ಕಣಗಲಾ ಗ್ರಾಮ: ಆಷಾಢ ಏಕಾದಶಿ ಅಂಗವಾಗಿ ಕನ್ನಡ ಗ್ರಾಮದ ಕನ್ನಡ ಹಾಗೂ ಕನ್ನಡ-ಮರಾಠಿ ಪ್ರಾಥಮಿಕ ಕಾನ್ವೆಂಟ್ ಶಾಲೆಯಲ್ಲಿ ಶುಕ್ರವಾರ ಭಕ್ತಿಭಾವದಿಂದ ದಿಂಡಿ ಪಾದಯಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿಠ್ಠಲ-ರುಕ್ಮಿಣಿ ವೇಷಭೂಷಣ ಧರಿಸಿ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿದರೆ, ವಿವಿಧ ಸಾಂಸ್ಕೃತಿಕ ನೃತ್ಯಗಳು ಮತ್ತು ಭಜನೆಗಳ ಮೂಲಕ ಆಷಾಢ ಏಕಾದಶಿಯ ಮಹತ್ವವನ್ನು ಸಾರಿದರು. ದಿಂಡಿ ಪಾದಯಾತ್ರೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಭಕ್ತಿಮಯ ವಾತಾವರಣ ನಿರ್ಮಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಬಿ. ಹಿರೇಕೊಡಿ, ಉಪಾಧ್ಯಕ್ಷರಾದ ಶ್ರೀ ಬಿ. ಎಸ್. ಖಾಡೆ, ಆಡಳಿತ ಮಂಡಳಿ ಹಾಗೂ ಸಲಹಾ ಮಂಡಳಿಯ ಸದಸ್ಯರು, ಶಾಲೆಯ ಪ್ರಧಾನ ಗುರುಗಳಾದ ಶ್ರೀ ಜೆ. ಎಲ್. ಮಾಳಿ ಸೇರಿದಂತೆ ಸಹಶಿಕ್ಷಕರಾದ ಶ್ರೀ ಎ. ಎಂ. ಪಾಟೀಲ್, ಶ್ರೀಮತಿ ಎನ್. ಎಸ್. ತೊಡಕರ್, ಶ್ರೀಮತಿ ಎ. ಎ. ಬುವಾಚಾರಿ, ಶ್ರೀಮತಿ ಬಿ. ಜಿ. ಭಾಗನ್ನವರ್, ಶ್ರೀಮತಿ ಎಸ್. ಎ. ಕುಂಭಾರ, ಶ್ರೀಮತಿ ಕೆ. ಎಸ್. ಪಾಟೀಲ್, ಶ್ರೀಮತಿ ಜಿ. ಎಸ್. ಹಿರೇಕೊಡಿ, ಕು. ಪಿ. ಕೆ. ನಿಜನ್ನವರ್, ಶ್ರೀಮತಿ ಎಂ. ಯು. ಧಬಾಡೆ, ಶ್ರೀಮತಿ ಐ. ಸಿ. ಹಿರೇಕೊಡಿ, ಶ್ರೀಮತಿ ಪಿ. ಎಸ್. ಬೇಡಗೆ, ಶ್ರೀಮತಿ ಆರ್. ಪಿ. ನಾಯಿಕ, ಶ್ರೀಮತಿ ಡಿ. ಎಸ್. ಕಾಂಬಳೆ, ಕ್ಲರ್ಕ್ ಆರ್. ಕೆ. ನಿರ್ಮಲೆ, ಆಯಾಗಳಾದ ಶ್ರೀಮತಿ ಎಂ. ಎಂ. ಪಾಟೀಲ್ ಹಾಗೂ ಶ್ರೀಮತಿ ವಿ. ಆರ್. ಪಾಟೀಲ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಿಂಡಿ ಉತ್ಸವದ ಮಹತ್ವದ ಕುರಿತು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ಎಸ್. ಬಿ. ಹಿರೇಕೊಡಿ ಮಾತನಾಡಿ, ಆಷಾಢ ಏಕಾದಶಿಯಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳು ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಭಕ್ತಿ, ಶಿಸ್ತು ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದರು.
ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ಸಂಪ್ರದಾಯಗಳ ಪರಿಚಯವಾಗುವುದರ ಜೊತೆಗೆ ಸಂಸ್ಕೃತಿಯ ಬಗ್ಗೆ ಗೌರವವೂ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವು ಭಕ್ತಿ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂಗಮವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.