ಇಂಡಿಯಾ

ಬಸವಣ್ಣನವರ ವಚನಾಮೃತ ಮನುಕುಲಕ್ಕೆ ಮಾದರಿ: ಎಸ್. ಮುನಿರಾಜು

ಮೂಲಕ News Desk | ಪ್ರಕಟಿಸಲಾಗಿದೆ April 19, 2026 April 19, 2026 | 11:40 AM 23 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ;' ಯಾವುದೇ ಜಾತಿ, ಧರ್ಮ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನತೆಯ ತತ್ವ ಸಾರಿ ಅಕ್ಷರ ಜ್ಞಾನ, ಅನ್ನ ದಾಸೋಹ, ಆಶ್ರಯ ನೀಡಿದ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು' ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.


ಸಿಡೇದಹಳ್ಳಿಯ ಸರ್ಕಲ್ ನಲ್ಲಿ ಬಸವಶ್ರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಎಚ್. ರಾಜು ನೇತೃತ್ವದಲ್ಲಿ ಆಯೋಜಿಸಲಾದ ಬಸವ ಜಯಂತಿ ಹಾಗೂ ಸಿದ್ದಗಂಗಾ ಶ್ರೀಗಳ 119ನೇ ಜನ್ಮ ದಿನೋತ್ಸವದಲ್ಲಿ ಮಾತನಾಡಿದರು.


ಬಸವಣ್ಣನವರ ವಚನಾಮೃತ ಇಡೀ ಮನುಕುಲಕ್ಕೆ ಮಾದರಿಯಾಗಿದೆ. ಅದರಂತೆ ನಡೆದ ಸಿದ್ದಗಂಗಾ ಶ್ರೀಗಳ ಆದರ್ಶ ವ್ಯಕ್ತಿತ್ವ ಇಂದು ಸಮಾಜಕ್ಕೆ ಮಾದರಿಯಾಗಿದೆ' ಎಂದು ತಿಳಿಸಿದರು.


ಅಧ್ಯಕ್ಷ ಪಿ.ಎಚ್. ರಾಜು ಮಾತನಾಡಿ,' ಶ್ರೀಗಳ ಆಶಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೆಳೆದು ಇಂದು ದೇಶ ವಿದೇಶದ ಮೂಲೆ ಮೂಲೆಗಳನ್ನು ನೆಲೆಸಿದ್ದಾರೆ. ಅಂತಹ ಶ್ರೀಗಳ ಜಯಂತೋತ್ಸವ ಇಂದು ಅವರ ಸ್ಮರಣೆಯಲ್ಲಿ ಆಚರಿಸಲಾಗುತ್ತಿದೆ' ಎಂದರು.


ಈ ವೇಳೆ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಅನ್ನದಾನ, ಕೋಸಂಬರಿ ವಿತರಿಸಲಾಯಿತು.


ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ಅಶ್ವತ್ಥಪ್ಪ, ಸೋಲಾರ್ ಸುಬ್ಬಣ್ಣ, ಎಂ.ಬಿ. ದಯಾನಂದ್, ಸುಜಾತ ಮೇಲೇಗೌಡ, ಕೃಷ್ಣಮೂರ್ತಿ, ಮುರಳಿ, ಚಿಕ್ಕಸಂದ್ರ ಮೋಹನ್, ಲಾರಿ ಮುನಿರಾಜು, ಎಂ. ಬಸವರಾಜು, ರವಿ ಮತ್ತು ಪದಾಧಿಕಾರಿಗಳು ಇದ್ದರು.


ವರದಿ: ಪಬ್ಲಿಕ್ ರೈಡ್ ದೇವರಾಜ್