ಕರ್ನಾಟಕ

ತಾರಸಿ ಹಾಗೂ ಗಾರ್ಡನ್ ನಲ್ಲಿ ಕೈತೋಟ ನಿರ್ಮಿಸಿರುವ ಮನೆಗಳಿಗೆ ಗ್ರೀನ್ ಹೌಸ್ ಅಫ್ ದಾಸರಹಳ್ಳಿ ನಾಮಫಲಕ ಆಳವಡಿಕೆ.

ಮೂಲಕ News Desk | ಪ್ರಕಟಿಸಲಾಗಿದೆ June 5, 2026 June 5, 2026 | 01:39 PM 27 ವೀಕ್ಷಣೆಗಳು

ಪೀಣ್ಯ ದಾಸರಹಳ್ಳಿ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದಾಸರಹಳ್ಳಿ ಬಿಜೆಪಿ ಯುವ ಮೋರ್ಚಾ  ವತಿಯಿಂದ ಮನೆಗಳ ತಾರಸಿ ಹಾಗೂ ಗಾರ್ಡನ್ ನಲ್ಲಿ ಕೈತೋಟ ನಿರ್ಮಿಸಿ ಹಲವಾರು ವಿಭಿನ್ನ ಸಸಿಗಳನ್ನು ಬೆಳೆದಿರುವವರನ್ನು ಗುರುತಿಸಿ ಅಂತವರಿಗೆ ಪ್ರೋತ್ಸಾಹ ನೀಡುವ ಹಾಗೂ ಧನ್ಯವಾದ ತಿಳಿಸುವ ಉದ್ದೇಶದಿಂದ ಮನೆಗಳ ಮುಂದೆ 'ಗ್ರೀನ್ ಹೌಸ್ ಅಫ್ ದಾಸರಹಳ್ಳಿ' ಎಂಬ ನಾಮಫಲಕ ಅಳವಡಿಸಿ ಉತ್ತಮ ಕೆಲಸ ಮಾಡಲಾಗುತ್ತಿದೆ' ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.

ದಾಸರಹಳ್ಳಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸೌಂದರ್ಯ ಭರತ್ ಹಾಗೂ  ಪಧಾದಿಕಾರಿಗಳ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕ್ಷೇತ್ರದ ಚೊಕ್ಕಸಂದ್ರ ಹಾಗೂ ದಾಸರಹಳ್ಳಿ ವಾರ್ಡ್ ನ ಶಶಿಕುಮಾರ್, ಭೀಮರಾವ್, ಡಾ. ವಿಷ್ಣುಮೂರ್ತಿ ಭಟ್, ಚಂದ್ರಶೇಖರ್, ನಾಯರ್ ಮನೆಗಳ

ಮೇಲೆ ನಿರ್ಮಿಸಿರುವ ತಾರಸಿ ತೋಟಗಳನ್ನು ಅಯ್ಕೆ ಮಾಡಿ ಅಂತಹ ಮನೆಗಳಿಗೆ "ಗ್ರೀನ್ ಹೌಸ್ ಅಫ್ ದಾಸರಹಳ್ಳಿ" ನಾಮಫಲಕ  ಆಳವಡಿಸಿ 

ಮತ್ತಷ್ಟು ಸಸಿಗಳನ್ನು ಬೆಳೆಸುವ ಪ್ರಯತ್ನ ಕ್ಕೆ ಪ್ರೋತ್ಸಾಹ ನೀಡಿ ಹಸಿರುಕ್ರಾಂತಿಗೆ ಮುನ್ನಡಿ ಬರೆವ ವಿಭಿನ್ನ ಪ್ರಯತ್ನ ಇಂದು ನಡೆಯಿತು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭರತ್ ಸೌಂದರ್ಯ ಮಾತನಾಡಿ, ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಮನೆಗಳ ತಾರಸಿಯಲ್ಲಿ ಕೈತೋಟ ನಿರ್ಮಾಣಕ್ಕೆ ಮನೆ ಮಾಲೀಕರು ಹೆಚ್ಚು ಒಲವು ತೋರುತ್ತಿದ್ದು

ಮನೆಯಲ್ಲಿ ಉತ್ಪತ್ತಿಯಾಗುವ ಹಸಿಕಸದಿಂದ ಗೊಬ್ಬರ ತಯಾರಿಸಿ ಸಸಿಗಳಿಗೆ ನೀಡುವ ಮೂಲಕ  ಹಸಿರು ವಾತಾವರಣ ಸೃಷ್ಟಿ ಮಾಡಬಹುದು. ಜೊತೆಗೆ ಮನೆಗೆ ತರಕಾರಿ ಕೂಡ ಪಡೆಯಬಹುದು.ಇಂತಹ ಒಂದು ಸಣ್ಣ ಪ್ರಯತ್ನದಿಂದ ಮನೆಗಳಿಗೆ ಹಲವು ರೀತಿಯಲ್ಲಿ ಪ್ರಯೋಜನವಾಗಲಿದೆ' ಎಂದರು.

ಈ ಸಂದರ್ಭದಲ್ಲಿ ಡಿ ಎಂ ಮಂಜು ಬೆಲ್ಮಾರ್ ಸುರೇಶ್, ಮುನಿ ಕೃಷ್ಣ,

ವಿಜಯ್ ಕುಮಾರ್, ವಿನೋದ್ ಗೌಡ, ಮಧು ಗೌಡ, ನವೀನ್ ಕುಮಾರ್, ಸಂತೋಷ್, ಆಂಟೋನಿ, ನಿತೀಶ್ ಮತ್ತಿತರರು ಇದ್ದರು.


ವರದಿ : ಪಬ್ಲಿಕ್ ರೈಡ್ ದೇವರಾಜ್