ಕರ್ನಾಟಕ

ಜಮೀನಿನ ಕಾಪೌಂಡ್ ಒಡೆದು ಹಾಕಿದ ದುಷ್ಕರ್ಮಿಗಳು ಬಂಧಿಸುವಂತೆ ಠಾಣೆ ಮೆಟ್ಟಿಲೇರಿದ ಮಾಲೀಕ.

ಮೂಲಕ News Desk | ಪ್ರಕಟಿಸಲಾಗಿದೆ June 15, 2026 June 15, 2026 | 12:41 PM 88 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಜಮೀನು ನನ್ನ ಕ್ರಯಕ್ಕೆ ಬಂದು ಹಲವು ವರ್ಷಗಳೇ ಕಳೆದಿವೆ ಆದರೆ ನಾನೇ  ಮಾಲೀಕ ಅಂತ ಹೇಳಿಕೊಂಡು ಅಕ್ರಮವಾಗಿ ನಾಲ್ಕೈದು ಭಾರಿ ಜಮೀನನ ಹತ್ತಿರ ಬಂದು ರಾತ್ರೋರಾತ್ರಿ ಕಾಂಪೌಂಡ್ ಒಡೆದು ಹಾಕಿ ಜಮೀನನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದು ಈಗಾಗಲೇ ಅವರ ಹಲವು ಮೊಕ್ಕದೊಮ್ಮೆಗಳು ದಾಖಲಾಗಿವೆ.ನ್ಯಾಯಾಲಯದಲ್ಲಿ ಕೂಡ 

ನನ್ನ ಪರವಾಗಿ ತಡೆಯಾಜ್ಞೆ ಕೂಡ ಬಂದಿದೆ.ಅದರೂ ಕಾನೂನು ಗಾಳಿಗೆ ತೂರಿ ಅಕ್ರಮವೆಸುಗುತ್ತಿದ್ದಾರೆ ಎಂದು ಜಮೀನು ಮಾಲೀಕ ಉಮೇಶ್ ಆರೋಪಿಸಿದರು.


ದಾಸರಪುರ ಹೋಬಳಿ ಲಕ್ಷ್ಮೀಪುರ ಗ್ರಾಮಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿರುವ  ಸರ್ವೆನಂ 119/1ರಲ್ಲಿ12ಗುಂಟೆ ಹಾಗೂ 120/1 ರಲ್ಲಿ 08 ಗುಂಟೆ  ಜಮೀನು  ಉಪನೋಂದಣಿ ಕಚೇರಿಯ ಡಿ.ಎಸ್.ಪಿ -1-07528/2010-11 ನೇ ನಂಬರಾಗಿ ನೋಂದಣಿಯಾಗಿದ್ದು ಡಿ,ಎಸ್.ಪಿ ಡಿ - 85  ನೇ ದಾಖಲಾಗಿ ಉಮೇಶ್ ಎಸ್ ಎನ್ ರವರಿಗೆ  ಕ್ರಯವಾಗಿದ್ದು ಸದರಿ ಜಾಗಕ್ಕೆ ಮೂಲ ಮಾಲೀಕ ಅನಗತ್ಯ ಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಠಾಣೆ ಮಟ್ಟಿಲೆರಿದ್ದಾರೆ. 


 ಮೂಲ ಮಾಲೀಕ ಆಸ್ತಿ ಕ್ರಯದ ನಂತರವೂ ಜಮೀನು ಲಪಾಟಯಿಸಲು ರೌಡಿಗಳನ್ನು ಕರೆರತಂದು ನಮಗೆ ತೊಂದರೆ ಕಿರುಕುಳ ನೀಡುತ್ತಿದ್ದಾನೆ.ರಿಯಲ್ ಎಸ್ಟೇಟ್ ದಂದೆಯಿಂದ ಜಮೀನುಗಳನ್ನು ಹಲವು ಭಾರಿ ಮಾರಾಟ ಮಾಡಲು ಯತ್ನಿಸಿದರಿಂದ ಪೋಲೀಸ್ ಠಾಣೆಯಲ್ಲಿ ದೂರುದಾಖಲಾಗಿವೆ.

ಕೂಡಲೇ ಇಂತವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅಗ್ರಹಿಸಿದರು.   

ವರದಿ : ಪಬ್ಲಿಕ್ ರೈಡ್ ದೇವರಾಜ್