ಇಂಡಿಯಾ

"ಡಾ. ಸಂಗನ ಬಸಪ್ಪ ಬಿರಾದಾರ್ ಅವರಿಗೆ 'ಬಸವಶ್ರೀ ಕಾಯಕ' ಶ್ರೇಷ್ಠ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ"

ಮೂಲಕ News Desk | ಪ್ರಕಟಿಸಲಾಗಿದೆ May 15, 2026 May 15, 2026 | 02:38 AM 19 ವೀಕ್ಷಣೆಗಳು

ಪಬ್ಲಿಕ್ ರೈಡ್ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಸಮಾಜ ಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ಜನಪ್ರಿಯ ವ್ಯಕ್ತಿ ಮತ್ತು ಚಿಂತಕರು ವಾಗ್ಮಿಗಳು ಬುದ್ದಿಜೀವಿಗಳು ಮತ್ತು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ. ಸಂಗನ ಬಸಪ್ಪ ಬಿರಾದಾರ್ ಅವರಿಗೆ ಕಾಫಿ ನಾಡಿನ ಹೆಸರಾಂತ ಟ್ರಸ್ಟ್ ಗಳಲ್ಲಿ ಒಂದಾದ ನಾಟ್ಯ ಮಯೂರಿ ನೃತ್ಯ ಟ್ರಸ್ಟಿನ ಸಂಸ್ಥಾಪಕಿ ಅಧ್ಯಕ್ಷೆ ಪ್ರೇಮಾಂಜಲಿ ಆಚಾರ್ಯ ಕಾರ್ಯದರ್ಶಿ ಪುಷ್ಪಲತಾ ಶಿವಣ್ಣ ಮತ್ತು ಪದಾಧಿಕಾರಿಗಳು ಸದಸ್ಯರು ಒಳಗೊಂಡಂತೆ ಡಾ. ಸಂಗನ ಬಸಪ್ಪ ಬಿರಾದಾರ್ ಅವರನ್ನು ಗುರುತಿಸಿ ನಗರದ ಪ್ರತಿಷ್ಠಿತ ಕಲಾ ಮಂದಿರದಲ್ಲಿ ಒಂದಾದ ರವಿಂದ್ರ ಕಲಾ ಮಂದಿರದ ಪಕ್ಕದಲ್ಲಿರುವ ನಯನ ಸಭಾಂಗಣದಲ್ಲಿ ದಿನಾಂಕ ೨೩ ಮೇ ೨೦೨೬ ಶನಿವಾರದಂದು ಡಾ. ಬಿರಾದಾರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ನಾಟ್ಯ ಮಯೂರಿ ನೃತ್ಯ ಟ್ರಸ್ಟಿನ ಸಂಸ್ಥಾಪಕಿ ಅಧ್ಯಕ್ಷೆ ಪ್ರೇಮಾಂಜಲಿ ಆಚಾರ್ಯ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

ವರದಿ : ಪಬ್ಲಿಕ್ ರೈಡ್ ದೇವರಾಜ್