ಕರ್ನಾಟಕ

ದಾಸರಹಳ್ಳಿ ಸಮಾಜಸೇವಕ ಎನ್ ಪಿ ಮುನಿಕೃಷ್ಣರವರ ಮನೆಗೆ ಶಾಸಕ ಎಸ್ ಮುನಿರಾಜು ಸೌಹಾರ್ಧ ಭೇಟಿ.

ಮೂಲಕ News Desk | ಪ್ರಕಟಿಸಲಾಗಿದೆ May 22, 2026 May 22, 2026 | 12:34 PM 15 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಜಾತ್ರೆ ಹಬ್ಬ ಹರಿದಿನಗಳಲ್ಲಿ ನಮ್ಮ ಜನರು ಜಾತಿ, ಮತ, ಭೇದಗಳನ್ನೆಲ್ಲ ಮರೆತು ಎಲ್ಲರೂ ಒಂದಾಗಿ ಸೇರಲು ಸಹಕಾರಿ. ಈ ಭವ್ಯ ಆಚರಣೆಯು ನಮ್ಮ ಜನರ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಶ್ರೀ ಮಹೇಶ್ವರಮ್ಮ ದೇವಿಯು ನಮ್ಮ ದಾಸರಹಳ್ಳಿ ಕ್ಷೇತ್ರದ ಸಮಸ್ತ ಜನತೆಗೆ ಆಯಸ್ಸು,ಆರೋಗ್ಯ, ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ,ಹಾಗೂ ದಾಸರಹಳ್ಳಿಯಲ್ಲಿ   ದಂಪತಿಗಳು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲು ಶ್ರೀ ನೆಲೆ ಮಹೇಶ್ವರಮ್ಮನ ಕೃಪೆ ಅವರ ಮೇಲಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ', ಎಂದು ಶಾಸಕ ಎಸ್ ಮುನಿರಾಜು ಹೇಳಿದರು.

ದಾಸರಹಳ್ಳಿ ವಾರ್ಡಿನ  ಸಮಾಜಸೇವಕರಾದ  ಎನ್‌.ಪಿ‌.ಮುನಿಕೃಷ್ಣ,ಶಿಲ್ಪಾ ಎನ್ ಪಿ ಮುನಿಕೃಷ್ಣರವರು ಕುಟುಂಬದವರು ಉರಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಭೋಜನ ಕೂಟದಲ್ಲಿ ಭಾಗವಹಿಸಿ ಉಭಯ ಕುಶಲೋಪರಿ ವಿಚಾರಿಸಿದರು. ಈ ವೇಳೆ ಶಾಸಕ ಎಸ್ ಮುನಿರಾಜು ರವರಿಗೆ ಶ್ರೀ ಸೀತಾರಾಮ ಲಕ್ಷ್ಮಣ ಸಮೇತ ಅಂಜನೇಯನ ವಿಗ್ರಹ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರು ಭಜಪ್ಪ, ರಿಷಿತ್ ಎಂ ಮುನಿಕೃಷ್ಣ, ಕೃಷ್ಣಪ್ಪ, ಬಾಬು ಸಿಂಗ್, ಆರ್ ಎಸ್ ಎಸ್ ಅಮರ್, ಎಂ. ಮುನಿರಾಜು, ವೇಮಾಚ ಲಾರೆಡ್ಡಿ, ಕೇಬಲ್ ಜಗದೀಶ್, ಇರ್ಫಾನ್, ಗಿಡ್ಡು, ಮಹೇಶ್ವರಿ ವಿನಾಯಕ ಗೆಳೆಯರ ಬಳಗದ ಚೇತನ್ ಕುಮಾರ್, ಶ್ರೀನಿವಾಸ್, ಚೇತನ್ ಕೃಷ್ಣಪ್ಪ, ನಾಗರಾಜು, ಸೂರಿ, ಪ್ರಸಾದ್ ಎಸ್, ಮಲ್ಲಿಕಾರ್ಜುನ್, ಯೋಗೇಂದ್ರ ನಾಥ್ ಸೇರಿದಂತೆ ಹಲವಾರು ಗಣ್ಯರು,

ಕುಟುಂಬಸ್ಥರು, ನೂರಾರು ಸಂಖ್ಯೆಯಲ್ಲಿ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು

ವರದಿ : ಪಬ್ಲಿಕ್ ರೈಡ್ ದೇವರಾಜ್