ಕರ್ನಾಟಕ

ಮೊಹರಂ ಹಿಂದೂ ಹಾಗೂ ಮುಸ್ಲಿಂ ಬಾಂಧವರ ಬಾವೈಕತೆಗೆ ಭದ್ರ ಬುನಾದಿಯಾಗಲಿ- ಬ.ನಾ.ರವಿ

ಮೂಲಕ News Desk | ಪ್ರಕಟಿಸಲಾಗಿದೆ June 26, 2026 June 26, 2026 | 12:54 PM 73 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ : ಮೊಹರಂ ಹಬ್ಬ ಹಿಂದೂ ಮತ್ತು ಮುಸ್ಲಿಮರು ಯಾವುದೇ ಭೇದಭಾವವಿಲ್ಲದೆ ಅತ್ಯಂತ ಸಡಗರದಿಂದ ಹಾಗೂ ಭಾವೈಕ್ಯತೆಯ ಸಂಕೇತವಾಗಿ ಆಚರಿಸಲಾಗುತ್ತದೆ ಎಂದು

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ,ಹಾಗೂ ಹೆಗ್ಗನಹಳ್ಳಿ ಕಾಂಗ್ರೆಸ್ ಜಿಬಿಎ ಆಕಾಂಕ್ಷಿ  ಬ.ನಾ.ರವಿ ತಿಳಿಸಿದರು.


ದಾಸರಹಳ್ಳಿ ವಿ.ಕ್ಷೇತ್ರದ ಹೆಗ್ಗನಹಳ್ಳಿಯಲ್ಲಿ

ಮುಸ್ಲಿಂ ಬಾಂಧವರು ಅಯೋಜಿಸಲಾಗಿದ್ದ ಮೊಹರಂ ಆಚರಣೆಯಲ್ಲಿ ಹೆಗ್ಗನಹಳ್ಳಿ ಕಾಂಗ್ರೆಸ್‌ ಮುಖಂಡ ಬ.ನಾ.ರವಿ ರವರು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿ ಮುಸ್ಲಿಂ ಗುರುಗಳ ಅರ್ಶೀವಾದ ಪಡೆದರು.


ತ್ಯಾಗ ಬಲಿದಾನ ಮತ್ತು ಇತಿಹಾಸದ ಮಹತ್ವವನ್ನು ಸಾರುವ ಮೊಹರಂ ಹಬ್ಬ ಈ ತಿಂಗಳಲ್ಲಿ ಧಾರ್ಮಿಕ ಆಚರಣೆ ಇದಾಗಿದ್ದು ಹಿಂದೂ ಹಾಗೂ ಮುಸ್ಲಿಂ ಬಾಂಧವರ ಬಾವೈಕತೆಗೆ ಭದ್ರ ಬುನಾದಿಯಾಗಲಿ ಎಂದು ಶುಭಕೋರಿದರು.


ಈ ಸಂಧರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಎ.ವಿ ರಂಗರಾಜ್,ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಮೈಕಲ್ ಬಾಬು ,ಪಶ್ಚಿಮ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಾಜು. ಉಮೇಶ್ ಹೈದರಾಲಿ,ಮುನ್ನ ,ಶಪೀ, ಆಲಿ ಇದ್ದರು.

ವರದಿ : ಪಬ್ಲಿಕ್ ರೈಡ್ ದೇವರಾಜ್