ಕರ್ನಾಟಕ News

Discover the latest headlines in this section.

ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹3 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ, ಓರ್ವ ಅರೆಸ್ಟ್

ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹3 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ, ಓರ್ವ ಅರೆಸ್ಟ್

ಬೆಳಗಾವಿ: ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲು ಸಿಸಿಬಿ ಪೊಲೀಸರು ನಿರಂತರ ಕಾರ್ಯಾಚರಣೆ ಮುಂದುವರಿಸಿದ್ದು, ಇದೀಗ ಮತ್ತೊಂದು ಯಶಸ್ವಿ ದಾಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ನಗರದ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 48ರ ಸರ್ವಿಸ್ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಮಹಾರಾಷ್ಟ್ರ ಮೂಲದ ಸೈಯ್ಯದ್ ನಿಸಾರ್ ಸೈಯ್ಯದ್ ಇಸಾಕ್ (40) ಎಂಬಾತನನ್ನು ಬಂಧಿಸಲಾಗಿದೆ.ಬಂಧಿತನಿಂದ ಸುಮಾರು 6 ಕೆಜಿ 145 ಗ್ರಾಂ ಗಾಂಜಾ, ಒಂದು ವಿವೋ ಮೊಬೈಲ್ ಫೋನ್ ಸೇರಿದಂತೆ ಒಟ್ಟು ₹3.10 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯವೇ ಸುಮಾರು ₹3.05 ಲಕ್ಷ ಎಂದು ಅಂದಾಜಿಸಲಾಗಿದೆ.ಸಿಸಿಬಿ ಇನ್ಸ್‌ಪೆಕ್ಟರ್ ಮಂಜುನಾಥ ನಾಯಕ, ಮಂಜುನಾಥ ಭಜಂತ್ರಿ ಹಾಗೂ ಸಿಬ್ಬಂದಿ ತಂಡದ ಕಾರ್ಯಾಚರಣೆಯಲ್ಲಿ ಈ ಯಶಸ್ಸು ದೊರೆತಿದೆ. ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಸಿಸಿಬಿ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಹಿನ್ನೆಲೆ ಹಾಗೂ ಗಾಂಜಾ ಪೂರೈಕೆ ಜಾಲದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

May 12, 2026 | 01:52 PM
60 0
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ: 12 ವರ್ಷದ ಬಾಲಕ ಬಲಿ

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ: 12 ವರ್ಷದ ಬಾಲಕ ಬಲಿ

ಮಲೆ ಮಹದೇಶ್ವರ ಬೆಟ್ಟ: ನಾಗಮಲೆ ಮಾರ್ಗದಲ್ಲಿ ಚಿರತೆ ದಾಳಿಗೆ 12 ವರ್ಷದ ಬಾಲಕ ಬಲಿಯಾದ ಹೃದಯವಿದ್ರಾವಕ ಘಟನೆ ನಿನ್ನೆ ಬೆಳಗ್ಗೆ ನಡೆದಿದೆ. ಮೃತ ಬಾಲಕನನ್ನು ಹರ್ಷಿತ್ ಗೌಡ ಎಂದು ಗುರುತಿಸಲಾಗಿದೆ.ಬೆಂಗಳೂರು ನಗರದ ಲಗ್ಗೆರೆ ವಾರ್ಡಿನ ಕುಟುಂಬವು ದೇವರ ದರ್ಶನಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ. ಕುಟುಂಬಸ್ಥರ ಕಣ್ಣೆದುರೇ ಚಿರತೆ ಬಾಲಕನ ಮೇಲೆ ದಾಳಿ ನಡೆಸಿ, ಪೊದೆಗಳೊಳಗೆ ಎಳೆದೊಯ್ದಿರುವುದು ಆತಂಕ ಸೃಷ್ಟಿಸಿದೆ.ಈ ಘಟನೆ ಇಂಡಿಗನತ್ತ ಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ನಂತರ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ಸೇರಿಕೊಂಡು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದರು. ಬಳಿಕ ಅರಣ್ಯ ಪ್ರದೇಶದಲ್ಲೇ ಬಾಲಕನ ಶವ ಪತ್ತೆಯಾಯಿತು.ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ, ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಘಟನೆಯ ನಂತರ ನಾಗಮಲೆ ಮಾರ್ಗದ ಭದ್ರತೆ ಕುರಿತು ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ. ಪ್ರವಾಸಿಗರಲ್ಲಿ ಆತಂಕ ಹೆಚ್ಚಾಗಿದ್ದು, ಎಂಎಂ ಹಿಲ್ಸ್ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

May 11, 2026 | 11:11 AM
204 0
ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಹೊಸ ಇನ್ಸ್ಪೆಕ್ಟರ್ ನೇಮಕ

ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಹೊಸ ಇನ್ಸ್ಪೆಕ್ಟರ್ ನೇಮಕ

ಧಾರವಾಡ: ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷ್ನರೇಟ್ ವ್ಯಾಪ್ತಿಯ ಧಾರವಾಡ ಉಪನಗರ ಪೊಲೀಸ್ ಠಾಣೆಯ ಖಾಲಿ ಇದ್ದ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆ ಇದೀಗ ಭರ್ತಿಯಾಗಿದೆ.ಹುಕ್ಕೇರಿ ತಾಲೂಕಿನ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ್ ಕಲ್ಲಪ್ಪ ಬಸಾಪುರ್ ಅವರನ್ನು ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಬಹುದಿನಗಳಿಂದ ಈ ಹುದ್ದೆ ಖಾಲಿ ಇದ್ದ ಹಿನ್ನೆಲೆ, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಂಗೆನಹಳ್ಳಿ ಅವರು ಹುಬ್ಬಳ್ಳಿ ಹಾಗೂ ಧಾರವಾಡ ಉಪನಗರ ಪೊಲೀಸ್ ಠಾಣೆಗಳ ಎರಡು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು.ಈ ನೇಮಕಾತಿಯಿಂದ ಧಾರವಾಡ ಉಪನಗರ ಪೊಲೀಸ್ ಠಾಣೆಯ ಆಡಳಿತ ಮತ್ತು ಕಾನೂನು ಸುವ್ಯವಸ್ಥೆ ಕಾರ್ಯಗಳಿಗೆ ಮತ್ತಷ್ಟು ಚುರುಕು ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಸ್ಥಳೀಯರು ಹಾಗೂ ಸಾರ್ವಜನಿಕ ವಲಯದಲ್ಲೂ ಹೊಸ ಇನ್ಸ್ಪೆಕ್ಟರ್ ನೇಮಕಕ್ಕೆ ಸ್ವಾಗತ ವ್ಯಕ್ತವಾಗಿದೆ.ಬಹುಕಾಲದಿಂದ ಖಾಲಿ ಇದ್ದ ಪ್ರಮುಖ ಹುದ್ದೆ ಭರ್ತಿಯಾಗಿರುವುದರಿಂದ ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

