ಪಬ್ಲಿಕ್ ರೈಡ್ ನ್ಯೂಸ್, ಪೀಣ್ಯ-ದಾಸರಹಳ್ಳಿ:ಹಾವನೂರು ಸೌಂದರ್ಯ ಪಿಯು ಕಾಲೇಜಿನ ವಿದ್ಯಾರ್ಥಿ ಇಶಾನ್ ಬಿ.ಆರ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಒಟ್ಟು 600 ಅಂಕಗಳಿಗೆ 591 ಅಂಕಗಳನ್ನು (ಶೇ. 98.50) ಗಳಿಸಿ ರಾಜ್ಯ ಮಟ್ಟದಲ್ಲಿ ಎಂಟನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಇಶಾನ್ ಅವರ ಈ ಸಾಧನೆಯಿಂದ ತಾವು ಓದಿದ ಕಾಲೇಜಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಯ ಶ್ರದ್ಧೆ, ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನಕ್ಕೆ ಈ ಯಶಸ್ಸು ಸಾಕ್ಷಿಯಾಗಿದೆ.
ಕಾಲೇಜಿನ ವತಿಯಿಂದ ಇಶಾನ್ ಅವರನ್ನು ಅಭಿನಂದಿಸಲಾಗಿದೆ. ಮುಂದಿನ ವಿದ್ಯಾಭ್ಯಾಸಕ್ಕೂ ಶುಭ ಹಾರೈಸಲಾಗಿದೆ.
ವರದಿ: ಪಬ್ಲಿಕ್ ರೈಡ್, ದೇವರಾಜ್