ಕರ್ನಾಟಕ

ಕಣಗಲಾ ಸಮೀಪ ಎನ್‌ಎಚ್-48ರಲ್ಲಿ ಭೀಕರ ಅಪಘಾತ: ಅಣ್ಣ-ತಂಗಿ ದುರ್ಮರಣ

ಮೂಲಕ News Desk | ಪ್ರಕಟಿಸಲಾಗಿದೆ June 4, 2026 June 4, 2026 | 04:13 PM 166 ವೀಕ್ಷಣೆಗಳು

ಕಣಗಲಾ, ಜೂನ್ 4:ರಾಷ್ಟ್ರೀಯ ಹೆದ್ದಾರಿ 48ರ ಕಣಗಲಾ ಸಮೀಪದ ಕುಂಬಾರ್ ಪ್ಲಾಟ್ ಹಾಸ್ಟೆಲ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಣ್ಣ ಮತ್ತು ತಂಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.


ಮೃತರನ್ನು ಕಣಗಲಾ ಗ್ರಾಮದ ನಿವಾಸಿಗಳಾದ ಅಪ್ಪಾ ಮಹಾಲಿಂಗ ಲಾಟಕರ (60) ಹಾಗೂ ಅವರ ಸಹೋದರಿ ಸುವರ್ಣಾ (62) ಎಂದು ಗುರುತಿಸಲಾಗಿದೆ.


ಮಾಹಿತಿಯ ಪ್ರಕಾರ, ಅಪ್ಪಾ ಮಹಾಲಿಂಗ ಲಾಟಕರ ಅವರು ತಮ್ಮ ಸಹೋದರಿ ಸುವರ್ಣಾರನ್ನು ಸ್ಕೂಟಿಯಲ್ಲಿ ಕೂರಿಸಿಕೊಂಡು ನಿಪ್ಪಾಣಿ ಕಡೆಯಿಂದ ಕಣಗಲಾಕ್ಕೆ ಬರುತ್ತಿದ್ದರು. ಈ ವೇಳೆ ಎನ್‌ಎಚ್-48ರ ಕುಂಬಾರ್ ಪ್ಲಾಟ್ ಹಾಸ್ಟೆಲ್ ಸಮೀಪ ಸ್ಕೂಟಿ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ಇದೇ ಸಂದರ್ಭದಲ್ಲಿ ಹಾದುಹೋಗುತ್ತಿದ್ದ ಲಾರಿಯೊಂದು ಅವರ ಮೇಲೆ ಹರಿದಿರುವ ಶಂಕೆ ವ್ಯಕ್ತವಾಗಿದೆ.


ಅಪಘಾತದ ತೀವ್ರತೆಗೆ ಅಪ್ಪಾ ಮಹಾಲಿಂಗ ಲಾಟಕರ ಅವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಸುವರ್ಣಾ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಥವಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


ಘಟನೆಗೆ ಸಂಬಂಧಿಸಿದಂತೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.


ವರದಿಗಾರರು: ಸಂತೋಷ ನಿರ್ಮಲೆ

(ಪಬ್ಲಿಕ್ ರೈಡ್ ನ್ಯೂಸ್ ಬೆಳಗಾವಿ)