ಕರ್ನಾಟಕ

ಪ್ರಧಾನಿ ಮಂತ್ರಿಗಳ 12 ವರ್ಷ ಪೂರೈಕೆಗೆ ರಕ್ತದಾನ ಮತ್ತು ಉಚಿತ ಆರೋಗ್ಯ ಶಿಬಿರ

ಮೂಲಕ News Desk | ಪ್ರಕಟಿಸಲಾಗಿದೆ June 15, 2026 June 15, 2026 | 01:38 PM 8 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್: ಪೀಣ್ಯ ದಾಸರಹಳ್ಳಿ ಸಮೀಪದ ಹೆಸರಘಟ್ಟ ಮುಖ್ಯ ರಸ್ತೆಯ ಜನಪ್ರಿಯ ಅಪಾರ್ಟ್ಮೆಂಟ್ ಬಸ್ ನಿಲ್ದಾಣದ ಹತ್ತಿರ ಪ್ರಧಾನಿ ನರೇಂದ್ರ ಮೋದಿ ಅವರು 12 ವರ್ಷಗಳ ಕಾಲ ಯಶಸ್ವಿ ಆಡಳಿತ ನಡೆಸಿದ ಪ್ರಯುಕ್ತ ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೃಷ್ಣ ನೇತ್ರಾಲಯ ಮತ್ತು ನೇಸರ ಫೌಂಡೇಶನ್ ವತಿಯಿಂದ ಆಯೋಜಿಸಲಾದ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಶಾಸಕ ಎಸ್. ಮುನಿರಾಜು ಪ್ರಶಂಸನಾ ಪತ್ರ,ಹಣ್ಣಿನ ಕಿಟ್ ಮತ್ತು ಕನ್ನಡಕ ನೀಡಿದರು. ಹಾಗೆಯೇ ಶೇಕರಿಸಿದ ರಕ್ತವನ್ನು ಸಪ್ತಗಿರಿ ಆಸ್ಪತ್ರೆಗೆ ನೀಡಿದರು. ನೇಸರ ಫೌಂಡೇಶನ್ ಅಧ್ಯಕ್ಷ ಬಿ.ಎಸ್. ಅನಿಲ್ ಕುಮಾರ್, ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತ ಮುನಿರಾಜು, ಭಾಗ್ಯಮ್ಮ, ಉಮಾದೇವಿ ನಾಗರಾಜು, ಸ್ವಪ್ನ, ಸಿ.ಎನ್. ದಯಾನಂದ್, ಬಿ.ಎಂ. ನಾರಾಯಣ್ ಮುಂತಾದವರಿದ್ದರು.


ವರದಿ : ಪಬ್ಲಿಕ್ ರೈಡ್ ದೇವರಾಜ್