ಕರ್ನಾಟಕ

ವಿಶ್ವ ಪರಿಸರ ದಿನಾಚರಣೆ: ರಾಜಾಜಿನಗರ ಮೆಟ್ರೋ ನಿವಾಸಿಗಳ ಕಲ್ಯಾಣ ಸಂಘದಿಂದ ಜಾಗೃತಿ ಕಾರ್ಯಕ್ರಮ

ಮೂಲಕ News Desk | ಪ್ರಕಟಿಸಲಾಗಿದೆ June 8, 2026 June 8, 2026 | 02:49 AM 8 ವೀಕ್ಷಣೆಗಳು

ಪೀಣ್ಯ ದಾಸರಹಳ್ಳಿ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ರಾಜಾಜಿನಗರ ಮೆಟ್ರೋ ನಿವಾಸಿಗಳ ಕಲ್ಯಾಣ ಸಂಘದ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರದ ಟ್ರಾಫಿಕ್ ಮತ್ತು ಪ್ಲಾನಿಂಗ್ ವಿಭಾಗದ ಎಸಿಪಿ ಶ್ರೀಮತಿ ಕವಿತಾ ಕರಿಯಪ್ಪ ಭಾಗವಹಿಸಿ ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರ ಜವಾಬ್ದಾರಿಗಳ ಕುರಿತು ಮಾತನಾಡಿದರು.


ಇದೇ ವೇಳೆ ಶ್ರೀಮತಿ ಆರ್ತಿ ತೊಪ್ಪ ಅವರು ತ್ಯಾಜ್ಯ ನಿರ್ವಹಣೆ, ಮರುಬಳಕೆ ಹಾಗೂ ಸುಸ್ಥಿರ ಜೀವನಶೈಲಿಯ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.


ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಬದುಕಿನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.


ವರದಿ: ದೇವರಾಜ್, ಪಬ್ಲಿಕ್ ರೈಡ್