ಕರ್ನಾಟಕ

ಕಣಗಲಾ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ

ಮೂಲಕ News Desk | ಪ್ರಕಟಿಸಲಾಗಿದೆ April 14, 2026 April 14, 2026 | 12:21 PM 121 ವೀಕ್ಷಣೆಗಳು

ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಇಂದು (14-04-2026) ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮ ಪಂಚಾಯತ್ ಕಚೇರಿ, ಸರ್ಕಾರಿ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಲಕರ ವಸತಿ ನಿಲಯ ಹಾಗೂ ತಲಾಠಿ ಕಚೇರಿಗಳಲ್ಲಿ ಕಾರ್ಯಕ್ರಮಗಳು ನಡೆದವು.


ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸೂಚಿಸಿದರು. ಸಮಾನತೆ ಮತ್ತು ನ್ಯಾಯದ ಸಂದೇಶ ಸಾರುವ ಈ ದಿನದ ಮಹತ್ವವನ್ನು ಎಲ್ಲರೂ ಒತ್ತಿ ಹೇಳಿದರು.


ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಪತ್ರಕರ್ತರು ಭಾಗವಹಿಸಿದರು.


ಬೆಳಗಾವಿ ವರದಿಗಾರರು: ಸಂತೋಷ ನಿರ್ಮಲೆ