May 11, 2026 | 04:02 AM
183 0
ಪ್ರಕ್ರಿಯಾ ಹಾಸ್ಪಿಟಲ್ಸ್‌ನಿಂದ ‘ಪ್ರಕ್ರಿಯಾ ಕ್ಯಾನ್ಸರ್ ಕೇರ್’ ಆರಂಭ: ಸಮಗ್ರ ಆಂಕೊಲಾಜಿ ಸೇವೆಗಳ ವಿಸ್ತರಣೆ

ಪ್ರಕ್ರಿಯಾ ಹಾಸ್ಪಿಟಲ್ಸ್‌ನಿಂದ ‘ಪ್ರಕ್ರಿಯಾ ಕ್ಯಾನ್ಸರ್ ಕೇರ್’ ಆರಂಭ: ಸಮಗ್ರ ಆಂಕೊಲಾಜಿ ಸೇವೆಗಳ ವಿಸ್ತರಣೆ

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಎಂಟನೇ ಮೈಲಿಯ ಪ್ರಕ್ರಿಯಾ ಹಾಸ್ಪಿಟಲ್ಸ್, ತನ್ನ ಸಮಗ್ರ ಕ್ಯಾನ್ಸರ್ ಕೇಂದ್ರವಾದ 'ಪ್ರಕ್ರಿಯಾ ಕ್ಯಾನ್ಸರ್ ಕೇರ್' ಮತ್ತು ವಿಕಿರಣ ಚಿಕಿತ್ಸಾ (ರೇಡಿಯೋಥೆರಪಿ) ವಿಭಾಗವನ್ನು ಉದ್ಘಾಟಿಸುವ ಮೂಲಕ ಆರೋಗ್ಯ ಸೇವೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಸುಧಾರಿತ ಮತ್ತು ಕರುಣಾಭರಿತ ಕ್ಯಾನ್ಸರ್ ಚಿಕಿತ್ಸೆಯನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಈ ನೂತನ ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದೆ.ಕಾರ್ಯಕ್ರಮದಲ್ಲಿ ಶಾಸಕ ಎಸ್ ಮುನಿರಾಜು ಮಾತನಾಡಿ 'ಇಂತಹ ಸಮಗ್ರ ಕ್ಯಾನ್ಸರ್ ಕೇರ್ ಸೌಲಭ್ಯದ ಪ್ರಾರಂಭವು ವಿಶೇಷ ಆರೋಗ್ಯ ಸೇವೆಯ ಲಭ್ಯತೆಯನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಸುಧಾರಿತ ಮತ್ತು ರೋಗಿ-ಕೇಂದ್ರಿತ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಸೇವೆಗಳ ಅಗತ್ಯತೆಯನ್ನು ಇದು ಪ್ರತಿಬಿಂಬಿಸುತ್ತದೆ. ಈ ಅರ್ಥಪೂರ್ಣ ಉಪಕ್ರಮಕ್ಕಾಗಿ ನಾನು ಪ್ರಕ್ರಿಯಾ ಹಾಸ್ಪಿಟಲ್ಸ್ ಅನ್ನು ಅಭಿನಂದಿಸುತ್ತೇನೆ' ಎಂದರು. ಪ್ರಕ್ರಿಯಾ ಹಾಸ್ಪಿಟಲ್ಸ್‌ನ ಸಿಇಒ ಮತ್ತು ಮೂಳೆರೋಗ ಆಂಕೊಸರ್ಜನ್ ಡಾ. ಶ್ರೀನಿವಾಸ್ ಚಿರಕುರಿ, “ವಾಯುವ್ಯ ಬೆಂಗಳೂರಿನಲ್ಲಿ ಸ್ಥಾಪಿಸಲಾದ ಮೊದಲ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್ ಇದಾಗಿದೆ. ದೀರ್ಘಕಾಲದಿಂದ ಕ್ಯಾನ್ಸರ್ ಚಿಕಿತ್ಸೆಯಿಂದ ವಂಚಿತರಾಗಿದ್ದ ಕರ್ನಾಟಕದ ನೆರೆಯ ಜಿಲ್ಲೆಗಳ ರೋಗಿಗಳಿಗೆ ಇದು ವರದಾನವಾಗಲಿದೆ. ಪ್ರತಿದಿನ ನೂರಾರು ರೋಗಿಗಳು ರೇಡಿಯೋಥೆರಪಿ, ಕಿಮೋಥೆರಪಿ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಪ್ರಕ್ರಿಯಾ ಕ್ಯಾನ್ಸರ್ ಕೇರ್ ಈ ರೋಗಿಗಳ ಪ್ರಯಾಣದ ಸಮಯ ಮತ್ತು ಒಟ್ಟಾರೆ ಚಿಕಿತ್ಸಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಇತರ ಕೇಂದ್ರಗಳಿಗಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಯನ್ನು ನಾವು ನೀಡುತ್ತಿದ್ದೇವೆ,” ಎಂದು ಹೇಳಿದರು.ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್  ನಿರ್ಮಾಪಕ ಈ ಕೃಷ್ಣಪ್ಪ  ಮಾಜಿ ಶಾಸಕ ಶ್ರೀನಿವಾಸ್ ಮೂರ್ತಿ  ಪ್ರಕ್ರಿಯ  ಆಸ್ಪತ್ರೆಯ ಸಿಇಒ  ಶ್ರೀನಿವಾಸ್ ಚಿರುಕುರಿ   ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್  ಜೆಡಿಎಸ್ ಮುಖಂಡ ಮುನೇಗೌಡ ಎಂ ಇನ್ನು ಮುಂತಾದವರು  ಉಪಸ್ಥಿತರಿದ್ದರು   ವರದಿ : ಪಬ್ಲಿಕ್ ರೈಡ್ ದೇವರಾಜ್

