ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಅಕ್ಷಯ ಪಾರ್ಕ್ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರೊಂದಿಗೆ ಡೆಲಿವರಿ ಪ್ಲಾಟ್ಫಾರ್ಮ್ನ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿಬ್ಬಂದಿಗಳು ಸಾರ್ವಜನಿಕರ ವಾಹನಕ್ಕೆ ಗುದ್ದಿದ ಜೊತೆಗೆ ಅಸಭ್ಯವಾಗಿ ಧಮ್ಕಿ ನೀಡಿರುವ ಆರೋಪ ಕೇಳಿ ಬಂದಿದೆ.
ಈ ಘಟನೆ ಹುಬ್ಬಳ್ಳಿ ನಗರದ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಾಹನ ಸವಾರರು ಮತ್ತು ಇತರ ಸಾರ್ವಜನಿಕರ ಪ್ರಕಾರ, ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರೊಂದಿಗೆ ಏಕವಚನ ಭಾಷೆಯಲ್ಲಿ ಮಾತನಾಡಿ, ಅಸಭ್ಯವಾಗಿ ಗುಂಡಾವರ್ತನೆ ತೋರಿಸಲಾಗಿದೆ. ಈ ದುಷ್ಕೃತ್ಯದಲ್ಲಿ ಪ್ರಮುಖರಾಗಿರುವ ಸಿಬ್ಬಂದಿ ಕಿರಣ ಹಾಗೂ ಶಂಕರ್ ಹಾಗೂ ಇತರರ ವಿರುದ್ಧ ಈಗಾಗಲೇ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಭ್ಯವಾದ ಮಾಹಿತಿಯ ಪ್ರಕಾರ, ಈ ಇಬ್ಬರು ಸಿಬ್ಬಂದಿಗಳು ಹುಬ್ಬಳ್ಳಿಯ ನವ ಆನಂದನಗರದ ಕುಂಚಿ ಕೋರ್ ಕ್ವಾಟ್ರಸ್ನ ನಿವಾಸಿಗಳಾಗಿದ್ದಾರೆ. ಅಕ್ಷಯ ಪಾರ್ಕ್ ಮುಖ್ಯ ರಸ್ತೆಯು ಅತೀವ ದಟ್ಟಣೆಯ ಪ್ರದೇಶವಾಗಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ನಿತ್ಯವೂ ಸಂಚರಿಸುತ್ತಾರೆ. ಅಂತಹ ಸ್ಥಳದಲ್ಲಿ ಈ ರೀತಿಯ ಅಸಹಕಾರಿ ಮತ್ತು ಅನುಚಿತ ವರ್ತನೆ ಸಾರ್ವಜನಿಕರ ಸುರಕ್ಷತೆಗೆ ತಿಣುಕಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೆಲ್ಲ ಘಟನೆ ಕೂಡ ಸಂಚಾರಿ ಪೊಲೀಸ್ ಸಮ್ಮುಖದಲ್ಲಿ ನಡೆದಿದ್ದು ಪೊಲೀಸರಿಗೆ ಕಿಂಚಿತ್ತು ಕಿಮ್ಮತ್ತಿಲ್ಲದೆ ಈ ಸಾರ್ವಜನಿಕರ ಮೈ ಮೇಲೆ ಎಗರಿ ಗುಂಡಾವರ್ತನೆ ತೋರಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದೆ. ಹಾಗೂ ಈ ಸಿಬ್ಬಂದಿಗಳ ವಿರುದ್ಧ ತಪ್ಪು ಮಾಡಿದ್ದು ಅವರ ವಿರುದ್ಧವೇ ಜಫ್ಟು ಸಿಬ್ಬಂದಿಗಳು ಗುಂಪು ಕಟ್ಟಿಕೊಂಡು ಸಾರ್ವಜನಿಕರ ಮೈಮೇಲೆ ಹೋಗಿ ಏನ್ ಮಾಡ್ತೀಯಾ ಏನ್ ಕಿತ್ಕೊತಿಯ ಕಿತ್ಕೋ? ಎಂಬ ಅವಾಚಕರ ಶಬ್ದಗಳನ್ನು ತೋರಿದ್ದಾರೆ ಎಂದು ತಿಳಿದುಬಂದಿದೆ.
ಸಾರ್ವಜನಿಕರು ತಕ್ಷಣವೇ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಡೆಲಿವರಿ ಪ್ಲಾಟ್ಫಾರ್ಮ್ಗಳ ಸಿಬ್ಬಂದಿಗಳ ಮೇಲೆ ಕಡಿವಾಣ ಹಾಕಲು ಮತ್ತು ಇಂತಹ ಘಟನೆಗಳಿಗೆ ತಡೆಯೊಡ್ಡಲು ಸಂಬಂಧಪಟ್ಟ ಕಂಪನಿಗಳು ಮತ್ತು ಪೊಲೀಸ್ ಇಲಾಖೆ ತಕ್ಕ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಕರಣದ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.