ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ: ದಾಸರಹಳ್ಳಿ ಗ್ರಾಮದಲ್ಲಿ ಐತಿಹಾಸಿಕ ಇತಿಹಾಸವಿರುವ ಮಹೇಶ್ವರಮ್ಮ ದೇವರ ಜಾತ್ರೆಯು ಸೋಮವಾರದಿಂದ 21 ಗುರುವಾರದವರೆಗೆ ನಾಲ್ಕು ದಿನಗಳ ಕಾಲ ವೈಭವದಿಂದ ಜರುಗಲಿದೆ.
ಮಂಗಳವಾರ ಧನಿನ ಮಾರಮ್ಮ ಮತ್ತು ಮಹೇಶ್ವರಮ್ಮ ದೇವರ ರಥೋತ್ಸವದಲ್ಲಿ ಆರತಿ ಹೊತ್ತ ಭಕ್ತಾದಿಗಳು ದಾಸರಹಳ್ಳಿಯ ಉಮಾ ಮಹೇಶ್ವರಿ ದೇವಸ್ಥಾನದಿಂದ ಮೆಟ್ರೋ ಮಾರ್ಗವಾಗಿ ಕನ್ನಡ ಕಸ್ತೂರಿ ರಸ್ತೆಯ ಮಾರ್ಗದಲ್ಲಿ ದೇವರ ಮೆರವಣಿಗೆ ಮೂಲಕ ನೆಲೆ ಮಹೇಶ್ವರಮ್ಮ ದೇವಸ್ಥಾನದ ಹತ್ತಿರ ತೆರಳಿ ಹರಕೆ ಹೊತ್ತ ಭಕ್ತಾದಿಗಳು ಅಗ್ನಿಕುಂಡ ಹಾಯುವ ಮೂಲಕ ದೇವರಿಗೆ ಪೂಜೆ ಸಲ್ಲಿಸಿದರು. ಸಂಜೆ ಚಪ್ಲಲಮ್ಮ ದೇವರಿಗೆ ಆರತಿ ಹಾಗೂ ಪೂಜಾ ಕಾರ್ಯಕ್ರಮ ಜರುಗಿತು.
ಇದೇ ವೇಳೆ ಶಾಸಕ ಎಸ್. ಮುನಿರಾಜು ಅವರ ಕುಟುಂಬದವರು ಮೆರವಣಿಗೆಯಲ್ಲಿ ಭಾಗಿಯಾದರು.
ವರದಿ : ಪಬ್ಲಿಕ್ ರೈಡ್ ದೇವರಾಜ್