ಕರ್ನಾಟಕ

ಮಳವಳ್ಳಿ ಶಿವಣ್ಣ ರಿಂದ ವಿಧಾನಪರಿಷತ್ ಗೆ ನಾಮಪತ್ರ ಸಲ್ಲಿಕೆ

ಮೂಲಕ News Desk | ಪ್ರಕಟಿಸಲಾಗಿದೆ June 8, 2026 June 8, 2026 | 12:57 PM 6 ವೀಕ್ಷಣೆಗಳು

ಪಬ್ಲಿಕ್ ರೈಡ್ ನ್ಯೂಸ್ : ಪೀಣ್ಯ ದಾಸರಹಳ್ಳಿ : ರಾಜ್ಯ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಸೌಧದಲ್ಲಿಮಳವಳ್ಳಿ ಶಿವಣ್ಣ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು ನಾನು ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಂಡು ಪಕ್ಷದ ವರಿಷ್ಠರು ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿರುವುದನ್ನು ಗಮನಿಸಿ ನನ್ನನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿದ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹಾಗೂ  ಪಕ್ಷದ ಎಲ್ಲಾ ಅಬಾರಿಯಾಗಿದ್ದೇನೆ ಎಂದು ತಿಳಿಸಿದರು.

 

ಈ ಸಂಧರ್ಭದಲ್ಲಿ ಶ್ರೀಗಂಧ ನಗರದ ಜಿಬಿಎ ಆಕಾಂಕ್ಷಿ ಎಂವಿ ಸೋಮಶೇಖರ್ ಏರ್ಟೆಲ್ ಸೋಮಣ್ಣ ಚಲನಚಿತ್ರ ನಿರ್ಮಾಪಕರು ಹಾಗೂ ಯುವ ಮುಖಂಡರಾದ ಜನಾರ್ದನ್ ಮಳವಳ್ಳಿ ಕಾಂಗ್ರೆಸ್ ಮುಖಂಡರಾದ  ಸಿದ್ದೇಗೌಡ, ಸುರೇಶ್ , ಹಾಜರಿದ್ದರು.


ವರದಿ, ಪಬ್ಲಿಕ್ ರೈಡ್ ದೇವರಾಜ್