May 10, 2026 | 03:45 PM
41 0
"ದಾಸರಹಳ್ಳಿ ಕ್ಷೇತ್ರದ ಯುವ ಮೋರ್ಚಾ ಬಿಜೆಪಿ ಅಧ್ಯಕ್ಷರಾಗಿ ಭರತ್ ಸೌಂದರ್ಯ ನೇಮಕಕ್ಕೆ  ಅಭಿನಂದನೆಗಳ ಮಹಾಪೂರಾ"

"ದಾಸರಹಳ್ಳಿ ಕ್ಷೇತ್ರದ ಯುವ ಮೋರ್ಚಾ ಬಿಜೆಪಿ ಅಧ್ಯಕ್ಷರಾಗಿ ಭರತ್ ಸೌಂದರ್ಯ ನೇಮಕಕ್ಕೆ ಅಭಿನಂದನೆಗಳ ಮಹಾಪೂರಾ"

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಬಿಜೆಪಿ ಪಕ್ಷದ ನಿಷ್ಠಾವಂತ ಪ್ರಾಮಾಣಿಕತೆ ಪಕ್ಷ ಸಂಘಟನೆಯ ಚಾತುರ್ಯ ಹಾಗೂ  ಸರಳ ಸಜ್ಜನಿಕೆ ವ್ಯಕ್ತಿತ್ವದ ಹೊಂದಿದ ವ್ಯಕ್ತಿ ಬಡವರ ದೀನ ದಲಿತರ ನಿರ್ಗತಿಕ ಮತ್ತು ವಿದ್ಯಾರ್ಥಿಗಳ ಆಶಾಕಿರಣವಾದ  ವ್ಯಕ್ತಿ  ಭರತ್ ಸೌಂದರ್ಯ ಅವರನ್ನು ಕ್ಷೇತ್ರದ ಶಾಸಕ ಎಸ್.ಮುನಿರಾಜು ಅವರ  ನಿರ್ದೇಶನ ಮಾರ್ಗದರ್ಶನದಿಂದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ  ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಅಧ್ಯಕ್ಷರಾಗಿ  ನೇಮಕಗೊಂಡ ನೂತನ ಅಧ್ಯಕ್ಷ  ಭರತ್ ಸೌಂದರ್ಯ ಅವರಿಗೆ ಕ್ಷೇತ್ರದ ಶಾಸಕ ಎಸ್ ಮುನಿರಾಜು,ಬಿಜೆಪಿ ಅಧ್ಯಕ್ಷ ಸೇರಿದಂತೆ ಮುಖಂಡರು ಮಹಿಳೆಯರು ಯುವಕರು ಯುವತಿಯರು ಮುಂತಾದವರು ಅಭಿನಂದನೆ ತಿಳಿಸಿದ್ದಾರೆ.ವರದಿ : ಪಬ್ಲಿಕ್ ರೈಡ್ ದೇವರಾಜ್

May 8, 2026 | 03:40 PM
60 0
ಬ್ರೇಕಿಂಗ್: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ವಲಯ ಕಚೇರಿಗಳಲ್ಲಿ ಲೋಕಾಯುಕ್ತ ದಾಳಿ

ಬ್ರೇಕಿಂಗ್: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ವಲಯ ಕಚೇರಿಗಳಲ್ಲಿ ಲೋಕಾಯುಕ್ತ ದಾಳಿ

ಹುಬ್ಬಳ್ಳಿ 08/05/2026: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಾಲ್ಕು ಪ್ರಮುಖ ವಲಯ ಕಚೇರಿಗಳ ಮೇಲೆ ಇಂದು ಮುಂಜಾನೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಲಯ ಸಂಖ್ಯೆ 6, 7, 10 ಮತ್ತು 11 ರ ಕಚೇರಿಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.ಈ ಸಮಯದಲ್ಲಿ ದಾಖಲೆಗಳು, ಲೆಕ್ಕಪತ್ರಗಳು ಮತ್ತು ಇತರ ಸೂಕ್ಷ್ಮ ದಾಖಲೆಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.ಕೇವಲ ಕೆಲವೇ ದಿನಗಳ ಹಿಂದೆ 'ಪಬ್ಲಿಕ್ ರೈಡ್' ಪತ್ರಿಕೆಯು ವಲಯ ಸಂಖ್ಯೆ 10 ರ ಕಚೇರಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ಕುರಿತು ವರದಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಲೋಕಾಯುಕ್ತ ಈ ಕಾರ್ಯಾಚರಣೆಗೆ ಮುಂದಾಗಿದ್ದಾರೆಂದು ಶಂಕಿಸಲಾಗಿದೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಯ ಸಂದರ್ಭದಲ್ಲಿ ವಲಯ ಕಚೇರಿಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸಿಬ್ಬಂದಿಗಳು ಕಳವಳಕ್ಕೊಳಗಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಲೋಕಾಯುಕ್ತದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಹೆಚ್ಚಿನ ವಿವರಗಳು ಬರಬೇಕಾಗಿದೆ.

