ಕರ್ನಾಟಕ

ಮನೆತನದ ಕುಲಕಸಬುಗಳು ಬದುಕನ್ನು ಕಟ್ಟಿಕೊಡುತ್ತವೆ. ಡಾ ಸುಧಾ ಕೌಜಗೇರಿ

ಮೂಲಕ News Desk | ಪ್ರಕಟಿಸಲಾಗಿದೆ September 10, 2026 September 10, 2026 | 03:00 PM 28 ವೀಕ್ಷಣೆಗಳು

ಧಾರವಾಡ- ರಾಯಾಪುರದಲ್ಲಿರುವ ಎಸ್ ಜೆ ಎಂವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿಂದು, ಪ್ರಸಕ್ತ 2026 -27 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಬವನ್ನು ಆಯೋಜಿಸಲಾಗಿತ್ತು.


 ವಿದ್ಯಾರ್ಥಿ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ, ಧಾರವಾಡದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದಂತಹ ಪ್ರೊ. ಸುಧಾ ಕೌಜಗೇರಿಯವರು, ವಿದ್ಯಾರ್ಥಿಗಳು  ಶರಣ ಸಂಸ್ಕೃತಿ,ಕಾಯಕ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಿ, ತಮ್ಮ ತಮ್ಮ ಮನೆತನದ ಕುಲ ಕಸುಬಿನತ್ತ ಆಸಕ್ತಿ ವಹಿಸಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನೆತನದ ಕುಲಕಸುಬುಗಳು ತಮ್ಮ ಬದುಕನ್ನು ಕಟ್ಟಿಕೊಡುತ್ತವೆ.ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಿ. ಪೂರ್ವಗ್ರಹ ಪೀಡಿ ತಾರಾಗಬೇಡಿ. ಭಾರತದಂತಹ ಜ್ಞಾನ ಶಾಲೆಯ ಕುರಿತು ತಿಳಿದುಕೊಳ್ಳಿ. ನಲಂದ ಹಾಗೂ ತಕ್ಷಶಿಲೆ ಅಂತಹ ವಿದ್ಯಾಪೀಠ ಉದಾಹರಿಸಿದ ಅವರು, ಶಿಕ್ಷಣದ ಮಹತ್ವವನ್ನು ವಿವರಿಸುತ್ತಾ   ಓದುವತ್ತ ಆಸಕ್ತಿ ವಹಿಸಿ, ಜ್ಞಾನಾರ್ಜನೆಯ ಮೂಲಕ  ಪರಿಪೂರ್ಣ ಪ್ರಜೆಗಳಾಗಿ, ಮೌಲ್ಯಯುತ, ಸಾಂಸ್ಕೃತಿಕ  ಜೀವನ   ತಮ್ಮದಾಗಲಿ. ಕಾಯಕವೇ ತಮ್ಮ ಮೂಲ ತತ್ವ ವಾಗಲಿ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ವೃತ್ತಿ,ಪ್ರವೃತ್ತಿಯ ಜೊತೆಗೆ ಉತ್ತಮ ಶಿಕ್ಷಣವನ್ನು ಪಡೆದು ಸಮಾಜಮುಖಿಗಳಾಗಿ ಬೆಳೆಯುವುದರ ಜೊತೆಗೆ ಭವಿಷ್ಯದ ಭಾರತವನ್ನು ಕಟ್ಟಿ. ಎನ್ಎಸ್ಎಸ್ ಕ್ರೀಡೆ ಹಾಗೂ ಇತರ ಸಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಪರಿಪೂರ್ಣ ಜೀವನ ರೂಪಿಸಿಕೊಳ್ಳಿ. ಮಹಾನ್ ಪುರುಷರ ವ್ಯಕ್ತಿತ್ವವನ್ನು ಅಭ್ಯಸಿಸಿ. ಅವರ ಜೀವನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿ. ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ. ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಫಲಾಪೇಕ್ಷೆ ಬೇಡ, ಭಾಗವಹಿಸುವುದು ಅತ್ಯಂತ ಮುಖ್ಯ. ವಿದ್ಯಾರ್ಥಿ ಜೀವನವೆಂದರೆ,ಜೀವನದ ಅತ್ಯಂತ ಪ್ರಮುಖ ಹಂತ. ತಮ್ಮ ಮುಂದಿನ ಭವಿಷ್ಯದ  ಕುರಿತು ಚಿಂತನೆ ಇರಲಿ. ಜೀವನದಲ್ಲಿ ಶಿಸ್ತಿರಲಿ ಎನ್ನುತ್ತಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಕೋರಿದರು. 


 ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿಯ ಮಹಿಳಾ ಪೊಲೀಸ್ ಠಾಣೆಯ,ಪೊಲೀಸ್ ನಿರೀಕ್ಷಕರಾದಂತಹ ಡಾ. ಜ್ಯೋತಿರ್ಲಿಂಗ ಹೊನಕಟ್ಟಿ ಅವರು ವಿದ್ಯಾರ್ಥಿಗಳಿಗೆ "ಮೊಬೈಲ್ ಬಿಡಿ ಪುಸ್ತಕ ಹಿಡಿ "ಸಂದೇಶವನ್ನು ನೀಡುತ್ತಾ, ಮೊಬೈಲ್ ಬಳಕೆ ಮಿತಿಯಲ್ಲಿರಿ. ಮೊಬೈಲ್ ದಾಸರಾಗಬೇಡಿ. ತಾವೆಲ್ಲರೂ ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಿ. ತಂದೆ -ತಾಯಿ ಹಾಗೂ ಕಲಿಸಿದ ಗುರುಗಳಿಗೆ ಗೌರವ ಕೊಡುವ ಸಂಸ್ಕೃತಿ ತಮ್ಮದಾಗಲಿ ಎನ್ನುತ್ತಾ ಜಾನಪದ ಸಾಹಿತ್ಯ -ಸಂಸ್ಕೃತಿಯ ಕುರಿತು ಮಾತನಾಡಿ, ಜನಪದ ನಮ್ಮೆಲ್ಲರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ, ಜನಪದ ಸಾಹಿತ್ಯದ ಕುರಿತು ಆಸಕ್ತಿ ವಹಿಸಿ ಅಭ್ಯಸಿಸಿ. ಇದೊಂದು ಅದ್ಭುತ ಸಾಹಿತ್ಯ. ಜನರ ಸಾಹಿತ್ಯ. ಹೃದಯದಿಂದ ಹೃದಯಕ್ಕೆ ತಲುಪುವ ಜನಪದ ಸಾಹಿತ್ಯಎನ್ನುತ್ತಾ ಜನಪದ ಗೀತೆಗಳನ್ನು ಪ್ರಸ್ತುತಪಡಿಸುವುದರ ಜೊತೆಗೆ ವಿದ್ಯಾರ್ಥಿಗಳನ್ನು ರಂಜಿಸಿದರು.ಮೊಬೈಲ್ ಬಳಸುವ ಕುರಿತು ಕಾಳಜಿ ಇರಲಿ. ಪ್ರಸ್ತುತ ಸ್ಪರ್ಧಾತ್ಮಕ ಯುಗಕ್ಕೆ ಬೇಕಾದಂತಹ ಕೌಶಲ್ಯಗಳು ತಮ್ಮದಾಗಲಿ. ನಿರಂತರ ಕಲಿಕೆಯಿರಲಿ ಎನ್ನುತ್ತಾ ಭವಿಷ್ಯದ ಬದುಕಿನಲ್ಲಿ ಯಶಸ್ಸನ್ನು ಕಾಣೆ ಎಂದು ಶುಭ ಹಾರೈಸಿದರು.

  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದಂತಹ ಡಾ. ಪುಷ್ಪಾ ಬಸನಗೌಡರವರು ಮಾತನಾಡುತ್ತಾ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದರು ಕುರಿತು ಸಂತಸ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ಇಂತಹ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ  ಶಿಸ್ತು, ಸಂಯಮ,ಸಾಮಾಜಿಕ ಪ್ರಜ್ಞೆ ಮುಂತಾದವುಗಳನ್ನು ಬೆಳೆಸಿಕೊಳ್ಳಿ . ಇಂತಹ ವೇದಿಕೆಗಳು ತಮ್ಮನ್ನು ಎತ್ತರದ ಮಟ್ಟಕ್ಕೆ ಓಯ್ಯು ತ್ತವೆ. ಬದುಕನ್ನು ಕಟ್ಟಿಕೊಡುವಂತಹ ವೃತ್ತಿಪರ ಅವಕಾಶಗಳು ತಮ್ಮದಾಗಲಿ. ವಿದ್ಯಾರ್ಥಿಗಳು ತಮ್ಮಲ್ಲಿರುವ ಸೂಪ್ತ ಪ್ರತಿಭೆಯನ್ನು ಗುರುತಿಸುವ ಇಂತಹ ವೇದಿಕೆಗಳ ಸದುಪಯೋಗಪಡಿಸಿಕೊಳ್ಳಿ. ಉತ್ತಮ ಜ್ಞಾನಾರ್ಜನೆ ಕೈಗೊಳ್ಳುವ ಮೂಲಕ ಭವಿಷ್ಯದ  ಭಾರತವನ್ನು ಕಟ್ಟುವಂತಹ ಪ್ರಯತ್ನ ಮಾಡಿ. ಸತತ ಪ್ರಯತ್ನದಿಂದ ಮುಂದೆ ಬನ್ನಿ ಎಂದರು.

