ಕರ್ನಾಟಕ

ಪೀಣ್ಯ ದಾಸರಹಳ್ಳಿ ಇಂದಿನಿಂದ 3.ದಿನಗಳು ಅದ್ದೂರಿ ಗಣೇಶೋತ್ಸವ ಶಾಸಕ ಎಸ್.ಮುನಿರಾಜು ಹೇಳಿಕೆ

ಮೂಲಕ News Desk | ಪ್ರಕಟಿಸಲಾಗಿದೆ September 25, 2026 September 25, 2026 | 08:02 AM 7 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪೀಣ್ಯ 2ನೇ ಹಂತ ಜಿ.ಕೆ.ಡಬ್ಲ್ಯೂ ಲೇಔಟ್, ಮೈದಾನದಲ್ಲಿ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿಯಿಂದ‌

ಹೆಗ್ಗನಹಳ್ಳಿ ಹಾಗೂ ಪೀಣ್ಯ ಭಾಗದಲ್ಲಿ ಮೊಟ್ಟಮೊದಲ ಭಾರಿಗೆ ಪ್ರಥಮ ವರ್ಷದ ಆದ್ದೂರಿ ಬೃಹತ್ ಗಣೇಶೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ‌ ಎಸ್ ಮುನಿರಾಜು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.


25/ 09/2026 ಶುಕ್ರವಾರ ಬೆಳಿಗ್ಗೆ 9:00 ಗಂಟೆಗೆ ಬೃಹತ್

ವಿಘ್ನವಿನಾಶಕ ಶ್ರೀ ವಿನಾಯಕನ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜೆ. ಅಂದು ಸಂಜೆ ಕ್ಷೇತ್ರದ ಮಹಿಳೆಯರಿಂದ ಸುಜಾತ ಮುನಿರಾಜು ನೇತೃತ್ವದಲ್ಲಿ ವಿಷೇಷ ವೇದಿಕೆ ಕಾರ್ಯಕ್ರಮ‌ ಜರುಗಲಿದೆ.


26/09/2026, ಶನಿವಾರ ಸಂಜೆ 5:00 ಗಂಗಾರತಿ ಕಾರ್ಯಕ್ರಮದ ಜೊತೆಗೆ ಖ್ಯಾತ ಗಾಯಕ, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಹಾಗೂ ಶಮಿತಾ ಮಲ್ನಾಡ್ ತಂಡದವರಿಂದ ಭವ್ಯ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ ಹಾಗೂ ಗಣ್ಯರಿಗೆ ಸನ್ಮಾನ.


27/09/2026, ಭಾನುವಾರ ಮಧ್ಯಾಹ್ನದ ನಂತರ 

ವಿವಿಧ ಜಾನಪದ ಕಲಾತಂಡಗಳು,ಡೊಳ್ಳು ಹಾಗೂ ವಿಶೇಷ,ವಾದ್ಯಗಳೊಂದಿಗೆ, ಮಾಜಿಮುಖ್ಯಮಂತ್ರಿ ಸದಾನಂದಗೌಡ, ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ರವರು ಶ್ರೀ ವಿನಾಯಕನ ಮೂರ್ತಿಯ ಅದ್ದೂರಿ ಬೃಹತ್ ಶೋಭಾಯಾತ್ರೆಗೆ ಭಾಗವಹಿಸಲಿದ್ದು 

ಸುಂಕದ ಕಟ್ಟೆಯಿಂದ ಹೆಗ್ಗನಹಳ್ಳಿ ಮುಖ್ಯ ರಸ್ತೆ, ಹಾಗೂ ರಾಜಗೋಪಾಲನಗರ ಮುಖ್ಯರಸ್ತೆ ಮುಖಾಂತರ ಚೊಕ್ಕಸಂದ್ರ ಕೆರೆಯಲ್ಲಿ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದರ ಜೊತೆಗೆ ವಸ್ತು ಪ್ರದರ್ಶನ,ಪುಡ್ ಪಾರ್ಕ್ ಹಾಗೂ ಎಕ್ಸ್ಸಿಬೀಷನ್ ಕೂಡ ಇದ್ದು ಈ ಮೂರು ದಿನಗಳ ಭಕ್ತಿ–ಸಂಭ್ರಮದ ಕಾರ್ಯಕ್ರಮಕ್ಕೆದಾಸರಹಳ್ಳಿಹಾಗೂ ಸುತ್ತಮುತ್ತಲಿನ ಸಮಸ್ತ ನಾಗರಿಕರು ಕುಟುಂಬ ಸಮೇತರಾಗಿ ಆಗಮಿಸಿ,

ಶ್ರೀ ವಿಘ್ನವಿನಾಶಕನ ಕೃಪೆಗೆ ಪಾತ್ರರಾಗಬೇಕೆಂದು ಆತ್ಮೀಯವಾಗಿ ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಟಿ ಎಸ್ ಗಂಗರಾಜು, ಬಿ ಕೃಷ್ಣಮೂರ್ತಿ,ಗುರು ನಿಶ್ಚಲ್, ಕೃಷ್ಣಯ್ಯ,ಕಣ್ಣಪ್ಪ, ಜೆವಿ ಶ್ರೀನಿವಾಸ್,

ಅನಿಲ್ ಕುಮಾರ್ ಬಿಎಸ್ , ಗುರು ಪ್ರಸಾದ್, ಹೆಚ್ ಎನ್ ಗಂಗಾಧರ್,ನಿಸರ್ಗ ಕೆಂಪರಾಜು, ಬಿ ಎನ್ ದಿನೇಶ್, ಬೈರೇಗೌಡ,ಜೆ.ವಿ.

ಎಸ್ ಸತೀಶ್,ಡಿಎಂ ಮಂಜುನಾಥ್,

ವಿನೋದ್ ಗೌಡ ,ದಾಸರಹಳ್ಳಿ ಸತೀಶ್, ನಾಗೇಶ್,ಪಿ ಹೆಚ್ ರಾಜು,ಮಂಡ್ಯರವಿ,ಮೋಹನ್,ಹರೀಶ್

ಮತ್ತಿತರರು ಇದ್ದರು.