ಪಬ್ಲಿಕ್ ರೈಡ್ ನ್ಯೂಸ್, ಪೀಣ್ಯ ದಾಸರಹಳ್ಳಿ:
ಬೆಂಗಳೂರು ನಗರಕ್ಕೆ ಆಗಮಿಸಿದ ಬಿಜೆಪಿ ಮುಖಂಡ ನಿತಿನ್ ನಬಿನ್ ಜೀ ಅವರನ್ನು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಗುರು ನಿಶ್ಚಲ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗುರು ನಿಶ್ಚಲ್ ಅವರು ನಿತಿನ್ ನಬಿನ್ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸಿ, ಪುಷ್ಪಗುಚ್ಛ ನೀಡಿ ಗೌರವಿಸಿದರು. ಭೇಟಿಯ ವೇಳೆ ಪಕ್ಷದ ಬೆಳವಣಿಗೆ, ಸಂಘಟನೆ ಬಲವರ್ಧನೆ ಹಾಗೂ ಕ್ಷೇತ್ರದ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದು, ಆತ್ಮೀಯ ವಾತಾವರಣದಲ್ಲಿ ಸ್ವಾಗತ ಸಮಾರಂಭ ನಡೆಯಿತು.
ವರದಿ : ಪಬ್ಲಿಕ್ ರೈಡ್ ನ್ಯೂಸ್