ಕರ್ನಾಟಕ

ರಾಯಪುರದಲ್ಲಿ ಎಸ್ ಜೆ ಎಂ ವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಮೂಲಕ News Desk | ಪ್ರಕಟಿಸಲಾಗಿದೆ June 5, 2026 June 5, 2026 | 01:49 PM 4 ವೀಕ್ಷಣೆಗಳು

ರಾಯಪುರದಲ್ಲಿರುವ ಎಸ್ ಜೆ ಎಂ ವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿಂದು ವಿಶ್ವ ಪರಿಸರ ದಿನಾಚರಣೆಯನ್ನು ಎನ್ ಎಸ್ ಎಸ್ ಘಟಕದ ಆಶ್ರಯದಲ್ಲಿ ಆಚರಿಸಲಾಯಿತು.


 ಈ ಸಂದರ್ಭದಲ್ಲಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪುಷ್ಪಾ ಬಸನ್ ಗೌಡರ ಅವರು ಪ್ರಸ್ತುತ ದಿನಗಳಲ್ಲಿ ಪರಿಸರ ರಕ್ಷಣೆ ನಮ್ಮೆಲ್ಲರ  ಆದ್ಯತೆಯಾಗಲಿ. ಪರಿಸರವನ್ನು ಕಾಪಾಡುವುದು ಎಂದರೆ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಕಾಪಾಡಿದಂತೆ. ಈ ಬದಲಾವಣೆ ಇಂದಿನಿಂದಲೇ ಆರಂಭವಾಗಲಿ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರವಿಲ್ಲದೆ ಬದುಕಿಲ್ಲ. ಪರಿಸರವನ್ನು ಕಾಪಾಡಿದರೆ ಜೀವ ಜಗತ್ತು ಬದುಕುತ್ತದೆ ಎಂದರು.


 ಮಾತನಾಡಿದ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ. ತೇಜಸ್ವಿನಿ ಅರಳಿಕಟ್ಟಿ ಅವರು  ಮಕ್ಕಳಂತೆ ಗಿಡಗಳನ್ನು ಪ್ರೀತಿಸುವ ಮನಸ್ಸು ನಮ್ಮೆಲ್ಲರದಾಗಲಿ . ಅದರಲ್ಲೂ ಎನ್ ಎಸ್ ಎಸ್ ಸ್ವಯಂಸೇವಕರು ಪರಿಸರ ರಕ್ಷಣೆಯತ್ತ ತಮ್ಮನ್ನು ತೊಡಗಿಸಿಕೊಳ್ಳಿ. ಪ್ರತಿ ಸಂತೋಷದ ಕ್ಷಣಗಳಲ್ಲಿ ಗಿಡವನ್ನು ನೆಡುವ ಮನಸ್ಸು ಮಾಡಿ. ಪರಿಸರ ಕಾಪಾಡಿ ಎಂದರು.


ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಮಸ್ತ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.