ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ:' ಬಡ ಜನರಿಗೆ ನೆರವಾಗಲು ಮತ್ತು ಸಮಾಜ ಸೇವೆಗೆಂದೇ ನೇಸರ ಫೌಂಡೇಶನ್ ಸ್ಥಾಪಿಸಿರುವುದು ಶ್ಲಾಘನೀಯ ಕಾರ್ಯ'ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಹೆಸರಘಟ್ಟ ಮುಖ್ಯ ರಸ್ತೆಯ ಜನಪ್ರಿಯ ಅಪಾರ್ಟ್ಮೆಂಟ್ ಬಸ್ ನಿಲ್ದಾಣದ ಹತ್ತಿರ ವಿಸ್ಟಾ ಸೂಟ್ಸ್ ಬಿಲ್ಡಿಂಗ್ ನಲ್ಲಿ ನೇಸರ ಫೌಂಡೇಶನ್ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಏಳಿಗೆಗೆ ಮತ್ತು ಬಡಜನರ ಬಾಳಿಗೆ ಬೆಳಕಾಗಿ ಕೊಡಗೆ ನೀಡಿದಾಗ ಸಿಗುವ ತೃಪ್ತಿ ತಮ್ಮ ಮನೆಗೆ ಮಾಡಿದ ಕಾರ್ಯದಲ್ಲಿ ಸಿಗುವುದಿಲ್ಲ. ಆದ್ದರಿಂದ ಸಂಸ್ಥೆ ನಿಂತ ನೀರಾಗದೆ ಹರಿಯುವ ನೀರಿನಂತೆ ಕ್ರಿಯಾಶೀಲವಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಿ'ಎಂದು ಸಲಹೆ ನೀಡಿದರು.
ನೇಸರ ಫೌಂಡೇಶನ್ ಸಂಸ್ಥಾಪಕ ಬಿ.ಎಸ್. ಅನಿಲ್ ಕುಮಾರ್ ಮಾತನಾಡಿ,' ಈಗಾಗಲೇ ಆರೋಗ್ಯ ಶಿಬಿರ, ರಕ್ತದಾನ ಶಿಬಿರ,ಮರಬಿದ್ದ ಜಾಗದಲ್ಲಿ ಗಿಡ ನೆಟ್ಟು ಪೋಷಣೆ ಕಾರ್ಯ ಕೈಗೊಂಡಿದ್ದೇವೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು, ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತೇವೆ'ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸುಜಾತ ಮುನಿರಾಜು, ಸ್ವಪ್ನ, ಮಾಜಿ ಉಪಮೇಯರ್ ಹರೀಶ್ ನೂರಾರು ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.
ವರದಿ : ಪಬ್ಲಿಕ್ ರೈಡ್ ದೇವರಾಜ್