್ರಮ್ಮ, ಬಿಟಿಎಂ ಲೇಔಟ್ ರಾಜು, ಮೋಹನ, ಲಗ್ಗೆರೆ ಮಂಜುನಾಥ್, ಸಮಾಜ ಸೇವಕರಾದ ಸೋಮಣ್ಣ,  ಕೃಷ್ಣ ಶೆಟ್ಟಿ, ಮೆಡಿಕಲ್ ಮಂಜುನಾಥ್, ಸೈಯದ್, ಬಸವರಾಜು, ರಾಜು ಹಾಗೂ ಜೆಡಿಎನ್ ಕುಟುಂಬಸ್ಥರು ಮುಂತಾದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು.ವರದಿ : ಪಬ್ಲಿಕ್ ರೈಡ್ ದೇವರಾಜ್

Jun 9, 2026 | 12:20 PM
28 0
ಬೆಂಗಳೂರು ನಗರದಲ್ಲಿ ಅಕ್ರಮ ಕ್ವಾರಿ ಮೇಲೆ ಪೊಲೀಸರ ದಾಳಿ: ಜಿಲೆಟಿನ್ ಕಡ್ಡಿ, ಡಿಟೋನೇಟರ್ ವಶ

ಬೆಂಗಳೂರು ನಗರದಲ್ಲಿ ಅಕ್ರಮ ಕ್ವಾರಿ ಮೇಲೆ ಪೊಲೀಸರ ದಾಳಿ: ಜಿಲೆಟಿನ್ ಕಡ್ಡಿ, ಡಿಟೋನೇಟರ್ ವಶ

ಬೆಂಗಳೂರು: ನಗರ ಹೊರವಲಯದ ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಲ್ಲಿನ ಕ್ವಾರಿ ಮೇಲೆ ಪೊಲೀಸರು ದಾಳಿ ನಡೆಸಿ, ಅಪಾರ ಪ್ರಮಾಣದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್‌ಗಳು ಹಾಗೂ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.ಯಾರಪ್ಪನಹಳ್ಳಿ ಗ್ರಾಮದ ವಿಧಾನಸೌಧ ಲೇಔಟ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ವರ ಗ್ರಾನೈಟ್ಸ್ ಸಂಸ್ಥೆಯು ಯಾವುದೇ ಸಂಬಂಧಿತ ಪ್ರಾಧಿಕಾರದ ಅನುಮತಿ ಹಾಗೂ ಅಗತ್ಯ ಪರವಾನಗಿ ಇಲ್ಲದೆ ಕಲ್ಲಿನ ಕ್ವಾರಿ ನಡೆಸುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.ಜೂನ್ 4ರಂದು ರಾತ್ರಿ ಗಸ್ತು ವೇಳೆ ಅವಲಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಕಲ್ಲು ಸ್ಫೋಟಿಸಲು ಬಳಸಲಾಗುತ್ತಿದ್ದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್‌ಗಳು ಹಾಗೂ ಇತರೆ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕ್ವಾರಿ ಚಟುವಟಿಕೆಗೆ ಸಂಬಂಧಿಸಿದಂತೆ ವೆಂಕಟರಮಣ ರೆಡ್ಡಿ, ಲೋಕೇಶ್ ರೆಡ್ಡಿ, ವಿಕಾಸ್, ತೋಹಿದ್ ಹಾಗೂ ಸಂದೀಪ್ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.ವಶಪಡಿಸಿಕೊಳ್ಳಲಾದ ಸ್ಫೋಟಕ ಸಾಮಗ್ರಿಗಳನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಅಕ್ರಮ ಕ್ವಾರಿ ನಡೆಸುತ್ತಿರುವ ಜಾಲದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.ಪರವಾನಗಿ ಇಲ್ಲದೆ ಅಪಾಯಕಾರಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಬಳಸಿರುವ ಆರೋಪ ಗಂಭೀರವಾಗಿದ್ದು, ಪ್ರಕರಣದ ಎಲ್ಲ ಆಯಾಮಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Jun 9, 2026 | 08:30 AM
124 0
ಗುರುತಿನ ಚೀಟಿ ಇಲ್ಲದವರಿಗೆ ಮದ್ಯದ ಅಂಗಡಿಗೆ ಪ್ರವೇಶವಿಲ್ಲ: ಅಪ್ರಾಪ್ತರಿಗೆ ಮದ್ಯ ಮಾರಾಟ ಅಪರಾಧ – ಪ್ರಿಯಾಂಕ್ ಖರ್ಗೆ