May 8, 2026 | 07:29 AM
122 0
ಧಾರವಾಡ:ಮನೆ ಕಟ್ಟಲು ತೋಡಿದ ನೀರಿನ ಗುಂಡಿಯಲ್ಲಿ ಇಬ್ಬರು ಬಾಲಕರ ದಾರುಣ ಮೃತ್ಯು

ಧಾರವಾಡ:ಮನೆ ಕಟ್ಟಲು ತೋಡಿದ ನೀರಿನ ಗುಂಡಿಯಲ್ಲಿ ಇಬ್ಬರು ಬಾಲಕರ ದಾರುಣ ಮೃತ್ಯು

ಧಾರವಾಡ: ಮನೆ ಕಟ್ಟಲು ತೋಡಿದ್ದ ನೀರಿನ ತುಂಬಿದ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಮನಸೂರು ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.ಮೃತರನ್ನು ಗ್ರಾಮದ ಕುಮಾರ್ ನಿಂಗಪ್ಪ ಮುದಕಣ್ಣವರ (7) ಮತ್ತು ಧಾರವಾಡದ ಸತ್ತೂರು ನಿವಾಸಿಯಾಗಿದ್ದು, ತವರು ಮನೆಗೆ ಬಂದಿದ್ದ ಪ್ರಥಮ್ ಉಳ್ಳಾಗಡ್ಡಿ (7) ಎಂದು ಗುರುತಿಸಲಾಗಿದೆ.ಬುಧವಾರ ಸಂಜೆ ಆಟವಾಡಲು ಹೋದ ಬಾಲಕರು ರಾತ್ರಿಯಾದರೂ ಮನೆಗೆ ಮರಳದಿದ್ದಾಗ ಕುಟುಂಬಸ್ಥರು ತೀವ್ರ ಆತಂಕಕ್ಕೊಳಗಾಗಿ ಹುಡುಕಾಟ ಆರಂಭಿಸಿದರು. ತಡರಾತ್ರಿ ವೇಳೆ ಗ್ರಾಮದಲ್ಲಿಯೇ ಮನೆ ಕಟ್ಟಲು ತೋಡಿದ್ದ ನೀರಿನ ಗುಂಡಿಯಲ್ಲಿ ಬಾಲಕರು ಬಿದ್ದಿರುವುದು ಪತ್ತೆಯಾಯಿತು. ಒಳಗೆ ಇಳಿದು ನೋಡುವಷ್ಟರಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಗುಂಡಿ ತೋಡಿದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಈ ದುರ್ಘಟನೆಯಿಂದ ಎರಡೂ ಕುಟುಂಬಗಳಲ್ಲಿ ಶೋಕಾಕುಲ ವಾತಾವರಣ ನೆಲೆಸಿದ್ದು, ಗ್ರಾಮದಲ್ಲಿ ದುಃಖದ ಅಲೆ ಸಂಚರಿಸುತ್ತಿದೆ.

May 7, 2026 | 04:18 AM
165 0
ಹೆಸ್ಕಾಂನಿಂದ ಜನಪರ ಕಾರ್ಯ : ಅಧ್ಯಕ್ಷ ಸೈಯದ್‌ ಅಜೀಮ್‌ಪೀರ್‌ ಎಸ್‌ ಖಾದ್ರಿ

ಹೆಸ್ಕಾಂನಿಂದ ಜನಪರ ಕಾರ್ಯ : ಅಧ್ಯಕ್ಷ ಸೈಯದ್‌ ಅಜೀಮ್‌ಪೀರ್‌ ಎಸ್‌ ಖಾದ್ರಿ

ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ  ರೂ.10 ಪೈಸೆ ಮರುಪಾವತಿಗ್ರಾಹಕರ ಸೇವೆಯೆ ನಮ್ಮ ಮೊದಲ ಆದ್ಯತೆಹುಬ್ಬಳ್ಳಿ, ಮೇ 06, 2026 :  ಇಂಧನ ಸಚಿವರಾದ ಕೆ.ಜೆ ಜಾರ್ಜ್‌ ಅವರ ಮಾರ್ಗದರ್ಶನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹೆಸ್ಕಾಂ, 2024-25ರ ಸಾಲಿನಲ್ಲಿ 153.46 ಕೋಟಿ ರೂ. ಉಳಿತಾಯ ಮಾಡಿದ್ದು, ಈ ಹಣವನ್ನು ಗ್ರಾಹಕರಿಗೆ ಮರು ಪಾವತಿಸುತ್ತಿದ್ದೇವೆ ಎಂದು ಹೆಸ್ಕಾಂ ಅಧ್ಯಕ್ಷರಾದ ಸೈಯದ್‌ ಅಜೀಮ್‌ಪೀರ್‌ ಎಸ್‌. ಖಾದ್ರಿ ಅವರು ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವಿದ್ಯುತ್ ಖರೀದಿ, ಪೂರೈಕೆಯನ್ನು ಉತ್ತಮವಾಗಿ ನಿರ್ವಹಿಸಿದ ಪರಿಣಾಮ 2024-2025ರಲ್ಲಿ ಹೆಸ್ಕಾಂ 153.46 ಕೋಟಿ ರೂ. ಉಳಿತಾಯ ಮಾಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಆದೇಶದ ಅನ್ವಯ 2024-25 ನೇ ಆರ್ಥಿಕ ವರ್ಷದ ಪ್ರತಿಯೊಬ್ಬ ಗ್ರಾಹಕರಿಗೆ ಮಾತ್ರ 2024-25ನೇ ಸಾಲಿನ ಅವಧಿಯಲ್ಲಿ ಅವರ ನಿಜವಾದ ಬಳಕೆಯನ್ನು ಆಧರಿಸಿ ಪ್ರತಿ ಯೂನಿಟ್‌ಗೆ 10 ಪೈಸೆಯಂತೆ 2026-2027ರಲ್ಲಿ ಪ್ರತಿ ತಿಂಗಳು  ಸಮಾನ ಕಂತುಗಳಲ್ಲಿ (12 ಕಂತುಗಳು) ಮರು ಪಾವತಿಸಲಾಗುತ್ತದೆ. ಈ ಮೊತ್ತವನ್ನು ವಿದ್ಯುತ್‌ ಬಿಲ್‌ನಲ್ಲಿ ಆರ್ಥಿಕ ವರ್ಷ (FY) 25 ಟ್ರೂ ಅಪ್‌ ಶುಲ್ಕ ಎಂದು ಪ್ರತ್ಯೇಕವಾಗಿ ನಮೂದಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಸದಾ ರೈತರ ಪರ ಕೆಲಸ ಮಾಡುತ್ತಿದೆ. ರೈತರಿಗೆ ಹಗಲು ಹೊತ್ತಿನಲ್ಲಿಯೇ ಏಳು ಗಂಟೆಗಳ ಕಾಲ ವಿದ್ಯುತ್‌ ನೀಡುವ ನಿಟ್ಟಿನಲ್ಲಿ ಕುಸುಮ್‌ ಬಿ ಹಾಗೂ ಕುಸುಮ್‌ ಸಿ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಹಕರಿಗೆ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆ ಯಶಸ್ವಿಯಾಗಿದೆ. ಮುಖ್ಯಮಂತ್ರಿಗಳ ಹಾಗೂ ಇಂಧನ ಸಚಿವರ ಸಹಕಾರದೊಂದಿಗೆ ಹೆಸ್ಕಾಂ ಜನಪರವಾಗಿ ಕೆಲಸ ಮಾಡುತ್ತಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ನವೀಕೃತ ಶೀಘ್ರ ಸಂಪರ್ಕ ಯೋಜನೆಯನ್ನೂ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

