ಕರ್ನಾಟಕ

ಜ್ಞಾನೋದಯ ಇಂಟರ್‌ನ್ಯಾಷನಲ್ (ಸಿಬಿಎಸ್ ಸಿ ) ಸ್ಕೂಲ್ ವತಿಯಿಂದ ಉಚಿತ ತಪಾಸಣಾ ಶಿಬಿರ ಅಯೋಜನೆ .

ಮೂಲಕ News Desk | ಪ್ರಕಟಿಸಲಾಗಿದೆ May 24, 2026 May 24, 2026 | 12:53 PM 22 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ನಾವು ಉತ್ತಮ ಅರೋಗ್ಯ ಹೊಂದಿರಲು ಕಾಲಕಾಲಕ್ಕೆ ದೇಹವನ್ನು ತಪಾಸಣಾ ಒಳಪಡಿಸಿದಾಗ ಪ್ರಾಥಮಿಕ ಹಂತದಲ್ಲೇ ರೋಗಪತ್ತೆ ಮಾಡಿ ಚಿಕಿತ್ಸೆ ಪಡೆದು ರೋಗ ಗುಣಪಡಿಸಿಕೊಳ್ಳಲು ಸಾಧ್ಯ ಹಾಗಾಗಿ ಶಾಲೆಗಳಲ್ಲಿ ಒಂದೇ ಕಡೆ ಅರೋಗ್ಯ ತಪಾಸಣೆ ಶಿಬಿರಗಳನ್ನು ಅಯೋಜನೆ ಮಾಡುವುದರಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುವುದರ ಜೊತೆಗೆ ಪೋಷಕರು ಹಾಗೂ ಮಕ್ಕಳಿಗೆ ಇದರಿಂದ ಪರಿಣಾಮಕಾರಿ ಪ್ರಯೋಜನ ಸಿಗಲಿದೆ ಎಂದು ಜ್ಞಾನೋದಯ ಇಂಟರ್‌ನ್ಯಾಷನಲ್ (ಸಿಬಿಎಸ್ ಸಿ ) ಸ್ಕೂಲ್ ಕಾರ್ಯದರ್ಶಿ ಹಾಗೂ ಬೆಂಗಳೂರು ವಕೀಲ ಸಾಹಿತ್ಯ ಕೂಟದ ಅಧ್ಯಕ್ಷರು,ವಕೀಲರಾದ ಜಗದೀಶ್ ಎಲ್ ತಿಳಿಸಿದರು.

ಶ್ರೀ ಮೈಲಾರಲಿಂಗೇಶ್ವರ ಎಜುಕೇಷನಲ್‌ ಟ್ರಸ್ಟ್ ನ ಜ್ಞಾನೋದಯ ಇಂಟರ್‌ನ್ಯಾಷನಲ್ (ಸಿಬಿಎಸ್ ಸಿ ) ಸ್ಕೂಲ್ ಕಾರ್ಯದರ್ಶಿ ಹಾಗೂ ಬೆಂಗಳೂರು ವಕೀಲ ಸಾಹಿತ್ಯ ಕೂಟದ ಅಧ್ಯಕ್ಷರು,ವಕೀಲರಾದ ಜಗದೀಶ್ ಎಲ್ 

ನೇತೃತ್ವದಲ್ಲಿ ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸಂಟೇನಿಯಲ್ ಸ್ಪಂದನ ಫೋರ್ಟೀಸ್ ಹಾಸ್ಪಿಟಲ್, ಯಶವಂತಪುರ, ಮುತ್ತೂಟ್ ಫೈನಾನ್ಸ್ ಮಣಿಪಾಲ್ ಹಾಸ್ಪಿಟಲ್, ಯಶವಂತಪುರ, ಅಪೋಲೋ ಕ್ರೆಡಲ್ ಸೆಂಟ್ ಥೆರೆಸಾ ಹಾರ್ಟ್ ಸೆಂಟರ್ ಕೆ.ಎಲ್.ಇ ಡೆಂಟಲ್ ಕಾಲೇಜ್ ಮತ್ತು ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಪೀಣ್ಯ 2ನೇ ಹಂತದ ಶಾಂಭವಿನಗರ,ಜಿಕೆಡಬ್ಲ್ಯೂ ಲೇಔಟ್ ಪಾರ್ಕ್ ಹತ್ತಿರ, ಶಾಲೆಯ ಆವರಣದಲ್ಲಿ ಆಯೋಜಿಸಲಾಗಿತ್ತು

ಬಿ.ಪಿ/ಶುಗರ್ ಹಾಗೂ ಸಾಮಾನ್ಯ ರೋಗ ತಪಾಸಣೆ ,ಕಿವಿ, ಮೂಗು, ಗಂಟಲು ಹಾಗೂ ಚರ್ಮರೋಗ ತಪಾಸಣೆ,ಪೈಲ್ಸ್, ಹರ್ನಿಯಾ ಅಪೆಂಡಿಸೈಟಿಸ್ ತಪಾಸಣೆ ಮತ್ತು ಸಲಹೆ,ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ (ಉಚಿತ ಕನ್ನಡಕ ವಿತರಣೆ)

ಹೃದಯರೋಗ ತಪಾಸಣೆ ಇ.ಸಿ.ಜಿ. ಪರೀಕ್ಷೆ,ಮಹಿಳೆಯರ ಗರ್ಭಕೋಶದ ಉಚಿತ ಪರೀಕ್ಷೆ ಮತ್ತು ಸಲಹೆ ಹಾಗೂ

ಉಚಿತ ಔಷಧಿ ವಿತರಣೆ ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ರಾಜಗೋಪಾಲನಗರ ವಾರ್ಡ್ ಬಿಜೆಪಿ ಮುಖಂಡರು, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯ), ಮಾಜಿ ನಿರ್ದೇಶಕರು, ಸಮೃದ್ಧಿ ಫೌಂಡೇಶನ್ ಸಂಸ್ಥಾಪಕರಾದ ಬಿ ಎನ್ ದಿನೇಶ ಗೌಡ್ರು, ಭಾಜಪ ಮುಖಂಡರಾದ ಅರ್ ಸಿ ಹರೀಶ್ ,ಬೆ. ಉತ್ತರ ಜಿಲ್ಲಾ ಕಾರ್ಯಕರ್ತ ಚಿನ್ಮಯ್ ಜಿ

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನಿರ್ದೇಶಕ ವಸಂತ್ ಶಾಲಾ ಅಡಳಿತ ಮಂಡಳಿ, ಶಿಕ್ಷಕರು, ಪೋಷಕರು ,ವಿದ್ಯಾರ್ಥಿಗಳು ಭಾಗವಹಿಸಿದ್ದರು


ವರದಿ : ಪಬ್ಲಿಕ್ ರೈಡ್ ದೇವರಾಜ್