ಕರವ ಸುಲಿಗಾರರ ಕೈಚಳಕಕ್ಕೆ ಸಾರ್ವಜನಿಕರು ಕಂಗಾಲು
ಹುಬ್ಬಳ್ಳಿ:
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕೆಲ ವಲಯ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಖಾತಾ ಬದಲಾವಣೆ ಸೇರಿದಂತೆ ಹಲವು ಆಡಳಿತಾತ್ಮಕ ಕಾರ್ಯಗಳಲ್ಲಿ ಕಾನೂನು ನಿಯಮಗಳನ್ನು ಮೀರಿ ಕೆಲಸ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಿಶೇಷವಾಗಿ ಆ ಒಂದು ವಲಯ ಕಚೇರಿಯಲ್ಲಿ ನಡೆದಿರುವ ಎನ್ನಲಾದ ಖಾತಾ ಬದಲಾವಣೆ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೂಲ ಆಸ್ತಿ ಮಾಲೀಕರು ಮೃತಪಟ್ಟಿದ್ದು ವರ್ಷಗಳೇ ಕಳೆದಿದ್ದರೂ, ವಾರಸುದಾರರ ಸ್ಪಷ್ಟ ಅನುಮತಿ ಇಲ್ಲದೆ ಖಾತಾ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರದ ನಿಯಮಾನುಸಾರ ವಾರಸುದಾರರ ದಾಖಲೆ, ಅನುಮತಿ ಹಾಗೂ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಖಾತಾ ಬದಲಾವಣೆ ಆಗಬೇಕು. ಆದರೆ ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳ ಜೊತೆ ಕೈಜೋಡಿಸಿದ ಕೆಲ ಮಧ್ಯವರ್ತಿಗಳು ಮತ್ತು ಕರವ ಸುಲಿಗಾರರು ತಮ್ಮ ಪ್ರಭಾವ ಬಳಸಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು, “ಹಣ ಕೊಟ್ಟರೆ ಏನೂ ಸಾಧ್ಯ” ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪಟೇಲರಿಗೆ ಪಟ್ಟ ಕಟ್ಟುವವರು ಯಾರೂ ಇಲ್ಲದಂತಾಗಿದೆ” ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಮುಂದಿನ ಸುದ್ದಿಯಲ್ಲಿ ಆ ಕರ ವಸೂಲಿಗರರ ಯಾರು? ಹಾಗೂ ಆತ ಮಾಡಿದ ಘನಂದಾರಿ ಕೆಲಸಗಳಲ್ಲಿ ಈಗ ಹೊಸದೊಂದು ಕೆಲಸದ ಬಣ್ಣ ಬಯಲಿಗೆ ಮುಂದಿನ ಸುದ್ದಿಯಲ್ಲಿ.