May 7, 2026 | 01:38 AM
40 0
ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಬಳಕೆಗೆ ರೂ.1000 ದಂಡ; ಹೊಸ ಕಾನೂನು ಜಾರಿ

ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಬಳಕೆಗೆ ರೂ.1000 ದಂಡ; ಹೊಸ ಕಾನೂನು ಜಾರಿ

ಧಾರವಾಡ: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು, ತಂಬಾಕು ಉತ್ಪನ್ನಗಳನ್ನು ಬಳಸಿದವರಿಗೆ ಈಗ ರೂ.200 ಬದಲಿಗೆ ರೂ.1000 ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಪ್ರಕಟಣೆ ಹೊರಡಿಸಿದ್ದಾರೆ.ಕರ್ನಾಟಕ ತಂಬಾಕು ತಿದ್ದುಪಡಿ ಅಧಿನಿಯಮ-2024ರಂತೆ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಹಿಂದೆ ರೂ.200 ಇದ್ದ ದಂಡವನ್ನು ಹೆಚ್ಚಿಸಿ ರೂ.1,000 ವರೆಗೆ ವಿಧಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.ಹೆಚ್ಚುವರಿಯಾಗಿ, ಹುಕ್ಕಾ ಬಾರ್ ನಡೆಸುವವರಿಗೆ ಕನಿಷ್ಠ 1 ವರ್ಷದಿಂದ ಗರಿಷ್ಠ 3 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಮತ್ತು ರೂ.50,000ದಿಂದ ರೂ.1 ಲಕ್ಷದವರೆಗೆ ದಂಡ ವಿಧಿಸಲಾಗುವುದು.21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ, ಹಾಗೂ ಶಿಕ್ಷಣ ಸಂಸ್ಥೆಗಳ 100 ಮೀಟರ್ ಸುತ್ತಳತೆಯೊಳಗೆ ಸಿಗರೇಟ್ ಅಥವಾ ಬಿಡಿ ತಂಬಾಕು ಮಾರಾಟ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ರೂ.1,000 ವರೆಗೆ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.ಸಾರ್ವಜನಿಕರು ಹೊಸ ನಿಯಮಗಳನ್ನು ಪಾಲಿಸಬೇಕು. ಉಲ್ಲಂಘನೆ ಕಂಡುಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬಹುದು.

May 6, 2026 | 01:33 AM
70 0
ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಮಾನತೆಯ ತತ್ವ ನಾವೆಲ್ಲ ಪಾಲಿಸಬೇಕು: ಶಾಸಕ ಎಸ್. ಮುನಿರಾಜು

ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಮಾನತೆಯ ತತ್ವ ನಾವೆಲ್ಲ ಪಾಲಿಸಬೇಕು: ಶಾಸಕ ಎಸ್. ಮುನಿರಾಜು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಅಂಬೇಡ್ಕರ್ ಅವರು ಭಾರತ ಭಾಗ್ಯ ವಿಧಾತರೆಂಬ ಅಭಿದಾನದೊಂದಿಗೆ ನಮಗೆಲ್ಲಾ ಸಂವಿಧಾನ ರೂಪಿಸಿ, ಸರ್ವಸಮಾನತೆಯನ್ನು ಹಂಬಲಿಸಿದವರು. ಭಾರತವು ಸ್ವಾತಂತ್ರ್ಯ ಆಗುವುದರೊಂದಿಗೆ - ಸಂವಿಧಾನ ಕೂಡಾ ಜೊತೆ ಜೊತೆಗೆ ನಮಗೆಲ್ಲಾ ಜಾತ್ಯಾತೀತ ಪರಿಕಲ್ಪನೆ ಯನ್ನು ಒಡಮೂಡಿಸಿದ ಕೀರ್ತಿಗೆ ಅಂಬೇಡ್ಕರ್ ಅವರು ಭಾಜನರು" ಎಂದು ಶಾಸಕ ಎಸ್. ಮುನಿರಾಜು ನುಡಿದರು.ಹಾವನೂರು ಬಡಾವಣೆಯಲ್ಲಿ ಕನ್ನಡಿಗರ ಕಹಳೆ ಹಿತರಕ್ಷಣಾ ವೇದಿಕೆ ಮತ್ತು ಕನ್ನಡ ಸಂಘಟನೆಗಳ ಕಾರ್ಮಿಕರ ಒಕ್ಕೂಟದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ 135 ನೇ ಜಯಂತಿ, ಬಸವೇಶ್ವರ ಜಯಂತಿ, ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.ಸಾಹಿತಿ ವೈ.ಬಿ.ಎಚ್. ಜಯದೇವ್ ಮಾತನಾಡಿ,' ಜಗತ್ತಿನ ಎಲ್ಕಾ ದಾರ್ಶನಿಕರ ಆಶಯ ಹಾಗೂ ಆದರ್ಶಗಳು ಸಮಾನತೆಯನ್ನು ಸಾರುತ್ತವೆ. ಸತ್ಯ,ಅಹಿಂಸೆ ಹಾಗೂ ತ್ಯಾಗವನ್ನು ಪ್ರತಿಪಾದಿಸುವ ಈ ಮಹಾನುಭಾವರ ಹಾದಿಯಲ್ಲಿ ಇಂದಿನ ಆಧುನಿಕ ಯುವ ಜನಾಂಗ ಸಾಗಬೇಕಿದೆ. ಅನಾಚಾರ, ದುರಾಚಾರಗಳ ಮಾರ್ಗದಲ್ಲಿ ನಡೆಯುತ್ತಿರುವ ಶೋಷಣೆ, ಅತ್ಯಾಚಾರ ಮುಂತಾದ ಅಪಸವ್ಯಗಳನ್ನು ನಿವಾರಿಸಲು ಈ ಮಹಾತ್ಮರ ತತ್ವಗಳನ್ನು, ಆದರ್ಶಗಳನ್ನು ಪಾಲಿಸುವುದೇ ನಿಜಕ್ಕೂ ನಮ್ಮ ಮುಂದೆ ಇರುವ ಮಹಾಮಾರ್ಗ' ಎಂದರು. ಕನ್ನಡಿಗರ ಕಹಳೆ ಹಿತರಕ್ಷಣಾ ವೇದಿಕೆ ಸಂಸ್ಥಾಪಕಿ ಸುನಿತಾ ಬಾಯಿ ಎಲ್ ಮಾತನಾಡಿ,' ನಮ್ಮ ವೇದಿಕೆಯಿಂದ ನಾಡು ನುಡಿ ರಕ್ಷಣೆ ಅಲ್ಲದೆ ಸಮಾಜ ಸೇವೆ ಸಾಂಸ್ಕೃತಿಕ ಚಟುವಟಿಕೆಯನ್ನು ಕೂಡ ನಾವು ತೊಡಗಿಸಿಕೊಂಡಿದ್ದೇವೆ. ಇಂದು ಸಮಾಜದಲ್ಲಿ ಗಣ್ಯರನ್ನು ಮತ್ತು ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ' ಎಂದರು.ಎ.ಬಿ.ಬಿ. ಮಂಜಣ್ಣ ಅವರು ಮಾತನಾಡಿ" ಅಂಬೇಡ್ಕರ್ ಅವರ ಕನಸುಗಳನ್ನು ಸಾಕಾರಗೊಳಿಸುವಲ್ಲಿ ನಮ್ಮ ಸಂಘಟನೆಗಳ ಪಾತ್ರ ಮಹತ್ತರವಾದುದು. ಈ ದಿಸೆಯಲ್ಲಿ ಕನ್ನಡಿಗರ ಕಹಳೆ ಹಿತರಕ್ಷಣಾ ವೇದಿಕೆ ಅತ್ಯಂತ ಸಮರ್ಥವಾಗಿ ಶ್ರಮಿಸುತ್ತಿದೆ. ಸಮಾನತೆ ಹಾಗೂ ಮಹಿಳಾ ಸಬಲತೆಗಾಗಿ ಆಶಿಸಿದ ಅಂಬೇಡ್ಕರ್ ಅವರ ತತ್ವಗಳು ಎಲ್ಲರ ಮನೆ ಮಾತಾಗಬೇಕು " ಎಂದು ನುಡಿದರುಸಮಾರಂಭದಲ್ಲಿ ಶ್ರೀ ಮಾರುತಿ ಕೋಲಾಟ ತಂಡದಿಂದ ಮಹಿಳೆಯರು ಜಾನಪದ ಗೀತೆಗಳಿಗೆ ಕೋಲಾಟ, ಭರತನಾಟ್ಯ ಮತ್ತು ಸಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕಾರ್ಮಿಕರತ್ನ, ಆದರ್ಶ ಸ್ಪೂರ್ತಿ ರತ್ನ, ಮಾಧ್ಯಮ ರತ್ನ, ವಿದ್ಯಾರ್ಥಿ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಇದೇ ವೇಳೆ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿ ಉಚಿತ ಕನ್ನಡಕ, ವಾಕಿಂಗ್ ಸ್ಟಿಕ್, ಪೌರಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್, ಮಾಸ್ಕ್ ವಿತರಣೆ ಮಾಡಲಾಯಿತು.ಸಮಾಜ ಸೇವಕ ಮಂಜುನಾಥ್ (ಎಬಿಬಿ), ಸಮಾಜಸೇವಕರಾದ ಭರತ್ ಸೌಂದರ್ಯ, ಬಿ. ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಆನಂದ್ ರೆಡ್ಡಿ, ಅಭಯಕೃಷ್ಣಯ್ಯ, ಬುಲೆಟ್ ಬಾಬು, ಪತ್ರಕರ್ತ ಪ್ರಶಾಂತ್ ಗೌಡ, ಪ್ರಜಾವಾಣಿ ವರದಿಗಾರ ಪ್ರಸನ್ನ ಕುಮಾರ್.ವೇದಿಕೆ ರಾಜ್ಯಾಧ್ಯಕ್ಷ ಗಣೇಶ್ ಭಾರದ್ವಾಜ್, ಕನ್ನಡ ಸಂಘಟನೆಗಳ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಮಂಜುನಾಥ್ ಮುಂತಾದವರಿದ್ದರು. ವರದಿ:ಪಬ್ಲಿಕ್ ರೈಡ್ ದೇವರಾಜ್

May 3, 2026 | 04:54 AM
245 0
ಹುಬ್ಬಳ್ಳಿ: ಪೇಪರ್ ಲೇಸ್ ಡಿಜಿಟಲ್ ನೋಂದಣಿಯಿಂದ ತೀವ್ರ ತೊಂದರೆ; ಹಿಂದಿನ ವ್ಯವಸ್ಥೆ ಮುಂದುವರೆಸಲು ಆಗ್ರಹ

ಹುಬ್ಬಳ್ಳಿ: ಪೇಪರ್ ಲೇಸ್ ಡಿಜಿಟಲ್ ನೋಂದಣಿಯಿಂದ ತೀವ್ರ ತೊಂದರೆ; ಹಿಂದಿನ ವ್ಯವಸ್ಥೆ ಮುಂದುವರೆಸಲು ಆಗ್ರಹ