ಗುರುತಿನ ಚೀಟಿ ಇಲ್ಲದವರಿಗೆ ಮದ್ಯದ ಅಂಗಡಿಗೆ ಪ್ರವೇಶವಿಲ್ಲ: ಅಪ್ರಾಪ್ತರಿಗೆ ಮದ್ಯ ಮಾರಾಟ ಅಪರಾಧ – ಪ್ರಿಯಾಂಕ್ ಖರ್ಗೆ

ಬೆಂಗಳೂರು, ಜೂನ್ 9:ಅಪ್ರಾಪ್ತ ವಯಸ್ಕರ ಮದ್ಯಪಾನ ಮತ್ತು ಮಾದಕ ವ್ಯಸನವನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ರಾಜ್ಯದ ಎಲ್ಲಾ ಪಬ್‌ಗಳು, ಬ್ರೂವರೀಸ್, ಬಾರ್‌ಗಳು, ಕ್ಲಬ್‌ಗಳು, ಲಾಂಜ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಮದ್ಯ ಮಾರಾಟ ಮಾಡುವ ಸಂಸ್ಥೆಗಳಿಗೆ ಅಪ್ರಾಪ್ತ ವಯಸ್ಕರ ಪ್ರವೇಶ ಮತ್ತು ಮದ್ಯಪಾನವನ್ನು ತಡೆಯುವ ಕುರಿತು ನೋಟಿಸ್ ನೀಡುವಂತೆ ನಗರ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ Priyank Kharge ತಿಳಿಸಿದ್ದಾರೆ.ಬೆಂಗಳೂರಿನಲ್ಲಿ 4,093 ವಿದ್ಯಾರ್ಥಿಗಳನ್ನು ಒಳಗೊಂಡ ಇತ್ತೀಚಿನ ಅಧ್ಯಯನದಲ್ಲಿ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ಅಧ್ಯಯನದ ಪ್ರಕಾರ, ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಸೇವನೆಯಿಂದ ಆರೋಗ್ಯ ಸಮಸ್ಯೆಗಳ ಅಪಾಯದಲ್ಲಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 33 ಶೇಕಡಾ ಮಂದಿ ಮದ್ಯ ವ್ಯಸನಕ್ಕೆ ಹಾಗೂ 18 ಶೇಕಡಾ ಮಂದಿ ತಂಬಾಕು ವ್ಯಸನಕ್ಕೆ ಒಳಗಾಗಿರುವುದು ಕಂಡುಬಂದಿದೆ.ಇದಲ್ಲದೆ, ಮದ್ಯಪಾನ ಆರಂಭಿಸುವ ಸರಾಸರಿ ವಯಸ್ಸು 17 ವರ್ಷವಾಗಿದ್ದು, ಕೆಲ ಪ್ರಕರಣಗಳಲ್ಲಿ 8 ವರ್ಷದ ಮಕ್ಕಳೂ ಮದ್ಯಪಾನ ಆರಂಭಿಸಿರುವುದು ದಾಖಲಾಗಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ.ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಮಾಡುವ ಎಲ್ಲಾ ಸಂಸ್ಥೆಗಳು ಗ್ರಾಹಕರ ವಯಸ್ಸಿನ ಪರಿಶೀಲನೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಸರ್ಕಾರ ಸೂಚಿಸಿದೆ.ಪ್ರಮುಖ ನಿರ್ದೇಶನಗಳುಮಾನ್ಯ ಗುರುತಿನ ಚೀಟಿ ಇಲ್ಲದವರಿಗೆ ಪ್ರವೇಶ ನಿರಾಕರಣೆಸರ್ಕಾರ ನೀಡಿದ ವಯಸ್ಸಿನ ಪುರಾವೆ ಕಡ್ಡಾಯಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಮಾಲೀಕರು, ವ್ಯವಸ್ಥಾಪಕರು ಮತ್ತು ಪರವಾನಗಿದಾರರೇ ನೇರ ಹೊಣೆಗಾರರುಪ್ರವೇಶ ದ್ವಾರದಲ್ಲಿನ ಸಿಸಿಟಿವಿಗಳು ಕಾರ್ಯನಿರ್ವಹಿಸಬೇಕು ಹಾಗೂ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕುಪೊಲೀಸ್ ಇಲಾಖೆ, ನಿವಾಸಿಗಳ ಸಂಘಗಳು ಹಾಗೂ ನಾಗರಿಕ ಗುಂಪುಗಳೊಂದಿಗೆ ಸಮನ್ವಯ ಸಾಧಿಸಬೇಕು"ವಾಣಿಜ್ಯ ಲಾಭಕ್ಕಾಗಿ ಮಕ್ಕಳ ಸುರಕ್ಷತೆ ಮತ್ತು ಭವಿಷ್ಯವನ್ನು ಬಲಿಕೊಡಲು ಸಾಧ್ಯವಿಲ್ಲ. ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಕೆ ಅಥವಾ ಅವಕಾಶ ಕಲ್ಪಿಸುವ ಸಂಸ್ಥೆಗಳ ವಿರುದ್ಧ ಕರ್ನಾಟಕ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸಲಿದೆ. ಗುರುತಿನ ಚೀಟಿ ಇಲ್ಲದಿದ್ದರೆ ಪ್ರವೇಶವಿಲ್ಲ; ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಅಪರಾಧ" ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

