ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಸಾಮಾನ್ಯರಲ್ಲಿ ಸಾಮಾನ್ಯ ಉದ್ಯಮಿ ರಾಜಕಾರಣಿಯಾಗಿ ಸರಳ ವ್ಯಕ್ತಿತ್ವ ಹೊಂದಿರುವ ಹೆಚ್ ಜಿ ಸುರೇಶ್ ಸ್ಥಳೀಯವಾಗಿ ಮಾಡಿರುವ ಜನಸೇವೆಗೆ ಇಂದು ಜನರ ಅಪಾರ ಪ್ರೀತಿಗಳಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಶಾಸಕ ಅರ್ ಮಂಜುನಾಥ್ ಹೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ಜೆಡಿಎಸ್ ಪಕ್ಷದ ಜಿಬಿಎ ಆಕಾಂಕ್ಷಿ ಹೆಚ್ ಜಿ ಸುರೇಶ್ ರವರ ಜನ್ಮದಿನದ ಅಂಗವಾಗಿ 3000ಕ್ಕೂ ಹೆಚ್ಚು ಜನರಿಗೆ ಬಿರಿಯಾನಿ ಊಟದ ವ್ಯವಸ್ಥೆ ಮಾಡುವ ಮೂಲಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್ ಮಂಜುನಾಥ್ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಎಚ್ಎಂ ರಮೇಶ್ ಗೌಡ ಭಾಗವಹಿಸಿ ಜನ್ಮದಿನದ ಶುಭ ಕೋರಿದರು.
ನಂತರ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಮಾತನಾಡಿ ಹೆಗ್ಗನಹಳ್ಳಿ ಭಾಗದಲ್ಲಿ ಚಿರಪರಿಚಿತರಾಗಿರುವ ಹೆಚ್ ಜಿ ಸುರೇಶ್ ಜೆಡಿಎಸ್ ನಲ್ಲಿ ಅನೇಕ ವರ್ಷಗಳಿಂದ ನಿಷ್ಠೆಯಿಂದ ಸಕ್ರಿಯರಾಗಿ ದುಡಿಯುತ್ತಿದ್ದಾರೆ,ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ,ಜಿಬಿಎ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅವರಿಗೆ ಟಿಕೆಟ್ ಸಿಗುವ ಭರವಸೆಯಿದ್ದು ಜನಪ್ರತಿನಿಧಿಯಾಗುವ ಯೋಗವಿದೆ.
ಈ ಹುಟ್ಟುಹಬ್ಬದಂದು ಅವರ ಆಸೆಗಳು ಈಡೇರಲಿ ಎಂದು ಶುಭ ಕೋರಿದರು.
ಈ ಸಂಧರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ಶಿವಣ್ಣ, ಜೆಡಿಎಸ್ ಮುಖಂಡರಾ ಲಾರಿ ಮಂಜಣ್ಣ, ಬಿಜೆಪಿ ಮುಖಂಡ ಕಣ್ಣಪ್ಪ, ಶ್ರೀಗಂಧ ನಗರ ವಾರ್ಡಿನ ಜೆಡಿಎಸ್ ಅಧ್ಯಕ್ಷ ಹೇಮಗಿರಿ ಗೌಡ, ಶಿವಪುರ ವಾರ್ಡಿನ ಜಿಬಿಎ ಆಕಾಂಕ್ಷಿ ವಿ ಡಿ ಚಿಕ್ಕಣ್ಣ, ಸುಂಕದಕಟ್ಟೆ ಜೆಡಿಎಸ್ ಮುಖಂಡ ಹನುಮೇಗೌಡ, ಬಿ ಡಿ ರಂಜಿತ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿನಯ್ ಕುಮಾರ್ ಶಿವಣ್ಣ ,ಕಾಂಗ್ರೆಸ್ ಮುಖಂಡ ಎನ್ ರಮೇಶ್ ಗೌಡ, ರವಿಕುಮಾರ್ ಗೌಡ, ಲಕ್ಷ್ಮಿ ಸಾಗರ್, ವೀರಪ್ಪ ,ಶ್ರೀಕಂಠೇಗೌಡ, ರಾಜಗೋಪಾಲನಗರದ ರಂಗಣ್ಣ, ರಾಜು ಗೌಡ, ಚೇತನ್ ಗೌಡ ,ಇನ್ನು ಹಲವಾರು ಸ್ಥಳೀಯ ಮುಖಂಡರು ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನ್ಮದಿನದ ಶುಭ ಕೋರಿದರು.
ವರದಿ : ಪಬ್ಲಿಕ್ ರೈಡ್ ದೇವರಾಜ್