ಕರ್ನಾಟಕ

ಅಂಗನವಾಡಿ ಕೇಂದ್ರ, ಪೌರಕಾರ್ಮಿಕರ ವಿಶ್ರಾಂತಿ ಕೊಠಡಿ ಮತ್ತು ಸಮುದಾಯ ಭವನ, ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಚಾಲನೆ

ಮೂಲಕ News Desk | ಪ್ರಕಟಿಸಲಾಗಿದೆ May 30, 2026 May 30, 2026 | 12:46 PM 22 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರದಲ್ಲಿ ಅಂಗನವಾಡಿ ಕೇಂದ್ರ, ಪೌರಕಾರ್ಮಿಕರ ವಿಶ್ರಾಂತಿ ಕೊಠಡಿ ಮತ್ತು ಸಮುದಾಯ ಭವನ, ಚೊಕ್ಕಸಂದ್ರದ ವಿದ್ಯಾನಗರದಲ್ಲಿ ರಾಜ ಕಾಲುವೆ ಮೇಲೆ ಸಂಪರ್ಕ ರಸ್ತೆ ಸೇತುವೆ( ಬ್ರಿಡ್ಜ್) ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ'ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.

    ಬಳಿಕ ಮಾತನಾಡಿದ ಅವರು,' ಜನರ ಹಿತ ದೃಷ್ಟಿಯಿಂದ ಅನೇಕ ಕಡೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕ್ಷೇತ್ರದಲ್ಲೇಡೆ ಮೋರಿ, ಚರಂಡಿ ಮತ್ತು ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅನುದಾನದ ಕೊರತೆ ಇದೆ. ಸರ್ಕಾರ ಮನಸು ಮಾಡಿ ಅನುದಾನ ನೀಡಬೇಕು' ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ಚಿಕ್ಕಬಾಣಾವರ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಭಾಗ್ಯಮ್ಮ, ಬಿ.ಎಂ. ಚಿಕ್ಕಣ್ಣ, ಶ್ರೀನಿವಾಸ ಮೂರ್ತಿ, ಸುರೇಶ್, ಬೆನ್ಮಾರ್ ಸುರೇಶ್, ವೆಂಕಟೇಶ್, ವಿಜಯಕುಮಾರ್, ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಮಂಜುನಾಥ್, ಎಂಜಿನಿಯರ್ ಸುಮತಿ ಮುಂತಾದವರಿದ್ದರು.

ವರದಿ : ಪಬ್ಲಿಕ್ ರೈಡ್ ದೇವರಾಜ್