ಹುಬ್ಬಳ್ಳಿ: ರಾಜ್ಯ ಸರ್ಕಾರವು ಕಾವೇರಿ ತಂತ್ರಾಂಶದ ಮೂಲಕ ಪೇಪರ್ ಲೇಸ್ ಡಿಜಿಟಲ್ ನೋಂದಣಿ ಜಾರಿಗೆ ಮುಂದಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಯೋಜನೆಯಿಂದ ಆಸ್ತಿ ದಾಖಲಾತಿಗೆ ಯಾವುದೇ ಭದ್ರತೆ ಇಲ್ಲದಂತಾಗಿದ್ದು, ಡಿಜಿ ಲಾಕರ್ನಲ್ಲಿ ದಾಖಲೆಗಳು ಸೇವ್ ಆಗುವುದರಿಂದ ಆಸ್ತಿ ಖರೀದಿದಾರರಿಗೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಧಾರವಾಡ ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರರ ಟ್ರಸ್ಟ್ ಆರೋಪಿಸಿದೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ನ ಜಿಲ್ಲಾಧ್ಯಕ್ಷ ಶಾಂತರಾಜ ಪೋಳ, ಕೂಡಲೇ ಸರ್ಕಾರವು ಪೇಪರ್ ಲೇಸ್ ಜೊತೆಗೆ ಹಿಂದಿನ ಪತ್ರ ವ್ಯವಹಾರದ ನೋಂದಣಿ ವ್ಯವಸ್ಥೆಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು."ಹಲವಾರು ವರ್ಷಗಳಿಂದ ಆಸ್ತಿ ಖರೀದಿ, ಮಾರಾಟ ಸೇರಿದಂತೆ ಎಲ್ಲ ನೋಂದಣಿ ಕಾರ್ಯಗಳು ಪತ್ರ ವ್ಯವಹಾರದ ಮೂಲಕ ನಡೆಯುತ್ತಿದ್ದವು. ಆದರೆ ಈಗ ಕೇವಲ ಪೇಪರ್ ಲೇಸ್ ನೋಂದಣಿ ಮಾಡುವ ಮೂಲಕ ಸರ್ಕಾರ ಭೂಮಾಫಿಯಾ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಂತಾಗಿದೆ. ಈ ವ್ಯವಸ್ಥೆಯಿಂದ ಯಾರ ಆಸ್ತಿ, ಯಾರು ಖರೀದಿ ಅಥವಾ ಮಾರಾಟ ಮಾಡಿದ್ದಾರೆಂಬುದು ಪತ್ತೆಯಾಗದು" ಎಂದು ಅವರು ಆತಂಕ ವ್ಯಕ್ತಪಡಿಸಿದರು.ಅನಕ್ಷರಸ್ಥರು, ಸಾಮಾನ್ಯ ಜನರು ಹಾಗೂ ಇಲಾಖೆಯ ಅಧಿಕಾರಿ-ಸಿಬ್ಬಂದಿಗೂ ಈ ಡಿಜಿಟಲ್ ವ್ಯವಸ್ಥೆಯಿಂದ ತೀವ್ರ ತೊಂದರೆಯಾಗಲಿದೆ ಎಂದು ಅವರು ಎಚ್ಚರಿಸಿದರು. "ನೋಂದಣಿಗಾಗಿ ಎಲ್ಲರೂ ಶಿಕ್ಷಣ ಪಡೆದವರಾಗಿರಬೇಕಿಲ್ಲ. ಅನಕ್ಷರಸ್ಥರಿಗೆ ಡಿಜಿಟಲ್ ಕಾರ್ಯವಿಧಾನ ಅರ್ಥವಾಗದು" ಎಂದು ತಿಳಿಸಿದರು.ರಾಜ್ಯ ಸರ್ಕಾರವು ಚಾಮರಾಜನಗರದಲ್ಲಿ ಈ ಪೇಪರ್ ಲೇಸ್ ನೋಂದಣಿಯನ್ನು ಮೊದಲ ಹಂತದಲ್ಲಿ ಜಾರಿಗೊಳಿಸಿ ಯಶಸ್ವಿಯಾಗಿದೆ ಎಂದು ಸಾರಿದರೂ, ಅಲ್ಲಿ ಅನೇಕ ಸಮಸ್ಯೆಗಳು ಎದುರಾಗಿರುವುದಾಗಿ ಅವರು ಆರೋಪಿಸಿದರು. ಅನ್ಯ ರಾಜ್ಯಗಳಲ್ಲಿ ಪೇಪರ್ ಲೇಸ್ ಮತ್ತು ಪೇಪರ್ ಸಹಿತ ನೋಂದಣಿ ಎರಡೂ ವ್ಯವಸ್ಥೆಗಳು ಜಾರಿಯಲ್ಲಿವೆ. ಅದೇ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೊಳಿಸಬೇಕು ಎಂದು ಪೋಳ ಒತ್ತಾಯಿಸಿದರು.ಕೇವಲ ಪೇಪರ್ ಲೇಸ್ ಡಿಜಿಟಲ್ ನೋಂದಣಿ ಮಾತ್ರ ಜಾರಿ ಮಾಡಿದಲ್ಲಿ ರಾಜ್ಯದ ಸಾವಿರಾರು ದಸ್ತುಬರಹಗಾರರು ನಿರುದ್ಯೋಗಿಗಳಾಗುವ ಅನಿವಾರ್ಯತೆ ಎದುರಾಗಲಿದೆ. ಆದ್ದರಿಂದ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು. ಹಿಂದಿನ ಪತ್ರ ವ್ಯವಸ್ಥೆಯ ಜೊತೆಗೆ ಡಿಜಿಟಲ್ ನೋಂದಣಿ ಮಾಡುವುದಕ್ಕೆ ತಮಗೆ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ಈ ಕುರಿತು ರಾಜ್ಯದ ಎಲ್ಲ ದಸ್ತುಬರಹಗಾರರೊಂದಿಗೆ ಚರ್ಚಿಸಿ ಮುಂದಿನ ಆಂದೋಲನದ ರೂಪರೇಖೆ ಸಿದ್ಧಪಡಿಸಲಾಗುವುದು ಎಂದು ಅವರು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ವಿನೋದಗೌಡ ಪಾಟೀಲ, ಉಪಾಧ್ಯಕ್ಷ ರಾಮಚಂದ್ರ ಸಾಳಂಕೆ, ಗುರುನಾಥ ಯಾತಗೇರಿ, ಮಹವೀರ ಕಂಚಗಾರ, ರುಕ್ಮಿಣಿಬಾಯಿ ಛಲವಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

