ಕರ್ನಾಟಕ

ಎಂಇಐ ಬಡಾವಣೆಯ ಕುಂದು ಕೊರತೆಗಳ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ: ಶಾಸಕ ಎಸ್. ಮುನಿರಾಜು

ಮೂಲಕ News Desk | ಪ್ರಕಟಿಸಲಾಗಿದೆ May 22, 2026 May 22, 2026 | 12:31 PM 35 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಬಾಗಲಗುಂಟೆ ವಾರ್ಡ್ ಎಂಇಐ ಬಡಾವಣೆಯಲ್ಲಿನ ಕುಂದು ಕೊರತೆಗಳನ್ನು ಬಗೆಹರಿಸಲು ಎಲ್ಲಾ ವಿಭಾಗದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳಿಗೆ ಸೂಕ್ತ ಕ್ರಮ ವಹಿಸಬೇಕು ಎಂದು ಶಾಸಕ ಎಸ್. ಮುನಿರಾಜು ಅಧಿಕಾರಿಗಳಿಗೆ ಸೂಚಿಸಿದರು.

      ಎಂಇಐ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷ್ಮಣ್ ಗೌಡ್ರು ನೇತೃತ್ವದಲ್ಲಿ

ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಮೇರೆಗೆ ಶಾಸಕ ಮುನಿರಾಜು ಅವರು ಇಂದು ಸ್ಥಳ ಪರಿಶೀಲಿಸಿದರು.

      ಕಸದ ಸಮಸ್ಯೆ,ನೂತನ ಮನೆ ಕಟ್ಟುವವರ ಮನೆಯ ನಕ್ಷೆ ಪರಿಶೀಲನೆ, ಚರಂಡಿಯಲ್ಲಿ ಮಣ್ಣು ಸುರಿಯುವವರ ವಿರುದ್ಧ ಕ್ರಮ, ಉದ್ಯಾನದ ಪಕ್ಕದ ರಸ್ತೆಗಳಲ್ಲಿ ವಾರಗಟ್ಟಲೆ ವಾಹನ ನಿಲ್ಲಿಸುವವರ ವಿರುದ್ಧ ಕ್ರಮ, ವಿದ್ಯುತ್ ತಂತಿಗಳಿಗೆ ಅಡ್ಡಿಪಡಿಸುವ ಕೊಂಬೆಗಳ ಕತ್ತರಿಸುವಿಕೆ, ಬಿಬಿಎಂಪಿ ಹಿಂಭಾಗದ ಗ್ರೌಂಡ್ ಸುತ್ತಲೂ ತಂತಿ ಬೇಲಿ ಮತ್ತು ಗೇಟ್ ಅಳವಡಿಕೆ, ಉದ್ಯಾನದಲ್ಲಿರುವ ಶೌಚಾಲಯ ಬಳಸಲು ಸರಿಪಡಿಸುವುದು, ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ಕ್ರಮ ಇನ್ನು ಮುಂತಾದ ಅನೇಕ ಸಮಸ್ಯೆಗಳನ್ನು ಬಗೆಹರಿಸಲು ಆಯಾ ವಿಭಾಗದ ಅಧಿಕಾರಿಗಳಿಗೆ ಶಾಸಕ ಎಸ್ ಮುನಿರಾಜು ಖಡಕ್ ಸೂಚನೆ ನೀಡಿದರು.

       ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ

ಗುರು ಪ್ರಸಾದ್,ಲಕ್ಷ್ಮೀ ವೆಂಕಟೇಶ, ಕೃಷ್ಣಮೂರ್ತಿ, ಮಧುಸೂದನ್ ಸೇರಿದಂತೆ ಜಿಬಿಎ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು,ಸಂಚಾರ ಪೋಲೀಸರು ಹಾಗೂ ಸುತ್ತಮುತ್ತಲ ನಿವಾಸಿಗಳು ಇದ್ದರು.

ವರದಿ :  ಪಬ್ಲಿಕ್ ರೆಡ್ ದೇವರಾಜ್