ಕರ್ನಾಟಕ

ಜನರ ಸಮಸ್ಯೆ ಬಗೆಹರಿಸಿದ ಸಾರ್ಥಕತೆ : ಹೆಸ್ಕಾಂ ಅಧ್ಯಕ್ಷ ಖಾದ್ರಿ

ಮೂಲಕ News Desk | ಪ್ರಕಟಿಸಲಾಗಿದೆ June 19, 2026 June 19, 2026 | 04:29 PM 3 ವೀಕ್ಷಣೆಗಳು

ಅಪಾಯಕಾರಿ 33 ಕೆವಿ ವಿದ್ಯುತ್‌ ಲೈನ್‌ ಸ್ಥಳಾಂತರ


ಶಿಗ್ಗಾಂವಿ, ಜೂ 19, 2026:ಪಟ್ಟಣದ ಮೊಲಾಲಿ ನಗರದ ಜನರ ಹಲವು ವರ್ಷಗಳಿಂದ ಇದ್ದ ಸಮಸ್ಯೆ ಬಗೆಹರಿಸಿದ ಸಾರ್ಥಕ ಸೇವೆಯ ಮನೋಭಾವ ನನ್ನಲ್ಲಿ ಮೂಡಿದೆ ಎಂದು ಹೆಸ್ಕಾಂನ ಅಧ್ಯಕ್ಷರಾದ ಸೈಯದ್‌ ಅಜೀಮ್‌ಪೀರ್‌ ಎಸ್‌ ಖಾದ್ರಿ ಅವರು ಹೇಳಿದ್ದಾರೆ. 


ಮೊಲಾಲಿ ನಗರದ 33 ಕೆ.ವಿ. ವಿದ್ಯುತ್‌ ಲೈನ್‌ ಸ್ಥಳಾಂತರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮೊಲಾಲಿ ನಗರದ ಮನೆಗಳ ಮೇಲೆ 33 ಕೆ.ವಿ ವಿದ್ಯುತ್‌ ಲೈನ್‌ ಹಾದು ಹೋಗಿದ್ದವು. ಮನೆಗಳ ಛಾವಣಿಗಳ ಮೇಲೆ ಹತ್ತಿದರೆ ಕೈಗೆಟುಕ ಅಂತರದಲ್ಲಿ ಲೈನ್‌ಗಳಿದ್ದವು. ಪರಿಣಾಮ ಹಲವು ಬಾರಿ ವಿದ್ಯುತ್‌ ಅವಘಡಗಳ ಸಂಭವಿಸಿ ಪ್ರಾಣಹಾನಿಯಂತಹ ಘಟನೆಗಳು ಕೂಡ ನಡೆದಿದ್ದವು. ಇದೊಂದು ಗಂಭೀರ ಸಮಸ್ಯೆಯಾಗಿತ್ತು. ಇಲ್ಲಿನ ಜನರು ಸದಾ ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದರು. ಇದೀಗ ಸಮಸ್ಯೆ ಬಗೆಹರಿಸಲಾಗಿದೆ," ಎಂದರು. 


"ಮೊಲಾಲಿ ನಗರವಾಸಿಗಳು ತಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದರು. ನಾನು ಕೂಡ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದೆ. ಕಳೆದ ಹಲವು ವರ್ಷಗಳಿಂದ ಇದ್ದ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರೂ.38 ಲಕ್ಷ ಅನುದಾನದಲ್ಲಿ ವಿದ್ಯುತ್‌ ಲೈನ್‌ಗಳನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯ ಮಾಡಿದ್ದೇನೆ. ಈ ಮೂಲಕ ಈ ಜನರ ಬಹು ವರ್ಷಗಳ ಸಮಸ್ಯೆಯನ್ನು ಬಗೆಹರಿಸಿದ ಸಂತೋಷ ನನಗಾಗಿದೆ," ಎಂದು ಹೇಳಿದರು.


ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು, ಪಟ್ಟಣದ ಹಿರಿಯರು, ಮುಖಂಡರು ಸೇರಿದಂತೆ ಹಲವು ಉಪಸ್ಥಿತರಿದ್ದರು.