ಪಬ್ಲಿಕ್ ರೈಡ್ ನ್ಯೂಸ್ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜೇಶ್ವರಿನಗರದಲ್ಲಿ ಮಾಜಿ ನಗರಸಭೆ ಸದಸ್ಯ,ರಾಜ್ಯ ಜೆಡಿಎಸ್ ಕಾರ್ಯದರ್ಶಿಎಂ ಶಿವಣ್ಣ ಹಾಗೂ ರಾಜಗೋಪಾಲನಗರ ವಾರ್ಡ್ ಹಾಗೂ ರಾಜೇಶ್ವರಿನಗರ ವಾರ್ಡ್ ಅಧ್ಯಕ್ಷ ಕೆ. ತಿಮ್ಮರಾಜು ನೇತೃತ್ವದಲ್ಲಿ
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಜನ್ಮದಿನವನ್ನು ಬೃಹತ್ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಹಬ್ಬದ ರೀತಿಯಲ್ಲಿ ಸಾವಿರಾರು ಜನಗಳಿಗೆ ಭರ್ಜರಿ ಬಾಡೂಟ ಏರ್ಪಡಿಸಿ ಆಚರಿಸಿದರು.
ಈ ವೇಳೆ ಮಾಜಿ ನಗರಸಭೆ ಸದಸ್ಯ,ರಾಜ್ಯ ಕಾರ್ಯದರ್ಶಿಎಂ ಶಿವಣ್ಣ ಮಾತನಾಡಿ ಇಡೀ ದೇಶದ ರಾಜಕಾರಣದಲ್ಲಿ ದೇವೇಗೌಡರು ಭೀಷ್ಮ ಇದ್ದಹಾಗೆ ,ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿಯಾಗಿದ್ದಾಗ ಅನೇಕ ನೀರಾವರಿ ಯೋಜನೆಗಳನ್ನು ತಂದು ಹಸಿರು ಕ್ರಾಂತಿಗೆ ಮುನ್ನಡಿ ಬರೆದವರು.ಅವರು ತಮ್ಮ ವಯಸ್ಸನ್ನು ಲೆಕ್ಕಿಸದೆ ಅನೇಕ ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯ ಕ್ರೀಯಾ ಶೀಲರಾಗಿ ಈ ಇಳಿವಯಸ್ಸಿನಲ್ಲೂ ಕೂಡ ರಾಷ್ಟ್ರದ ರಾಜ್ಯದ ಪ್ರಗತಿಗೆ ,ರೈತರ ಏಳ್ಗಗೆಗೆ ಸದಾ ಶ್ರಮಿಸುತ್ತಿರುವ ಹಿರಿಯ ಜೀವ ದೇವೇಗೌಡರು ಅಂತವರಿಗೆ ಭಾರತ ರತ್ನ ಪುರಸ್ಕಾರ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ರಾಜ್ಯದ ಎಲ್ಲಾ ರಾಜಕಾರಣಿಗಳು ಹಾಗೂ ಪಕ್ಷದ ಮುಖಂಡರು ಒತ್ತಾಯ ಮಾಡಬೇಕು ಎಂದು ತಿಳಿಸಿದರು
ಈ ಸಂಧರ್ಭದಲ್ಲಿ
ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಅಂದಾನಪ್ಪ
ರಾಜ್ಯ ವಕ್ತಾರರಾದ ದೇವರಾಜು,ಕ್ಷೇತ್ರದ ಅಧ್ಯಕ್ಷ ಎಂ ಮುನಿಸ್ವಾಮಿ, ಮಹಾ ಪ್ರಧಾನ ಕಾರ್ಯದರ್ಶಿ ಜಯಣ್ಣ,ಯೂತ್ ಜನತಾದಳದ ಅಧ್ಯಕ್ಷ ವಿನಯ್ ಎಂ ಶಿವಣ್ಣ, ಕ್ಷೇತ್ರದ ಮಹಿಳಾ ಅಧ್ಯಕ್ಷೆ ಛಾಯ, ಪಾರ್ವತಿನಗರ ವಾರ್ಡ್ ಅಧ್ಯಕ್ಷ ಶಿವೇಗೌಡ,ಚೊಕ್ಕಸಂದ್ರ ವಾರ್ಡ್ ಅಧ್ಯಕ್ಷ ಕದರೇಶ್,ಲಗ್ಗೆರೆ ವಾರ್ಡ್ ಜಿಬಿಎ ಆಕಾಂಕ್ಷಿ ಬೈರಪ್ಪ, ಜೆಡಿಎಸ್ ಮುಖಂಡರಾದ ಸಿಜೆ ರಮೇಶ್, ಕೆಂಪೇಗೌಡ ಅಭಿವೃದ್ಧಿ ಟ್ರಸ್ಟಿನ ಸದಸ್ಯ ಬಿಕೆ ಮಲ್ಲೇಶ್ ,ವೇಂಕಟೇಶ್, ಕೃಷ್ಣ ,ಶ್ರೀನಿವಾಸ್, ಸುಂದರ್, ವಿನಯ್ ಕೃಷ್ಣಪ್ಪ ,ಪ್ರಶಾಂತ್ ಕೌರವ,ಲೋಕಿ ,ಗಿರೀಶ್, ಶ್ರೀನಾಥ್, ನಾಗಭೂಷಣ್,
ವರದಿ : ಪಬ್ಲಿಕ್ ರೈಡ್ ದೇವರಾಜ್