ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ ಸಮೀಪದ ವಿಡಿಯಾ ಸ್ಕೂಲ್ ಬಸ್ ನಿಲ್ದಾಣದ ಹತ್ತಿರ ಕ್ಷೇತ್ರದ ಬಿಜೆಪಿ ವತಿಯಿಂದ ಶಾಸಕ ಎಸ್. ಮುನಿರಾಜು ಅವರ ನೇತೃತ್ವದಲ್ಲಿ ತುರ್ತುಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದ ಕಾಂಗ್ರೆಸ್ ಪಕ್ಷ ದೇಶದ ಪರ ಧ್ವನಿ ಎತ್ತಿದ ಲಕ್ಷಾಂತರ ಜನರನ್ನು ಜೈಲಿಗೆ ತಳ್ಳಿ ವಿಕೃತಿ ಮೆರೆಯಲಾಗಿತ್ತು. ಇಂತಹ ಅಸಂವಿಧಾನಿಕವಾಗಿ ತುರ್ತು ಪರಿಸ್ಥಿತಿ ಹೇರಿದ ದೇಶದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ ಮತ್ತು
ಕಾಂಗ್ರೆಸ್‌ನ ಈ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಇಟ್ಟ ದಿನ, ಸಂವಿಧಾನ ಹತ್ಯಾದಿವಸ್ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸೋಮಶೇಖರ್, ಸುಜಾತ ಮುನಿರಾಜು, ಉಮಾದೇವಿ ನಾಗರಾಜು, ಬಿ.ಎಂ. ನಾರಾಯಣ್, ಬಿ.ಎಸ್. ಅನಿಲ್ ಕುಮಾರ್, ಭರತ್ ಸೌಂದರ್ಯ, ಟಿ. ಶಿವಕುಮಾರ್, ಗುರುಪ್ರಸಾದ್, ವಿನೋದ್ ಗೌಡ, ಮುರಳಿ ಮುಂತಾದವರಿದ್ದರು.
ವರದಿ : ಪಬ್ಲಿಕ್ ರೈಡ್ ದೇವರಾಜ್