May 2, 2026 | 08:15 AM
131 0
ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಬಳಿ ಡೆಲಿವರಿ ಸಿಬ್ಬಂದಿ ಅನುಚಿತ ವರ್ತನೆ: ಸಾರ್ವಜನಿಕರ ಆಕ್ರೋಶ

ಹುಬ್ಬಳ್ಳಿಯ ಅಕ್ಷಯ ಪಾರ್ಕ್ ಬಳಿ ಡೆಲಿವರಿ ಸಿಬ್ಬಂದಿ ಅನುಚಿತ ವರ್ತನೆ: ಸಾರ್ವಜನಿಕರ ಆಕ್ರೋಶ

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಅಕ್ಷಯ ಪಾರ್ಕ್ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರೊಂದಿಗೆ ಡೆಲಿವರಿ ಪ್ಲಾಟ್ಫಾರ್ಮ್ನ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿಬ್ಬಂದಿಗಳು ಸಾರ್ವಜನಿಕರ ವಾಹನಕ್ಕೆ ಗುದ್ದಿದ ಜೊತೆಗೆ ಅಸಭ್ಯವಾಗಿ ಧಮ್ಕಿ ನೀಡಿರುವ ಆರೋಪ ಕೇಳಿ ಬಂದಿದೆ.ಈ ಘಟನೆ ಹುಬ್ಬಳ್ಳಿ ನಗರದ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಾಹನ ಸವಾರರು ಮತ್ತು ಇತರ ಸಾರ್ವಜನಿಕರ ಪ್ರಕಾರ, ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರೊಂದಿಗೆ ಏಕವಚನ ಭಾಷೆಯಲ್ಲಿ ಮಾತನಾಡಿ, ಅಸಭ್ಯವಾಗಿ ಗುಂಡಾವರ್ತನೆ ತೋರಿಸಲಾಗಿದೆ. ಈ ದುಷ್ಕೃತ್ಯದಲ್ಲಿ ಪ್ರಮುಖರಾಗಿರುವ ಸಿಬ್ಬಂದಿ ಕಿರಣ ಹಾಗೂ ಶಂಕರ್ ಹಾಗೂ ಇತರರ ವಿರುದ್ಧ ಈಗಾಗಲೇ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಲಭ್ಯವಾದ ಮಾಹಿತಿಯ ಪ್ರಕಾರ, ಈ ಇಬ್ಬರು ಸಿಬ್ಬಂದಿಗಳು ಹುಬ್ಬಳ್ಳಿಯ ನವ ಆನಂದನಗರದ ಕುಂಚಿ ಕೋರ್ ಕ್ವಾಟ್ರಸ್ನ ನಿವಾಸಿಗಳಾಗಿದ್ದಾರೆ. ಅಕ್ಷಯ ಪಾರ್ಕ್ ಮುಖ್ಯ ರಸ್ತೆಯು ಅತೀವ ದಟ್ಟಣೆಯ ಪ್ರದೇಶವಾಗಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ನಿತ್ಯವೂ ಸಂಚರಿಸುತ್ತಾರೆ. ಅಂತಹ ಸ್ಥಳದಲ್ಲಿ ಈ ರೀತಿಯ ಅಸಹಕಾರಿ ಮತ್ತು ಅನುಚಿತ ವರ್ತನೆ ಸಾರ್ವಜನಿಕರ ಸುರಕ್ಷತೆಗೆ ತಿಣುಕಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಇದೆಲ್ಲ ಘಟನೆ ಕೂಡ ಸಂಚಾರಿ ಪೊಲೀಸ್ ಸಮ್ಮುಖದಲ್ಲಿ ನಡೆದಿದ್ದು ಪೊಲೀಸರಿಗೆ ಕಿಂಚಿತ್ತು ಕಿಮ್ಮತ್ತಿಲ್ಲದೆ ಈ ಸಾರ್ವಜನಿಕರ ಮೈ ಮೇಲೆ ಎಗರಿ ಗುಂಡಾವರ್ತನೆ ತೋರಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದೆ. ಹಾಗೂ ಈ ಸಿಬ್ಬಂದಿಗಳ ವಿರುದ್ಧ ತಪ್ಪು ಮಾಡಿದ್ದು ಅವರ ವಿರುದ್ಧವೇ ಜಫ್ಟು ಸಿಬ್ಬಂದಿಗಳು ಗುಂಪು ಕಟ್ಟಿಕೊಂಡು ಸಾರ್ವಜನಿಕರ ಮೈಮೇಲೆ ಹೋಗಿ ಏನ್ ಮಾಡ್ತೀಯಾ ಏನ್ ಕಿತ್ಕೊತಿಯ ಕಿತ್ಕೋ? ಎಂಬ ಅವಾಚಕರ ಶಬ್ದಗಳನ್ನು ತೋರಿದ್ದಾರೆ ಎಂದು ತಿಳಿದುಬಂದಿದೆ.ಸಾರ್ವಜನಿಕರು ತಕ್ಷಣವೇ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಡೆಲಿವರಿ ಪ್ಲಾಟ್ಫಾರ್ಮ್ಗಳ ಸಿಬ್ಬಂದಿಗಳ ಮೇಲೆ ಕಡಿವಾಣ ಹಾಕಲು ಮತ್ತು ಇಂತಹ ಘಟನೆಗಳಿಗೆ ತಡೆಯೊಡ್ಡಲು ಸಂಬಂಧಪಟ್ಟ ಕಂಪನಿಗಳು ಮತ್ತು ಪೊಲೀಸ್ ಇಲಾಖೆ ತಕ್ಕ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಪ್ರಕರಣದ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

Apr 25, 2026 | 02:32 PM
62 0