ಕರ್ನಾಟಕ

"ಮಾರಮ್ಮ ದೇವಿ ಜಾತ್ರಾ ನಿಮಿತ್ಯ ಕಾಂಗ್ರೆಸ್ ಮುಖಂಡ ಆರ್ ಮುನಿರಾಜುನ ಮನೆಯ ಭೋಜನ ಕೂಟದಲ್ಲಿ ಪಾಲ್ಗೊಂಡ ಮಾಜಿ ಶಾಸಕ ಆರ್ ಮಂಜುನಾಥ್ "

ಮೂಲಕ News Desk | ಪ್ರಕಟಿಸಲಾಗಿದೆ May 23, 2026 May 23, 2026 | 02:22 PM 29 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ನೆಲಗೆದರನಹಳ್ಳಿಯ ಪ್ರಸಿದ್ಧ ಶಕ್ತಿ ದೇವತೆ ಮಾರಮ್ಮ ದೇವಿಯ ಪರಮ ಭಕ್ತರು ಗ್ರಾಮದ ಯುವ ಮುಖಂಡರು ಹಾಗೂ ಮಾಜಿ ನಗರ ಸಭಾ ಸದಸ್ಯೆ ಮರೇಮ್ಮ  ರಾಜಣ್ಣ ಪಂಡರಹಳ್ಳಿ ಅವರ ಸುಪುತ್ರ ಕಾಂಗ್ರೆಸ್ ಪ್ರಭಾವಿ ನಾಯಕ ಆರ್ ಮುನಿರಾಜು ಅವರು ತಮ್ಮ ತಂದೆ ತಾಯಿಯ ಪುರಾತನ ಕಾಲದಿಂದಲೂ ನಡೆದು ಕೊಂಡು ಬಂದ ಸಂಪ್ರದಾಯ ಮಾರ್ಗದರ್ಶದಂತೆ ತಾಯಿ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಆಚರಿಸಿಕೊಂಡು ಬರುವ ಮೂಲಕ ಸಹಸ್ರಾರು ಸಾರ್ವಜನಿಕ ಬಂದು ಭಗನಿಯರಿ ಗೆ ಪ್ರೀತಿಯ ಭೋಜನ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ  ಮಾಜಿ ಶಾಸಕ ಆರ್ ಮಂಜುನಾಥ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಶಾಲು ಹೊದಿಸಿ ಫಲಪುಷ್ಪ ದೊಂದಿಗೆ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಆರ್ ಮುನಿರಾಜು ಅವರ ಧರ್ಮಪತ್ನಿ ಮಕ್ಕಳು ಮತ್ತು ಕುಟುಂಬಸ್ಥರು ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಉಪಸ್ಥಿತರಿದ್ದು ಭೋಜನ ಸ್ವೀಕರಿಸಿ ಮುನಿರಾಜು ಅವರಿಗೆ  ಕುಟುಂಬಸ್ಥರಿಗೆ ಶುಭ ಹಾರೈಸಿದರು.

ವರದಿ : ಪಬ್ಲಿಕ್ ರೈಡ್ ದೇವರಾಜ್