 ಆರಂಭದಲ್ಲಿ ವಿದ್ಯಾರ್ಥಿ ಸಣ್ಣ ಮಂಜುನಾಥ್ ಕುಲಾವಿ ಪ್ರಾರ್ಥಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾ ಧ್ಯಕ್ಷರಾದಂತಹ  ಪ್ರೊ. ಕೆ ಎಸ್ ಮೇಲ್ಮಾಳಗಿ ಅವರು ಸರ್ವರನ್ನು ಸ್ವಾಗತಿಸಿದರು. ಕ್ರೀಡಾ ವಿಭಾಗದ ಸಂಯೋಜಕರಾದಂತಹ ಡಾ. ರಮೇಶ್ ಸಿ ಅವರು ಮಾನ್ಯ ಜಂಟಿ ನಿರ್ದೇಶಕರಾದ ಪ್ರೊ.ಸುಧಾ ಕೌಜಗೇರಿಯವರನ್ನು,  ಹಾಗೂ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಯದಂತಹ ಡಾ. ತೇಜಸ್ವಿನಿ ಅರಳಿಕಟ್ಟಿ ಅವರು ಡಾ. ಜ್ಯೋತಿರ್ಲಿಂಗ ಹೋನಕಟ್ಟಿ ಅವರನ್ನು ಪರಿಚಯಿಸಿದರು.

 ಇದೇ ಸಂದರ್ಭದಲ್ಲಿ ಆಗಮಿಸಿದಂತಹ ಅತಿಥಿಗಳಿಗೆ ಮಹಾವಿದ್ಯಾಲಯದ ಪರವಾಗಿ ಪ್ರಾಚಾರ್ಯರು ಗೌರವ ಸಮರ್ಪಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಾಂಸ್ಕೃತಿಕ ಸಂಘದ ಸಂಯೋಜಕರಾದ ಪ್ರೊ.ಎಂ.ಬಿ ಅಳಗವಾಡಿ ಅವರು ನಡೆಸಿಕೊಟ್ಟರು.ಪಿಯುಸಿ ಎರಡನೇ ವರ್ಷದಲ್ಲಿ ಅತಿ ಹೆಚ್ಚು ಅಂಕಗಳಿಸಿ ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆದಂತಹ ವಿದ್ಯಾರ್ಥಿಗಳಾದ ಮಹಾಂತೇಶ್ ಚವಾಣ್. ಕಾಳಮ್ಮ ಬಡಿಗೇರ್, ಕುಮಾರ್ ಆಂಜನಯ್ಯ, ಸಂಗೀತ ಜಕ್ಲಿ, ಕುಮಾರ್ ದರ್ಶನ್, ಸಂದೀಪ್ ಎಚ್,ವೀರೇಶ್ ಮಠ ಹಾಗೂ ಕುಮಾರ್ ಮಲ್ಲಿಕಾರ್ಜುನ ಅವರನ್ನು ಮಾನ್ಯ ಅತಿಥಿಗಳು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಇದೇ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಯೋಜಕರಾದ ಪ್ರೊ.ಜಿ.ಸಿ ಕಡ್ಡಿಪುಡಿ ಅವರು ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಗಳು ಹಾಗೂ  ಪ್ರಾಧ್ಯಾಪಕ ಸಂಯೋಜಕರು ಹಾಗೂ ವಿದ್ಯಾರ್ಥಿ ಕಾರ್ಯದರ್ಶಿಗಳನ್ನು ಪರಿಚಯಿಸಿದರು.

 ಐ ಕ್ಯೂ ಎ ಸಿ ಸಂಯೋಜಕರಾದಂತಹ ಪ್ರೊ. ಸಿ.ಕೆ ಹುಬ್ಬಳ್ಳಿ ಯವರು ವಂದಿಸಿದರು . ವಿದ್ಯಾರ್ಥಿನಿಯರ ಸಂಘದ ಸಂಯೋಜಕರಾದಂತಹ ಪ್ರೊ. ಜಯಲಕ್ಷ್ಮಿ ಯಂಡಿಗೇರಿ ಅವರು ಕಾರ್ಯಕ್ರಮ ನಿರೂಪಿಸಿದರು. 

 ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿದಾಸ  ಕಾಂಬಳೆ ಹಾಗೂ ರೇಣುಕಾ ಗಾಣಿಗೇರ ಹಾಗೂ ಮಹಾವಿದ್ಯಾಲಯದ ಸಮಸ್ತ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು,ಗಣ್ಯ ಮಾನ್ಯರು ಉಪಸ್ಥಿತರಿದ್ದರು.