ಇಂಡಿಯಾ

ಬೋರ್‌ವೆಲ್ ನೀರು ಸರಬರಾಜು ಯೋಜನೆಗೆ ಶಾಸಕ ಎಸ್. ಮುನಿರಾಜು ಚಾಲನೆ

ಮೂಲಕ News Desk | ಪ್ರಕಟಿಸಲಾಗಿದೆ May 15, 2026 May 15, 2026 | 02:40 AM 16 ವೀಕ್ಷಣೆಗಳು

ಬೆಂಗಳೂರು: ಪೀಣ್ಯದಾಸರಹಳ್ಳಿ ಸಮೀಪದ ವಿವಿಧ ವಾರ್ಡ್‌ಗಳಲ್ಲಿ ಬೋರ್‌ವೆಲ್ ನೀರು ಹರಿಸುವ ವ್ಯವಸ್ಥೆಗೆ ಶಾಸಕ S. Muniraju ಪೂಜೆ ಸಲ್ಲಿಸಿ ಚಾಲನೆ ನೀಡಿದರು.


ಚೊಕ್ಕಸಂದ್ರ ವಾರ್ಡ್‌ನ ಸಿ.ಎಂ. ನಾಗರಾಜ್ ಅವರ ಮನೆ ಹತ್ತಿರ, ಮಾರುತಿನಗರದ ಎಂ.ಎಂ. ಬ್ರೆಟ್ ಸ್ಕೂಲ್ ಸಮೀಪ, ನೆಲಗೆದರನಹಳ್ಳಿ ವಾರ್ಡ್‌ನ ನಿಸರ್ಗ ಶಾಲೆಯ ಹಿಂಭಾಗ, ಶಿವಪುರ ವಾರ್ಡ್‌ನ ಪ್ರಕಾಶ್ ಅವರ ಮನೆ ಹತ್ತಿರ ಹಾಗೂ ಪಾರ್ವತಿನಗರ ವಾರ್ಡ್‌ನ ಪೈಪ್‌ಲೈನ್ ಪಾರ್ಕ್ ಸಮೀಪ ಬೋರ್‌ವೆಲ್‌ಗಳಿಂದ ನೀರು ಹರಿಸುವ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿ.ಎಂ. ನಾಗರಾಜು, ಸುರೇಶ್ ಗೌಡ, ವಿಜಯಕುಮಾರ್, ವೆಂಕಟೇಶ್ (ವೆಂಕಿ), ಎಂಜಿನಿಯರ್‌ಗಳಾದ ವೆಂಕಟೇಶ್ ಹಾಗೂ ಪ್ರವೀಣ್ ಸೇರಿದಂತೆ ಸ್ಥಳೀಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.


ಸ್ಥಳೀಯ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.


ವರದಿ : ಪಬ್ಲಿಕ್ ರೈಡ್ ದೇವರಾಜ