ಕರ್ನಾಟಕ News

Discover the latest headlines in this section.

ದ್ವಿತೀಯ ಪಿಯುಸಿ ಫಲಿತಾಂಶ: ಇಶಾನ್ ಬಿ.ಆರ್ ಅವರಿಗೆ ರಾಜ್ಯದ 8ನೇ ರ್ಯಾಂಕ್

ದ್ವಿತೀಯ ಪಿಯುಸಿ ಫಲಿತಾಂಶ: ಇಶಾನ್ ಬಿ.ಆರ್ ಅವರಿಗೆ ರಾಜ್ಯದ 8ನೇ ರ್ಯಾಂಕ್

ಪಬ್ಲಿಕ್ ರೈಡ್ ನ್ಯೂಸ್, ಪೀಣ್ಯ-ದಾಸರಹಳ್ಳಿ:ಹಾವನೂರು ಸೌಂದರ್ಯ ಪಿಯು ಕಾಲೇಜಿನ ವಿದ್ಯಾರ್ಥಿ ಇಶಾನ್ ಬಿ.ಆರ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಒಟ್ಟು 600 ಅಂಕಗಳಿಗೆ 591 ಅಂಕಗಳನ್ನು (ಶೇ. 98.50) ಗಳಿಸಿ ರಾಜ್ಯ ಮಟ್ಟದಲ್ಲಿ ಎಂಟನೇ ರ್ಯಾಂಕ್ ಪಡೆದುಕೊಂಡಿದ್ದಾರೆ.ಇಶಾನ್ ಅವರ ಈ ಸಾಧನೆಯಿಂದ ತಾವು ಓದಿದ ಕಾಲೇಜಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಯ ಶ್ರದ್ಧೆ, ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನಕ್ಕೆ ಈ ಯಶಸ್ಸು ಸಾಕ್ಷಿಯಾಗಿದೆ.ಕಾಲೇಜಿನ ವತಿಯಿಂದ ಇಶಾನ್ ಅವರನ್ನು ಅಭಿನಂದಿಸಲಾಗಿದೆ. ಮುಂದಿನ ವಿದ್ಯಾಭ್ಯಾಸಕ್ಕೂ ಶುಭ ಹಾರೈಸಲಾಗಿದೆ.ವರದಿ: ಪಬ್ಲಿಕ್ ರೈಡ್, ದೇವರಾಜ್

Apr 15, 2026 | 06:10 AM
126 0
ಕಣಗಲಾ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ

ಕಣಗಲಾ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ

ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಇಂದು (14-04-2026) ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮ ಪಂಚಾಯತ್ ಕಚೇರಿ, ಸರ್ಕಾರಿ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಲಕರ ವಸತಿ ನಿಲಯ ಹಾಗೂ ತಲಾಠಿ ಕಚೇರಿಗಳಲ್ಲಿ ಕಾರ್ಯಕ್ರಮಗಳು ನಡೆದವು.ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸೂಚಿಸಿದರು. ಸಮಾನತೆ ಮತ್ತು ನ್ಯಾಯದ ಸಂದೇಶ ಸಾರುವ ಈ ದಿನದ ಮಹತ್ವವನ್ನು ಎಲ್ಲರೂ ಒತ್ತಿ ಹೇಳಿದರು.ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಪತ್ರಕರ್ತರು ಭಾಗವಹಿಸಿದರು.ಬೆಳಗಾವಿ ವರದಿಗಾರರು: ಸಂತೋಷ ನಿರ್ಮಲೆ

Apr 14, 2026 | 12:21 PM
158 0