ಕರ್ನಾಟಕ

ಪುಸ್ತಕದ ಚಳುವಳಿ ಜ್ಞಾನದ ಚಳುವಳಿ :ಡಾ. ಸಿ ಸೋಮಶೇಖರ್

ಮೂಲಕ News Desk | ಪ್ರಕಟಿಸಲಾಗಿದೆ May 13, 2026 May 13, 2026 | 01:43 PM 15 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ:' ಪುಸ್ತಕದ ಚಳುವಳಿ ಜ್ಞಾನದ ಚಳುವಳಿ, ಜ್ಞಾನ ವಿಸ್ತಾರವಾದರೆ ಅಲ್ಲಿ ಹಿಂಸೆ, ಕ್ರೌರ್ಯ ಇರುವುದಿಲ್ಲ' ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ ಸೋಮಶೇಖರ್ ತಿಳಿಸಿದರು.


ಶೆಟ್ಟಿಹಳ್ಳಿಯ ಶಾಸಕ ಎಸ್. ಮುನಿರಾಜು ಅವರ ಕಚೇರಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ದಾಸರಹಳ್ಳಿ ಕ್ಷೇತ್ರ ಕಸಾಪ ಸಹಯೋಗದೊಂದಿಗೆ 'ಮನೆಗೊಂದು ಗ್ರಂಥಾಲಯ ಅನುಷ್ಠಾನ' ಸಮಾರಂಭ ಉದ್ಘಾಟಿಸಿ ಮಾತನಾಡಿದರು.


' ಪುಸ್ತಕಗಳು ನಮ್ಮ ಮನೆಯ ದೊಡ್ಡ ಆಸ್ತಿ. ಅವುಗಳನ್ನು ಜೋಪಾನ ಮಾಡಬೇಕು. ಶರಣರ, ವಚನಕಾರರ, ಜಾನಪದರ ಪದ್ಯದ ಪುಸ್ತಕಗಳು ಮಾನವೀಯತೆಯ ಮೌಲ್ಯಾಧಾರಿತವಾದವುಗಳು' ಎಂದರು.


ಹಿಂದಿನ ಕಾಲದಲ್ಲಿ ಅನಕ್ಷರತೆ ಜಾಸ್ತಿ ಇತ್ತು. ಇಂದು ಎಲ್ಲರೂ ಅಕ್ಷರಸ್ಥರಾಗಿದ್ದಾರೆ, ಬುದ್ದಿವಂತರಾಗಿದ್ದಾರೆ ಹಾಗೆಯೇ ಪುಸ್ತಕ ಜ್ಞಾನವನ್ನು ಪಡೆಯಬೇಕು'ಎಂದು ಸಲಹೆ ನೀಡಿದರು.


ಶಾಸಕ ಎಸ್. ಮುನಿರಾಜು ಮಾತನಾಡಿ,' ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಬದಲು ಪುಸ್ತಕಗಳನ್ನು ನೀಡಿ ಪುಸ್ತಕ ಓದುವುದರಿಂದ ಜ್ಞಾನಾರ್ಜನೆ ಪಡೆಯಬಹುದು. ನಮ್ಮ ಕ್ಷೇತ್ರದಲ್ಲಿ ಕೂಡ ಅನೇಕ ಹಿರಿಯ ಸಾಹಿತಿಗಳು ಇದ್ದಾರೆ' ಎಂದು ತಿಳಿಸಿದರು.


ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಪ್ರಕಾಶ್ ಮೂರ್ತಿ ಮಾತನಾಡಿ,' ಒಂದು ಮನೆಗೆ ಪೂಜಾಲಯ ಎಷ್ಟು ಮುಖ್ಯ ಹಾಗೆಯೇ ಗ್ರಂಥಾಲಯ ಕೂಡ ಅಷ್ಟೇ ಮುಖ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರು ಕೂಡ ಅನೇಕ ಪುಸ್ತಕಗಳನ್ನು ಓದಿ ದೇಶವಿದೇಶಗಳ ಸ್ಥಿತಿಗತಿಗಳನ್ನು ತಿಳಿದಿದ್ದರು' ಎಂದು ಅಭಿಪ್ರಾಯಪಟ್ಟರು.


ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಸುರೇಶ್ ಮುಂತಾದವರಿದ್ದರು.  

ವರದಿ : ಪಬ್ಲಿಕ್ ರೈಡ್ ದೇವರಾಜ್