Jun 9, 2026 | 05:52 AM
125 0
ಮಳವಳ್ಳಿ ಶಿವಣ್ಣ ರಿಂದ ವಿಧಾನಪರಿಷತ್ ಗೆ ನಾಮಪತ್ರ ಸಲ್ಲಿಕೆ

ಮಳವಳ್ಳಿ ಶಿವಣ್ಣ ರಿಂದ ವಿಧಾನಪರಿಷತ್ ಗೆ ನಾಮಪತ್ರ ಸಲ್ಲಿಕೆ

ಪಬ್ಲಿಕ್ ರೈಡ್ ನ್ಯೂಸ್ : ಪೀಣ್ಯ ದಾಸರಹಳ್ಳಿ : ರಾಜ್ಯ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಸೌಧದಲ್ಲಿಮಳವಳ್ಳಿ ಶಿವಣ್ಣ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು ನಾನು ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಂಡು ಪಕ್ಷದ ವರಿಷ್ಠರು ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿರುವುದನ್ನು ಗಮನಿಸಿ ನನ್ನನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿದ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹಾಗೂ  ಪಕ್ಷದ ಎಲ್ಲಾ ಅಬಾರಿಯಾಗಿದ್ದೇನೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಶ್ರೀಗಂಧ ನಗರದ ಜಿಬಿಎ ಆಕಾಂಕ್ಷಿ ಎಂವಿ ಸೋಮಶೇಖರ್ ಏರ್ಟೆಲ್ ಸೋಮಣ್ಣ ಚಲನಚಿತ್ರ ನಿರ್ಮಾಪಕರು ಹಾಗೂ ಯುವ ಮುಖಂಡರಾದ ಜನಾರ್ದನ್ ಮಳವಳ್ಳಿ ಕಾಂಗ್ರೆಸ್ ಮುಖಂಡರಾದ  ಸಿದ್ದೇಗೌಡ, ಸುರೇಶ್ , ಹಾಜರಿದ್ದರು.ವರದಿ, ಪಬ್ಲಿಕ್ ರೈಡ್ ದೇವರಾಜ್

Jun 8, 2026 | 12:57 PM
25 0
ವಿಶ್ವ ಪರಿಸರ ದಿನಾಚರಣೆ: ರಾಜಾಜಿನಗರ ಮೆಟ್ರೋ ನಿವಾಸಿಗಳ ಕಲ್ಯಾಣ ಸಂಘದಿಂದ ಜಾಗೃತಿ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆ: ರಾಜಾಜಿನಗರ ಮೆಟ್ರೋ ನಿವಾಸಿಗಳ ಕಲ್ಯಾಣ ಸಂಘದಿಂದ ಜಾಗೃತಿ ಕಾರ್ಯಕ್ರಮ

ಪೀಣ್ಯ ದಾಸರಹಳ್ಳಿ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ರಾಜಾಜಿನಗರ ಮೆಟ್ರೋ ನಿವಾಸಿಗಳ ಕಲ್ಯಾಣ ಸಂಘದ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರದ ಟ್ರಾಫಿಕ್ ಮತ್ತು ಪ್ಲಾನಿಂಗ್ ವಿಭಾಗದ ಎಸಿಪಿ ಶ್ರೀಮತಿ ಕವಿತಾ ಕರಿಯಪ್ಪ ಭಾಗವಹಿಸಿ ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರ ಜವಾಬ್ದಾರಿಗಳ ಕುರಿತು ಮಾತನಾಡಿದರು.ಇದೇ ವೇಳೆ ಶ್ರೀಮತಿ ಆರ್ತಿ ತೊಪ್ಪ ಅವರು ತ್ಯಾಜ್ಯ ನಿರ್ವಹಣೆ, ಮರುಬಳಕೆ ಹಾಗೂ ಸುಸ್ಥಿರ ಜೀವನಶೈಲಿಯ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಬದುಕಿನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ವರದಿ: ದೇವರಾಜ್, ಪಬ್ಲಿಕ್ ರೈಡ್

Jun 8, 2026 | 02:49 AM
24 0