ಕರ್ನಾಟಕ

ಕಣಗಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 51ನೇ ವಾರ್ಷಿಕ ಸರ್ವಸಾಧಾರಣ ಸಭೆ

ಮೂಲಕ News Desk | ಪ್ರಕಟಿಸಲಾಗಿದೆ September 2, 2026 September 2, 2026 | 04:27 AM 82 ವೀಕ್ಷಣೆಗಳು

ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದ 51ನೇ ವಾರ್ಷಿಕ ಸರ್ವಸಾಧಾರಣ ಸಭೆ ಸೆ.1ರಂದು ಕಣಗಲಾ ಗ್ರಾಮದ ಶ್ರೀ ಮಹಾದೇವ ಮಂದಿರದ ಸಭಾಭವನದಲ್ಲಿ ನಡೆಯಿತು.


ಸಭೆಯಲ್ಲಿ ಸಂಘದ ಆರ್ಥಿಕ ವ್ಯವಹಾರಗಳು, ಸದಸ್ಯರ ಹಿತಾಸಕ್ತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.


ಮಾರ್ಚ್ 31, 2026ರ ಅಂತ್ಯಕ್ಕೆ ಸಂಘವು ₹7,83,505 ಲಾಭ ಗಳಿಸಿದ್ದು, ₹77,09,650 ಶೇರು ಬಂಡವಾಳ, ₹68,26,998 ನಿಧಿಗಳು, ₹2,81,090 ಠೇವಣಿಗಳು ಹೊಂದಿದೆ. ಸಂಘದ ವಾರ್ಷಿಕ ವಹಿವಾಟು ₹7,96,04,188 ಆಗಿದ್ದು, ಒಟ್ಟು 1,026 ಸದಸ್ಯರು ಇದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತುಕಾರಾಮ ಲಕ್ಷ್ಮಣ ರೆಂಗಟೆ ಸಭೆಯಲ್ಲಿ ಮಾಹಿತಿ ನೀಡಿದರು.


ಸಂಘದ ಸದಸ್ಯರಿಗೆ ನೀಡಬೇಕಾದ ಲಾಭಾಂಶದ ಮೊತ್ತವನ್ನು ಕಟ್ಟಡ ನಿಧಿಗೆ ವರ್ಗಾಯಿಸುವಂತೆ ಸಭೆಯಲ್ಲಿ ಹಾಜರಿದ್ದ ರೈತರು ಒಕ್ಕೊರಲಿನಿಂದ ಮನವಿ ಮಾಡಿದರು ಎಂದು ತಿಳಿಸಿದರು.


ಸಭೆಗೆ ಸಂಘದ ಅಧ್ಯಕ್ಷ ಅಶೋಕ ಗುರುನಾಥ ಹಿರೇಕೊಡಿ, ಉಪಾಧ್ಯಕ್ಷ ವಿಜಯ ಬಾಳು ಪರೀಟ, ನಿರ್ದೇಶಕರಾದ ಹಣುಮಂತ ನಿಂಗಪ್ಪ ಗಜಬರೆ, ಶಂಕರ ದುಂಡಪ್ಪ ಶಿಂಧೆ, ವಿರುಪಾಕ್ಷ ಬಾಳಪ್ಪ ಖಣದಾಳೆ, ಪದ್ಮರಾಜ ರಾವಸಾಹೇಬ ಕಮತೆ, ಚಂದ್ರಕಾಂತ ಪ್ರಕಾಶ ಹವಾಲದಾರ, ಮಹಾಂತೇಶ ಮಹಾದೇವ ಕೋರವಿ, ತುಕಾರಾಮ ಮಾರುತಿ ನಾಯಿಕ, ವಿಜಯಮಾಲಾ ಪಾಂಡುರಂಗ ಪಾಟೀಲ್, ಶಾಲಿನಿ ಬಾಬುರಾವ್ ಹಿರೇಕೊಡಿ ಸೇರಿದಂತೆ ಅಕ್ಕತಾಯಿ ಮಾದೇವ ಮೋರೆ, ರಾವಸಾಹೇಬ ತಾತೋಬಾ ಕಮತೆ, ಸುನೀಲ ಹಾಗೂ ಗ್ರಾಮದ ಸುಮಾರು 550ಕ್ಕೂ ಹೆಚ್ಚು ರೈತರು ಮತ್ತು ಸದಸ್ಯರು ಉಪಸ್ಥಿತರಿದ್ದರು.


ವರದಿಗಾರರು: ಸಂತೋಷ ನಿರ್ಮಲೆ, ಪಬ್ಲಿ

ಕ್ ರೈಡ್