ಕರ್ನಾಟಕ

ಗ್ಯಾರಂಟಿಗಳಿಂದ ಅನುದಾನದ ಕೊರತೆ, ಅಭಿವೃದ್ಧಿ ಕುಂಠಿತ-ಎಸ್ ಮುನಿರಾಜು

ಮೂಲಕ News Desk | ಪ್ರಕಟಿಸಲಾಗಿದೆ May 26, 2026 May 26, 2026 | 03:27 PM 34 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಅಭಿವೃದ್ಧಿಗೆ ಅನುಧಾನ ನೀಡದೆ ಮೂರು ನಾಮ ಹಾಕುತ್ತಿದೆ'ಎಂದು ಶಾಸಕ ಎಸ್. ಮುನಿರಾಜು ವಾಗ್ದಾಳಿ ನಡೆಸಿದರು.

ಚೊಕ್ಕಸಂದ್ರ ವಾರ್ಡ್ ವಿದ್ಯಾನಗರದ ರಾಜಕಾಲುವೆ ಮೇಲಿರುವ ಸಂಪರ್ಕ ಸೇತುವೆ ಶಿಥಿಲವಾದ (ಬ್ರಿಡ್ಜ್) ಕೆಡವಿ ಹೊಸ ಬ್ರಿಡ್ಜ್‌ ನಿರ್ಮಾಣ ಮಾಡುವ ಸಲುವಾಗಿ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಿ ಮಾತನಾಡಿದರು.

ಪ್ರತಿದಿನ ಸಾವಿರಾರು ಗಾರ್ಮೆಂಟ್ ಉದ್ಯೋಗಿಗಳು ವಿದ್ಯಾನಗರ, 8ನೇ ಮೈಲಿ, ರುಕ್ಮಿಣಿ ನಗರ ಮುಂತಾದ ಕಡೆಗಳಿಂದ ಈ ಸೇತುವೆ ಮೂಲಕ ಫ್ಯಾಕ್ಟ್ರಿಗಳಿಗೆ ಉದ್ಯೋಗಿಗಳು ಹೋಗುತ್ತಾರೆ. ಅಂತಹ ಸೇತುವೆ ಶಿಥಿಲಗೊಂಡಿದೆ. ಅದನ್ನು ಪರಿಶೀಲಿಸಿ,ಇನ್ನು ಅಗಲವಾಗಿ, ದೊಡ್ಡದಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡುವ ಉದ್ದೇಶದಿಂದ ಅಧಿಕಾರಿಗಳ ಜೊತೆ ಭೇಟಿ ನೀಡಿದ್ದೇವೆ' ಎಂದರು. ಎಲ್ಲಿ ಹೋದರು ಸಾರ್ವಜನಿಕರು ರಸ್ತೆ, ಚರಂಡಿ, ಮೋರಿ ಮುಂತಾದ ಸಮಸ್ಯೆಗಳ ಸುರಿ ಮಳೆಯನ್ನೇ ಹೇಳಿಕೊಳ್ಳುತ್ತಾರೆ. ಆದರೆ ಅನುದಾನದ ಕೊರತೆ. ಸರ್ಕಾರ ಎಚ್ಚೆತ್ತು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಲಿ ಎಂದು ಮನವಿ ಮಾಡಿದರು. ಸ್ಥಳಪರಿಶೀಲನೆ ಸಮಯದಲ್ಲಿ ಜಿಬಿಎ ಅಧಿಕಾರಿಗಳು, ಸ್ಥಳೀಯ ಮುಖಂಡರಾದ ಬೆಲ್ಮಾರ್ ಸುರೇಶ್, ವೆಂಕಟೇಶ್( ವೆಂಕಿ), ನಾಗರಾಜು, ಎಇಇ ವೆಂಕಟೇಶ್, ಎಇ ಗಳಾದ ಪ್ರವೀಣ್, ಅರುಣ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ವರದಿ : ಪಬ್ಲಿಕ್ ರೈಡ್ ದೇವರಾಜ್